ಸಂಸತ್ ನಲ್ಲಿ ಅದಾನಿ ಸದ್ದು: ಪ್ರತಿಪಕ್ಷ ನಾಯಕರಿಂದ ಪ್ರತಿಭಟನೆ
ಇಂದು ಸಂಸತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೌತಮ್ ಅದಾನಿ ಒಟ್ಟಿಗೆ ಓಡಾಡಿದರು. ಈ ಓಡಾಟ ಪ್ರತಿಪಕ್ಷಗಳ ಪ್ರತಿಭಟನೆಯ ಭಾಗ ಆಗಿತ್ತು. ಅದಾನಿ ಒಳಗೊಂಡಿರುವ ಅಮೆರಿಕದ ಲಂಚ ಪ್ರಕರಣದ ತನಿಖೆಗೆ ಒತ್ತಾಯಿಸಿ ಪ್ರತಿಪಕ್ಷ ನಾಯಕರು ಸಂಸತ್ತಿನಲ್ಲಿ ಇಂದು ಕೂಡ ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ಸಂಸದರಾದ ಮಾಣಿಕ್ಕಂ ಟ್ಯಾಗೋರ್ ಮತ್ತು ಸಪ್ತಗಿರಿ ಶಂಕರ್ ರವರು ಮೋದಿ ಮತ್ತು ಅದಾನಿಯ ಮುಖವಾಡ ಧರಿಸಿ ಸಂಸತ್ ಆವರಣದಲ್ಲಿ ಒಟ್ಟಿಗೆ ಓಡಾಡಿದರು.
ಕಾಂಗ್ರೆಸ್ ಸಂಸದ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಟ್ಯಾಗೋರ್ ಮತ್ತು ಉಲಕ ಅವರನ್ನು ವಿಡಿಯೋ ಮಾಡುವ ಮೂಲಕ ಅದಾನಿ ಮತ್ತು ಪ್ರಧಾನಿ ಅವರ “ಸಂಬಂಧ”ವನ್ನು ವಿವರಿಸುವಂತೆ ಕೇಳಿದರು.
ಅದಕ್ಕೆ ಪ್ರತಿಯಾಗಿ, “ಹಮ್ ದೋನೋ ಮಿಲ್ಕೆ ಸಬ್ ಕರೇಂಗೆ ನಾವು ವರ್ಷಗಳ ಸಂಬಂಧವನ್ನು ಹೊಂದಿದ್ದೇವೆ” ಎಂದು ಇಬ್ಬರೂ ಲೇವಡಿ ಮಾಡಿದರು.
ಅವರಿಂದಲೇ ಸಂಸತ್ ಕಲಾಪ ಏಕೆ ಸ್ಥಗಿತಗೊಂಡಿತು ಎಂದು ರಾಹುಲ್ ಗಾಂಧಿ ಯನ್ನು ಪ್ರಶ್ನಿಸಿದ ಸಂಸದರು, “ಅವರು ಇಂದು ನಾಪತ್ತೆಯಾಗಿದ್ದಾರೆ, ಅಮಿತ್ ಭಾಯ್ ಇಂದು ಸದನಕ್ಕೆ ಬಂದಿಲ್ಲ” ಎಂದು ಹೇಳಿದರು.
ಅದಾನಿಯಂತೆ ನಟಿಸಿದ ಸಂಸದರು, “ನಾನು ಏನು ಹೇಳಿದರೂ ಅವರು ಅದನ್ನು ಮಾಡುತ್ತಾರೆ” ಎಂದು ಪ್ರಧಾನಿ ಮೋದಿಯ ಮುಖವಾಡ ಧರಿಸಿದ್ದ ತನ್ನ ಸಹೋದ್ಯೋಗಿಯನ್ನು ತೋರಿಸಿದರು.
ನವೆಂಬರ್ 20 ರಂದು ಅಧಿವೇಶನ ಪ್ರಾರಂಭವಾದಾಗಿನಿಂದ, ಅದಾನಿ ವಿರುದ್ಧ ಯುಎಸ್‌ನಲ್ಲಿ ಲಂಚದ ಆರೋಪದ ಬಗ್ಗೆ ಚರ್ಚೆಗೆ ಒತ್ತಾಐಇಸಿದ್ದು, ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ಮುಂದುವರೆಸಿದರು. ಇದರಿಂದ, ಉಭಯ ಸದನಗಳು ನಿರಂತರ ಮುಂದೂಡಿಕೆಗೆ ಸಾಕ್ಷಿಯಾಗಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj