ರಾತ್ರಿ ಮಾತ್ರ ಎಚ್ಚರ ಇರಲು ಅದು ಕೊರೊನಾನ, ಇಲ್ಲ ಗೂಬೆನಾ? | ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಪ್ರಶ್ನೆ - Mahanayaka
5:04 AM Wednesday 11 - December 2024

ರಾತ್ರಿ ಮಾತ್ರ ಎಚ್ಚರ ಇರಲು ಅದು ಕೊರೊನಾನ, ಇಲ್ಲ ಗೂಬೆನಾ? | ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಪ್ರಶ್ನೆ

23/12/2020

ಬೆಂಗಳೂರು: ಕೊರೊನಾ  ವೈರಸ್ ನೆಪದಲ್ಲಿ ರಾತ್ರಿ ಕರ್ಫ್ಯೂ ಮಾಡಲು ಹೊರಟಿರುವ ಸಿಎಂ ಯಡಿಯೂರಪ್ಪ ಹಾಗೂ ಅವರ ಸಚಿವ ಸಂಪುಟದ ನಡವಳಿಕೆಗಳಿ ಹಾಸ್ಯಾಸ್ಪದವಾಗಿದ್ದು, ಈ ಬಗ್ಗೆ ಹೇಳಿಕೆ ನೀಡಿರುವ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ, ರಾತ್ರಿ ಮಾತ್ರ ಎಚ್ಚರ ಇರಲು ಅದು ಕೊರೊನಾನಾ ಇಲ್ಲ ಗೂಬೆ ನಾ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರದ ತರ್ಕ ರಹಿತವಾದ ಕರ್ಫ್ಯೂ ಆದೇಶವನ್ನು ಕಂಡ ನಂತರ, ರಾತ್ರಿ ಮಾತ್ರ ಎಚ್ಚರವಾಗಿರೋಕೆ ಅದೇನು ಕರೋನಾನ ಇಲ್ಲ ಗೂಬೆನಾ ಎಂಬ ಅನುಮಾನ ನನ್ನ ಕಾಡತೊಡಗಿದ್ದು, ಈ ಮಾತು ಹಾಸ್ಯವಾಗಿ ಕಂಡರೂ ನನ್ನಲ್ಲಿ ದಿಗಿಲು ಹುಟ್ಟಿಸಿದೆ ಎಂದು ಹೆಚ್.ಸಿ.ಮಹದೇವಪ್ಪ ಟ್ವೀಟ್ ಮಾಡಿದ್ದಾರೆ.

ರಾಜ್ಯ ಸರ್ಕಾರವು ರಾತ್ರಿ ಮಾತ್ರವೇ ಕರ್ಫ್ಯೂ ವಿಧಿಸಿರುವುದಕ್ಕೆ ಭಾರೀ ವಿರೋಧಗಳು ವ್ಯಕ್ತವಾಗಿದೆ. ಇನ್ನೊಂದೆಡೆಯಲ್ಲಿ ರಾಜ್ಯ ಸರ್ಕಾರವು ರಂಜಾನ್ ಸಂದರ್ಭದಲ್ಲಿ ಕೂಡ ನಿಷೇಧಾಜ್ಞೆ ವಿಧಿಸಿತ್ತು. ಇದೀಗ ಡಿಸೆಂಬರ್ 25ರಂದು ಕ್ರಿಸ್ಮಸ್ ಹಬ್ಬವಿದ್ದು, ಅದಕ್ಕೂ ತೊಂದರೆ ಮಾಡಲು ಮುಂದಾಗಿದೆ. ದೀಪಾವಳಿ ಸಂದರ್ಭದಲ್ಲಿ ಬೇಕಾಬಿಟ್ಟಿ ಪಟಾಕಿ ಸಿಡಿಸಿ ಹಬ್ಬ ಆಚರಿಸಲಾಗಿದ್ದರೂ ಸರ್ಕಾರ ಸುಮ್ಮನಿತ್ತು. ರಾಜ್ಯ ಸರ್ಕಾರವು ಧರ್ಮಗಳ ಮಧ್ಯೆ ಬೇಧ ಭಾವ ಮಾಡುತ್ತಿದೆ ಎನ್ನುವ ಆರೋಪಗಳು ಸಾರ್ವಜನಿಕವಾಗಿ ವ್ಯಾಪಕ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ