ಆಟವಾಡುತ್ತಿದ್ದ ವೇಳೆ ಅಡಿಕೆ ನುಂಗಿ 1 ವರ್ಷದ ಮಗು ಸಾವು - Mahanayaka

ಆಟವಾಡುತ್ತಿದ್ದ ವೇಳೆ ಅಡಿಕೆ ನುಂಗಿ 1 ವರ್ಷದ ಮಗು ಸಾವು

07/02/2021

ಶಿವಮೊಗ್ಗ: ಮಕ್ಕಳು ಆಟವಾಡುತ್ತಿರುವಾಗ ಅವರ ಮೇಲೆ ಒಂದು ಕಣ್ಣಿಡಬೇಕು ಅಂತ ಹೇಳುತ್ತಾರೆ. ಅಲ್ಲದೇ ಸಿಕ್ಕ ಸಿಕ್ಕ ವಸ್ತುಗಳು ಮಗುವಿನ ಕೈಗೆ ಸಿಗದ ಹಾಗೆ ನೋಡಿಕೊಳ್ಳಬೇಕು ಎಂದೂ ಹೇಳುತ್ತಾರೆ. ಹೀಗೆ ನೋಡಿಕೊಳ್ಳದಿದ್ದರೆ ಏನು ಅನಾಹುತ ಸಂಭವಿಸುತ್ತದೆ ಎನ್ನುವುದಕ್ಕೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೆದ್ದರೂ ಗ್ರಾಮದಲ್ಲಿ ನಡೆದ ಈ ಘಟನೆಯೇ ಸಾಕ್ಷಿಯಾಗಿದೆ.


Provided by

ಅಡಿಕೆಯನ್ನು ಹಿಡಿದುಕೊಂಡು ಆಟವಾಡುತ್ತಿದ್ದ 1 ವರ್ಷದ ಮಗು ಆಟವಾಡುತ್ತಾ, ಅಡಿಕೆಯನ್ನು ಬಾಯಿಗೆ ಹಾಕಿ ನುಂಗಿದ್ದು, ಅಡಿಕೆ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡು ಮಗು ಸಾವನ್ನಪ್ಪಿದೆ.

ಅರ್ಚನಾ ಮತ್ತು ಸಂದೇಶ್ ದಂಪತಿಯ 1 ವರ್ಷದ ಮಗು ಶ್ರಿಹಾನ್, ಅಡಿಕೆಯನ್ನು ನುಂಗಿ ಮೃತಪಟ್ಟ ಮಗುವಾಗಿದೆ. ಅಡಿಕೆ ಗಂಟಲಲ್ಲಿ ಸಿಕ್ಕಿ ಮಗುವಿಗೆ ಉಸಿರುಗಟ್ಟಿದ್ದು, ಈ ವೇಳೆ ಇದನ್ನು ಗಮನಿಸಿದ ಪೋಷಕರು ತಕ್ಷಣವೇ ತೀರ್ಥಹಳ್ಳಿ ತಾಲೂಕು ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಬಂದಿದ್ದಾರೆ. ಆದರೆ ಮಗುವು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ.

ಮಹಾನಾಯಕ ಡಾಟ್ ಇನ್ | ವಾಟ್ಸಾಪ್: 6363101317

ಇತ್ತೀಚಿನ ಸುದ್ದಿ