ಮದುವೆ ಮಂಟಪಕ್ಕೆ ಅಧಿಕಾರಿಗಳ ದಾಳಿ | ವಧುವನ್ನು ಸ್ಟೇಜ್ ನಲ್ಲೇ ಬಿಟ್ಟು ಪರಾರಿಯಾದ ವರ! - Mahanayaka
12:58 AM Wednesday 11 - December 2024

ಮದುವೆ ಮಂಟಪಕ್ಕೆ ಅಧಿಕಾರಿಗಳ ದಾಳಿ | ವಧುವನ್ನು ಸ್ಟೇಜ್ ನಲ್ಲೇ ಬಿಟ್ಟು ಪರಾರಿಯಾದ ವರ!

chikkamagaluru
25/05/2021

ಚಿಕ್ಕಮಗಳೂರು: ವರನೋರ್ವ ಮದುವೆ ನಡೆದ ಕ್ಷಣದಲ್ಲೇ ವಧುವನ್ನು ಬಿಟ್ಟು ಪರಾರಿಯಾದ ಘಟನೆ  ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದ್ದು, ಕೊರೊನಾ ಮಾರ್ಗಸೂಚಿಗಳ ಪರಿಶೀಲನೆಗೆ ಅಧಿಕಾರಿಗಳು ಆಗಮಿಸಿದ್ದು, ಈ ವೇಳೆ ಹೆದರಿದ ವರ ವಧುವನ್ನು ಸ್ಟೇಜ್ ನಲ್ಲಿಯೇ ಬಿಟ್ಟು ಪರಾರಿಯಾದ ಘಟನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕರಿಕಲ್ಲಳ್ಳಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಕೊವಿಡ್ ನಿಯಮಗಳನ್ನು ಉಲ್ಲಂಘಿಸಿ ಮದುವೆ ನಡೆಸುತ್ತಿದ್ದ ವೇಳೆ ಅಧಿಕಾರಿಗಳು ಆಗಮಿಸಿದ್ದು, ಈ ವೇಳೆ ಮದುವೆಗೆ ಬಂದಿದ್ದವರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಈ ವೇಳೆ ವರ ವಧುವನ್ನು ಸ್ಟೇಜ್ ನಲ್ಲಿಯೇ ಬಿಟ್ಟು ಓಡಿ ಹೋಗಿದ್ದಾನೆ ಎಂದು ವರದಿಯಾಗಿದೆ.

ಮದುವೆಗೆ 10 ಜನರಿಗೆ ಮಾತ್ರವೇ ಅವಕಾಶ ನೀಡಲಾಗಿತ್ತು. ಆದರೆ, ನೂರಾರು ಜನರು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗಿದೆ. ಸ್ಥಳಕ್ಕೆ ಗ್ರಾಮಪಂಚಾಯತ್ ಅಧಿಕಾರಿಗಳು ಭೇಟಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಇತ್ತೀಚಿನ ಸುದ್ದಿ