ವೆಬ್ ಸೈಟ್ ಗೆ ಅಶ್ಲೀಲ ವಿಡಿಯೋ ಅಪ್ ಲೋಡ್ ಮಾಡಿದ ನಟಿಯ ಬಂಧನ | ನಟಿಯ ಬಳಿ ಇತ್ತು 87 ವಿಡಿಯೋಗಳು - Mahanayaka
11:18 PM Wednesday 11 - December 2024

ವೆಬ್ ಸೈಟ್ ಗೆ ಅಶ್ಲೀಲ ವಿಡಿಯೋ ಅಪ್ ಲೋಡ್ ಮಾಡಿದ ನಟಿಯ ಬಂಧನ | ನಟಿಯ ಬಳಿ ಇತ್ತು 87 ವಿಡಿಯೋಗಳು

07/02/2021

ಮುಂಬೈ: ಖ್ಯಾತ ನಟಿಯೊಬ್ಬರು ಅಶ್ಲೀಲ ಚಿತ್ರಗಳನ್ನು ವೆಬ್ ಸೈಟ್ ಗೆ ಅಪ್ ಲೋಡ್ ಮಾಡುತ್ತಿದ್ದ ಆರೋಪದಲ್ಲಿ ಬಂಧಿತರಾಗಿದ್ದು, ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ನಟಿಯನ್ನು ಬಂಧಿಸಿದ್ದಾರೆ.

ಗಂಧಿ ಬಾತ್ ಖ್ಯಾತಿಯ ನಟಿ ಗೆಹಾನಾ ವಸಿಷ್ಠ ಯಾನೆ ವಂದನಾ ತಿವಾರಿ ಬಂಧಿತ ನಟಿಯಾಗಿದ್ದು,  ಗಂಧಿ ಬಾತ್ ವೆಬ್ ಸೀರಿಸ್ ಮೂಲಕ ಖ್ಯಾತಿ ಪಡೆದಿದ್ದ ನಟಿ, ಮಿಸ್ ಏಷ್ಯಾ ಬಿಕನಿ ವಿನ್ನರ್ ಕೂಡ ಆಗಿದ್ದರು. ಇದಲ್ಲದೇ ಕೆಲವು ತೆಲುಗು ಸಿನಿಮಾ ಹಾಗೂ ಜಾಹೀರಾತುಗಳಲ್ಲಿಯೂ ನಟಿಸಿದ್ದರು.

ಗೆಹಾನಾ ವೆಬ್ ಸೈಟ್ ನಲ್ಲಿ ಅಶ್ಲೀಲ ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಿದ್ದ ಆರೋಪದಲ್ಲಿ ಅವರ ಮದ್ ಐಎಂಡ್ ಬಂಗಲೆಯ ಮೇಲೆ ಕ್ರೈಂ ವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ. ಈವರೆಗೆ ಗೆಹಾನಾ ಅವರ ಅಶ್ಲೀಲ ವೆಬ್ ಸೈಟ್ ನಲ್ಲಿ 87 ವಿಡಿಯೋಗಳನ್ನು ಅಪ್ ಲೋಡ್ ಮಾಡಲಾಗಿದೆ. ಈ ವೆಬ್ ಸೈಟ್ ಗೆ ಸಬ್ಸ್ ಕ್ರೈಬ್ ಆಗಲು 2 ಸಾವಿರ ರೂ. ಪಾವತಿಸಬೇಕು ಎಂದು ಹೇಳಲಾಗಿತ್ತು.

ಇನ್ನೂ ಕೃತ್ಯಕ್ಕೆ ಗೆಹಾನಾಗೆ ಸಹಾಯ ಮಾಡುತ್ತಿದ್ದ, ನಿರ್ದೇಶಕಿ ಹಾಗೂ ನಿರ್ಮಾಪಕಿ  ಯಾಸ್ಮೀನ್ ಬೇಗ್ ಖಾನ್, ಗ್ರಾಫಿಕ್ಸ್ ಡಿಸೈನರ್ ಪ್ರತಿಭಾ ನಲವಾಡೆ,  ನಟ ಮೋನು ಗೋಪಾಲದಾಸ್ ಜೋಶಿ, ಅಸಿಸ್ಟೆಂಟ್ ಭಾನು ಸೂರ್ಯಂ ಹಾಗೂ ಕ್ಯಾಮರಾಮೆನ್ ಮೊಹಮ್ಮದ್ ಆಸಿಫ್ ಇವರನ್ನೂ ಬಂಧಿಸಲಾಗಿದೆ. ಸದ್ಯ ಬಂಧಿತರ ಪೈಕಿ ಮೂರು ಬ್ಯಾಂಕ್ ಅಕೌಂಟ್ ಗಳಲ್ಲಿ ಇದ್ದ 36 ಲಕ್ಷ ರೂಪಾಯಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ