ಅಧಿಕಾರಿಗಳು ರಾಜಕಾರಣಿಗಳಿಂತಲೂ ಹೆಚ್ಚು ಲೂಟಿ ಮಾಡುತ್ತಾರೆ | ಪ್ರತಾಪ್ ಸಿಂಹ

prathap simha
06/06/2021

ಮೈಸೂರು: ರಾಜಕಾರಣಿಗಳು ಲೂಟಿ ಹೊಡೆಯುವುದಕ್ಕಿಂತಲೂ ಹೆಚ್ಚು ಅಧಿಕಾರಿಗಳು ಲೂಟಿ ಹೊಡೆಯುತ್ತಾರೆ. ಆದರೆ ಇದೆಲ್ಲ ಯಾರಿಗೂ ಅರ್ಥವಾಗುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ಅವರು,  ದೊಡ್ಡ ದೊಡ್ಡ ಅಧಿಕಾರಿಗಳೆಲ್ಲ ಎಲ್ಲೆಲ್ಲಿ ಇನ್ಸವೆಸ್ಟ್ ಮೆಂಟ್ ಮಾಡಿದ್ದಾರೆ ಎನ್ನುವುದನ್ನು ಹಿರಿಯ ಪತ್ರಕರ್ತರ ಬಳಿಯಲ್ಲಿ ಕೇಳಿದರೆ ನಿಮಗೆ ಆಗ ಗೊತ್ತಾಗಬಹುದು ರಾಜಕಾರಣಿಗಳಿಗಿಂತಲೂ ಅಧಿಕಾರಿಗಳು ಹೆಚ್ಚು ಲೂಟಿ ಹೊಡೆಯುತ್ತಾರೆ ಎಂದು ಹೇಳಿದರು.

ಎಲ್ಲರೂ ಒಬ್ಬರ ಮೇಲೆ ಮುಗಿ ಬಿದ್ದಿದ್ದಾರೆ ಅಂದ ಕೂಡಲೇ ಕಳ್ಳರೆಲ್ಲ ಒಟ್ಟಾಗಿದ್ದಾರೆ ಎಂದರ್ಥವಲ್ಲ,  ಇಡೀ ಜಗತ್ತು ಹಿಟ್ಲರ್ ಮೇಲೆ ಮುಗಿಬಿದ್ದಿತ್ತು. ಹಾಗಾದರೆ, ಹಿಟ್ಲರ್ ಒಳ್ಳೆಯವನಾ? ಮುಗಿ ಬಿದ್ದವರು ಒಳ್ಳೆಯವರಾ? ಎಲ್ಲದಕ್ಕೂ ಒಂದು ಫ್ಲಿಪ್ ಸೈಡ್ ಇರುತ್ತದೆ ಎಂದು ಅವರು ಐಎಎಸ್ ಅಧಿಕಾರಿಗಳ ವರ್ಗಾವಣೆ ಸಂಬಂಧ ಅಧಿಕಾರಿಗಳಿಗೆ ಟಾಂಗ್ ನೀಡಿದರು.

ಇತ್ತೀಚಿನ ಸುದ್ದಿ

Exit mobile version