ಸಭೆಗೆ ಕೆಲವು ವಸ್ತು ತೆಗೆದುಕೊಂಡು ಬಂದು ಅಧಿಕಾರಿಗಳಿಗೆ ಕ್ಲಾಸ್ ತೆಗೆದ ಸಚಿವ ಈಶ್ವರಪ್ಪ - Mahanayaka

ಸಭೆಗೆ ಕೆಲವು ವಸ್ತು ತೆಗೆದುಕೊಂಡು ಬಂದು ಅಧಿಕಾರಿಗಳಿಗೆ ಕ್ಲಾಸ್ ತೆಗೆದ ಸಚಿವ ಈಶ್ವರಪ್ಪ

10/02/2021

ಶಿವಮೊಗ್ಗ:  ನಿರಂತರ ಜ್ಯೋತಿ ವಿದ್ಯುತ್ ಕಾಮಗಾರಿಯಲ್ಲಿ ನಡೆಯುತ್ತಿರುವ ಕಳಪೆ ಕಾಮಗಾರಿಯ ವಿರುದ್ಧ ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಕೆ.ಎಸ್.ಈಶ್ವರಪ್ಪ ಗುಡುಗಿದ್ದು, ಯೋಜನೆಗೆ ಬಳಸಿದ ವಸ್ತುಗಳನ್ನು ಪ್ರದರ್ಶಿಸಿ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡಿದ್ದಾರೆ.


Provided by

ನಿರಂತರ ಜ್ಯೋತಿ ವಿದ್ಯುತ್ ಕಾಮಗಾರಿಯಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಈಶ್ವರಪ್ಪ ಕಳಪೆ ವಸ್ತುಗಳನ್ನು ಹಿಡಿದುಕೊಂಡು ಸಭೆಗೆ ಆಗಮಿಸಿ, ಅಧಿಕಾರಿಗಳ ಎದುರು ಪ್ರದರ್ಶಿಸಿ, ಗುತ್ತಿಗೆದಾರ ಕಳಪೆ ವಸ್ತುಗಳನ್ನು ಬಳಸುತ್ತಿದ್ದಾಗ ನೀವು ಏನು ಮಾಡುತ್ತಿದ್ದೀರಿ ಎಂದು ಈಶ್ವರಪ್ಪ ಪ್ರಶ್ನಿಸಿದರು.

ಜಿಲ್ಲಾಧಿಕಾರಿಗಳು ಕಾಮಗಾರಿಯನ್ನು ಕೂಡಲೇ ಪರಿಶೀಲಿಸಬೇಕು, 15 ದಿನಗಳೊಳಗೆ ತನಗೆ ವರದಿ ನೀಡಬೇಕು ಎಂದು ಈಶ್ವರಪ್ಪ ಸಭೆಯಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇತ್ತೀಚಿನ ಸುದ್ದಿ