ಆದಿವಾಸಿ ಮಹಿಳೆಯನ್ನು ಅರೆ ಬೆತ್ತಲೆಗೊಳಿಸಿ ಹಲ್ಲೆ: ಧರ್ಮಾಧಿಕಾರಿಯವರು ದನಿ ಎತ್ತದೆ ಸುಮ್ಮನಿದ್ದಾರೆ | ಬಿ.ಟಿ.ಲಲಿತಾನಾಯಕ್
ಮೈಸೂರು: ಧರ್ಮಸ್ಥಳ ಸಮೀಪ ಆದಿವಾಸಿ ಮಹಿಳೆಯೊಬ್ಬರನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಅಮಾನವೀಯ ಘಟನೆಯನ್ನು ಜನತಾ ಪಕ್ಷದ ಅಧ್ಯಕ್ಷೆ ಬಿ.ಟಿ.ಲಲಿತಾನಾಯಕ್ ಖಂಡಿಸಿದ್ದಾರೆ.
ಮೈಸೂರಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ಸಮೀಪ ಆದಿವಾಸಿ ಮಹಿಳೆಯೊಬ್ಬರನ್ನು ಅರೆಬೆತ್ತಲೆಗೊಳಿಸಿ ದೌರ್ಜನ್ಯ ಎಸಗಿದ್ದರೂ ಧರ್ಮಾಧಿಕಾರಿಯವರು ದನಿ ಎತ್ತದೆ ಸುಮ್ಮನಿದ್ದಾರೆ. ಧರ್ಮಸ್ಥಳ, ತಿರುಪತಿಗಳು ತಲೆ ಬೋಳಿಸಿ ಕಾಣಿಕೆ ಪಡೆಯುವುದಕ್ಕಾಗಿ ಮಾತ್ರವೇ ಇವೆಯೆ? ಎಂದು ಅವರು ಪ್ರಶ್ನಿಸಿದರು.
ಇಂತಹ ಘಟನೆಗಳು ನಡೆದಾಗ ನೊಂದವರಿಗೆ ಸಾಂತ್ವನ ಹೇಳುವ ಮೂಲಕವಾದರೂ ಕನಿಷ್ಠ ಜನರ ಋಣ ತೀರಿಸಬೇಕು. ಇಂತಹ ಘಟನೆ ನಡೆಯದಂತೆ ಧರ್ಮಾಧಿಕಾರಿಗಳು ಬುದ್ಧಿ ಹೇಳಬೇಕು. ದೇವರು ಹಾಗೂ ಧರ್ಮ ಇರುವುದೇ ಮನುಷ್ಯರನ್ನು ನೋಡುವುದರಲ್ಲಿ ಎಂದು ಪ್ರತಿಪಾದಿಸಿದರು.
ದೇವರು ಹಾಗೂ ಧರ್ಮದ ಮೂಲಾರ್ಥವನ್ನೇ ಕುಲಗೆಡಿಸಲಾಗಿದೆ. ಧರ್ಮದ್ರೋಹ, ರಾಜದ್ರೋಹ, ಜನದ್ರೋಹದ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮನೆಯೊಳಗೆ ಸ್ಫೋಟಗೊಂಡ ಎಲೆಕ್ಟ್ರಿಕ್ ಬೈ ಕ್ ನ ಬ್ಯಾಟರಿ: ಓರ್ವ ಸಾವು, ಮಹಿಳೆಯ ಸ್ಥಿತಿ ಗಂಭೀರ
ಗೂಗಲ್ ಡೂಡಲ್ ನಲ್ಲಿ ಕಾಣಿಸಿಕೊಂಡ ನಾಜಿಹಾ ಸಲೀಂ ಯಾರು ?
ಅಪ್ರಾಪ್ತ ಬಾಲಕಿಗೆ ನಂಬರ್ ಕೊಟ್ಟ ಕಂಡೆಕ್ಟರ್ ಗೆ ಹಿಗ್ಗಾಮುಗ್ಗಾ ಥಳಿಸಿದ ಬಾಲಕಿಯ ತಾಯಿ: ವಿಡಿಯೋ ವೈರಲ್
ಪರೀಕ್ಷೆಗೆ ಓದುತ್ತಿದ್ದ ವೇಳೆ ಟೆರೆಸ್ ನಿಂದ ಬಿದ್ದು ವಿದ್ಯಾರ್ಥಿ ಸಾವು