ಆಧಾರ್ ಪೌರತ್ವದ ಪುರಾವೆಯಲ್ಲ: ಸಂಸತ್‌ ನಲ್ಲಿ ಕೇಂದ್ರ ಸ್ಪಷ್ಟನೆ - Mahanayaka
1:07 AM Wednesday 11 - December 2024

ಆಧಾರ್ ಪೌರತ್ವದ ಪುರಾವೆಯಲ್ಲ: ಸಂಸತ್‌ ನಲ್ಲಿ ಕೇಂದ್ರ ಸ್ಪಷ್ಟನೆ

keran
05/02/2022

ನವದೆಹಲಿ: ಆಧಾರ್ ಹಾಗೂ ಮತದಾರರ ಗುರುತಿನ ಚೀಟಿಗಳ ನಡುವೆ ಲಿಂಕ್ ಮಾಡಲು ಸರ್ಕಾರಿ ಅಧಿಕಾರಿಗಳಿಗೆ ಸಾಧ್ಯವಿಲ್ಲ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಸಂಸತ್ತಿನಲ್ಲಿ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ನಡೆದ ಪ್ರತ್ಯೇಕ ಪ್ರಶ್ನೋತ್ತರ ಅವಧಿಯಲ್ಲಿ ಕಿರಣ್ ರಿಜಿಜು ಆಧಾರ್ ಹಾಗೂ ಮತದಾರರ ಗುರುತಿನ ಚೀಟಿಗಳ ಜೋಡಣೆ ಬಗ್ಗೆ ಇದ್ದ ಗೊಂದಲಕ್ಕೆ ಸ್ಪಷ್ಟನೆ ನೀಡಿದರು.

ಆಧಾರ್ ಬಳಸಿಕೊಂಡು ಪೌರತ್ವ ದೃಢೀಕರಿಸಲು ಸರ್ಕಾರ ಪ್ರೊಟೋಕಾಲ್ ರಚಿಸಿದೆಯೇ? ಎಂಬ ಲಿಖಿತ ಪ್ರಶ್ನೆಗೆ ಸಂಸತ್ತಿನಲ್ಲಿ ಪ್ರತಿಕ್ರಿಯಿಸಿದ ಕಿರಣ್ ರಿಜಿಜು, ಆಧಾರ್ ಹಾಗೂ ಮತದಾರರ ಗುರುತಿನ ಚೀಟಿಗಳ ನಡುವೆ ಯಾವುದೇ ರೀತಿಯ ಜೋಡಣೆ ನಡೆಸಲಾಗುವುದಿಲ್ಲ. ಆಧಾರ್ ಪೌರತ್ವದ ಪುರಾವೆಯಲ್ಲ ಎಂದು ಸ್ಪಷ್ಟಪಡಿಸಿದರು.

ಆಧಾರ್ ಅನ್ನು ಕಾನೂನುಬದ್ಧ ಸಾಧನವಾಗಿ ಬಳಸುವ ವಿಚಾರವಾಗಿ ಉತ್ತರಿಸಿದ ಕಿರಣ್ ರಿಜಿಜು, ಆಧಾರ್ ಪೌರತ್ವದ ಪುರಾವೆಯಲ್ಲ. ಹೀಗಾಗಿ ಅದನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಜೋಡಿಸುವ ಬಗ್ಗೆ ಗೊಂದಲ ಬೇಡ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬೈಕ್ ​​​​​​ನಲ್ಲಿ ಗಾಂಜಾ ಮಾರಾಟ: ಆರೋಪಿಗಳ ಬಂಧನ

ಭೀಕರ ರಸ್ತೆ ಅಪಘಾತ: ಸ್ಥಳದಲ್ಲೇ ಐವರ ಸಾವು

ವಿಶ್ವದ ಎತ್ತರದ ರಾಮಾನುಜಾಚಾರ್ಯರ ಪ್ರತಿಮೆ; ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ

ಡ್ರಿಂಕ್ಸ್‌ ಮಾಡಲು ಪತಿಯನ್ನು ಕರೆದುಕೊಂಡು ಹೋಗುತ್ತಿದ್ದ ಬಾವನ ಕೊಲೆ

ಮತ್ತೊಂದು ವಿಮಾನ ದುರಂತ : ಪೈಲಟ್‌ ಸೇರಿ ಏಳು ಮಂದಿಯ ಸಾವು

 

ಇತ್ತೀಚಿನ ಸುದ್ದಿ