ನಟಿ ಶಕೀಲ ಸಾವಿನ ಸುಳ್ಳು ಸುದ್ದಿ ಹರಡಿದ ಯುವಕನಿಗೆ ಅವರು ಹೇಳಿದ್ದೇನು ಗೊತ್ತಾ?
ಮುಂಬೈ: ನಟಿ ಶಕೀಲಾ ಅವರ ಅನಾರೋಗ್ಯ ಮತ್ತು ಸಾವಿನ ಸುದ್ದಿಯನ್ನು ವ್ಯಕ್ತಿಯೋರ್ವ ಹರಿಯ ಬಿಟ್ಟಿದ್ದು, ಈ ಸಂಬಂಧ ಸ್ವತಃ ನಟಿ ಶಕೀಲ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದು, ತನ್ನ ಸಾವಿನ ಸುದ್ದಿಯನ್ನು ಹರಡಿದ ವ್ಯಕ್ತಿಗೆ ಥ್ಯಾಂಕ್ಸ್ ಹೇಳಿದ್ದಾರೆ.
ಬಹುತೇಕ ಖ್ಯಾತ ನಟ-ನಟಿಯರ ಸಾವಿನ ಸುದ್ದಿಯನ್ನು ಹರಡಿದ ಸಂದರ್ಭದಲ್ಲಿ ಅವರು ಗರಂ ಆಗಿ ಉತ್ತರಿಸುವುದು, ಕೇಸು ದಾಖಲಿಸುವುದು ಮೊದಲಾದವುಗಳು ನಡೆದಿವೆ. ಆದರೆ, ನಟಿ ಶಕೀಲ ಮಾತ್ರ ತನ್ನ ಸಾವಿನ ಸುದ್ದಿಯನ್ನು ಹರಡಿದ ವ್ಯಕ್ತಿಗೆ ಧನ್ಯವಾದ ಹೇಳಿದ್ದಾರೆ.
ಜುಲೈ 29ರಂದು ಶಕೀಲಾ ಅವರು ವಿಡಿಯೋವೊಂದರ ಮೂಲಕ ಮಾತನಾಡಿ, ನನ್ನ ಸಾವಿನ ಸುದ್ದಿ ಹರಿದಾಡುತ್ತಿದೆ ಎನ್ನುವುದನ್ನು ಕೇಳಿದೆ. ಆದರೆ ನನಗೇನೂ ಆಗಿಲ್ಲ. ನಾನು ಆರೋಗ್ಯದಿಂದ ಸಂತೋಷದಿಂದಿದ್ದೇನೆ. ನನ್ನ ಸಾವಿನ ಸುದ್ದಿ ಸುಳ್ಳು ಸುದ್ದಿಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ನನ್ನ ಸಾವಿನ ಸುದ್ದಿಯಿಂದಾಗಿ ನನಗೆ ಬಹಳಷ್ಟು ಜನರು ಕರೆ ಮಾಡಿ, ವಿಚಾರಿಸಿದರು. ನನ್ನ ಮೇಲೆ ಅವರ ಪ್ರೀತಿ ತೋರಿಸಿದರು. ನನ್ನ ಬಗ್ಗೆ ಸುಳ್ಳು ಸುದ್ದಿ ಹರಡಿದ ವ್ಯಕ್ತಿಗೆ ನಾನು ತುಂಬಾ ಥ್ಯಾಂಕ್ಸ್ ಹೇಳುತ್ತೇನೆ. ಯಾಕೆಂದರೆ, ಆತ, ನೀವೆಲ್ಲರೂ ನನ್ನ ಬಗ್ಗೆ ಮತ್ತೊಮ್ಮೆ ಯೋಚಿಸುವಂತೆ, ಚಿಂತಿಸುವಂತೆ ಮಾಡಿದ್ದಾನೆ ಎಂದು ಶಕೀಲ ಹೇಳಿದರು.
ಇನ್ನಷ್ಟು ಸುದ್ದಿಗಳು…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕಠಿಣ ಕ್ರಮಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಸೂಚನೆ
ರಸ್ತೆಯಲ್ಲಿ ಅಡ್ಡನಿಂತು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ವ್ಯಕ್ತಿಗೆ ಧರ್ಮದೇಟು!
ಕುರಿ, ಕೋಳಿ, ಮೀನಿನ ಬದಲು ಗೋಮಾಂಸ ಸೇವಿಸಿ ಎಂದು ಕರೆ ನೀಡಿದ ಬಿಜೆಪಿ ಸಚಿವ!
ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ರಕ್ತದಾನ ಮಾಡಿದ 75 ಪೊಲೀಸರು
ಬಿಜೆಪಿಗೆ ಅಧಿಕಾರ ಮಾತ್ರ ಬೇಕು, ಜನರ ಯೋಗ ಕ್ಷೇಮ ಬೇಡ | ಸತೀಶ್ ಜಾರಕಿಹೊಳಿ