ಆದಿಚುಂಚನಗಿರಿ ಮಹಾರಥೋತ್ಸದಲ್ಲಿ ಕಾಲ್ತುಳಿತ: ವೃದ್ಧೆ ಬಲಿ - Mahanayaka
10:08 PM Thursday 14 - November 2024

ಆದಿಚುಂಚನಗಿರಿ ಮಹಾರಥೋತ್ಸದಲ್ಲಿ ಕಾಲ್ತುಳಿತ: ವೃದ್ಧೆ ಬಲಿ

mandya
18/03/2022

ಮಂಡ್ಯ: ಆದಿಚುಂಚನಗಿರಿ ಗಂಗಾಧರೇಶ್ವರ ಸ್ವಾಮಿ ಮಹಾರಥೋತ್ಸವ ಇಂದು ವಿಜೃಂಭಣೆಯಿಂದ ನಡೆದಿದ್ದು, ಈ ವೇಳೆ ಕಾಲ್ತುಳಿತ ಸಂಭವಿಸಿ ವೃದ್ಧೆರೊಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.

ಮೈಸೂರಿನ ಕಸ್ತೂರಿಬಾ ನಗರ ನಿವಾಸಿ ಮಹದೇವಮ್ಮ(65) ಮೃತ ವೃದ್ಧೆ. ಇವರು ಮಹಾರಥೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ.

ಮಹದೇವಮ್ಮ ಕುಟುಂಬದವರ ಜೊತೆ ಆದಿಚುಂಚನಗಿರಿ ಜಾತ್ರೆಗೆ ಆಗಮಿಸಿದ್ದು, ರಥೋತ್ಸವದ ವೇಳೆ ಭಕ್ತರ ನೂಕು ನುಗ್ಗಲಿನಲ್ಲಿ ಉಸಿರುಗಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…




ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪೇರಳೆ ಹಣ್ಣಿನಾಸೆ: ಮರ ಹತ್ತಲು ಹೋಗಿ ಪ್ರಾಣವನ್ನೇ ಕಳಕೊಂಡ ಬಾಲಕ

ಎಲ್ಲ ಹಿಂದೂಗಳೂ, ಎಲ್ಲ ಮುಸಲ್ಮಾನರೂ ಕೆಟ್ಟವರಲ್ಲ: ವಿ.ಸೋಮಣ್ಣ

ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಉಕ್ರೇನ್‌ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ

ಇಂದು, ಬಾಬಾ ಸಾಹೇಬ್ ಅಂಬೇಡ್ಕರರು ಕಣ್ಣೀರು ಹಾಕಿದ ದಿನ

ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ: ಆರೋಪಿಗಳ ಬಂಧನ

 

ಇತ್ತೀಚಿನ ಸುದ್ದಿ