ಅಫ್ಘಾನಿಸ್ತಾನದಲ್ಲಿ ಸಿಲುಕಿದ ಕರ್ನಾಟಕ ಮೂಲದ ಇಬ್ಬರು ಕ್ರೈಸ್ತ ಧರ್ಮಗುರುಗಳು! - Mahanayaka
12:24 AM Wednesday 10 - September 2025

ಅಫ್ಘಾನಿಸ್ತಾನದಲ್ಲಿ ಸಿಲುಕಿದ ಕರ್ನಾಟಕ ಮೂಲದ ಇಬ್ಬರು ಕ್ರೈಸ್ತ ಧರ್ಮಗುರುಗಳು!

thaliban
19/08/2021

ಬೆಂಗಳೂರು: ಕ್ರೈಸ್ತ ಗುರು ಫಾ. ರಾಬರ್ಟ್ ರೋಡ್ರಿಗಸ್ ತಾಲಿಬಾನ್ ಉಗ್ರರ ಹಿಡಿತದಲ್ಲಿರುವ ಆಫ್ಘಾನಿಸ್ತಾನದಲ್ಲಿ ಸಿಲುಕಿದ್ದು, ಸದ್ಯ ತಾನು ಸುರಕ್ಷಿತವಾಗಿರುವುದಾಗಿ ಅವರು ತಿಳಿಸಿದ್ದಾರೆ.


Provided by

ಅನೇಕ ವರ್ಷಗಳ ಹಿಂದೆಯೇ ಆಫ್ಘಾನಿಸ್ಥಾನಕ್ಕೆ ತೆರಳಿದ್ದ ಇವರು, ಇಲ್ಲಿನ ಬಾಮಿಯಾನ್ ಪ್ರಾಂತ್ಯದಲ್ಲಿ ಧರ್ಮಗುರುಗಳಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಉಗ್ರರು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡ ಬಳಿಕ ಭಾರತಕ್ಕೆ ಮರಳಲು ಯತ್ನಿಸಿದರೂ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.

ಭಾರತಕ್ಕೆ ಮರಳಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವೇಳೆ ತಾಲಿಬಾನ್ ಉಗ್ರರು ವಿಮಾನವನ್ನು ವಶಕ್ಕೆ ಪಡೆದುಕೊಂಡಿದ್ದರು. ಇದರಿಂದಾಗಿ ಆ ದಿನ ಅಲ್ಲೇ ಉಳಿದುಕೊಂಡು ಮರುದಿನ ಸುರಕ್ಷಿತ ಪ್ರದೇಶಕ್ಕೆ ತೆರಳಲು ಪ್ರಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ದ.ಕ. ಜಿಲ್ಲೆ ಮೂಲದ ಫಾ.ಜೆರೋಮ್ ಸಿಕ್ವೇರಾ

ಇನ್ನೂ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ಸಿದ್ದಕಟ್ಟೆ ಸಮೀಪದ ಕಲ್ಕುರಿ ನಿವಾಸಿ ಧರ್ಮಗುರು ಫಾ.ಜೆರೋಮ್ ಸಿಕ್ವೇರಾ ಅವರು ಕೂಡ ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದಾರೆ. ಅವರು ಕೂಡ ಸುರಕ್ಷಿತರಾಗಿದ್ದಾರೆ ಎನ್ನುವ ಸಂದೇಶವನ್ನು ಕಳುಹಿಸಿದ್ದಾರೆ.  ಐದು ವರ್ಷಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದ ಅವರು ಜೆಮ್ಷೆಡ್ ಪುರದಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದರು.

ಕಳೆದ ಡಿಸೆಂಬರ್ ನಲ್ಲಿ ಅವರು ಅಫ್ಘಾನಿಸ್ತಾನಕ್ಕೆ ತೆರಳಿದ್ದರು. ತಾಲಿಬಾನ್ ಉಗ್ರರ ಸಂಘರ್ಷ ಆರಂಭವಾಗುತ್ತಿದ್ದಂತೆಯೇ ಊರಿಗೆ ಮರಳಲು ಸಿದ್ಧತೆ ನಡೆಸಿದ್ದರು. ಆದರೆ ವಿಮಾನ ನಿಲ್ದಾಣ ಉಗ್ರರ ವಶದಲ್ಲಿರುವ ಕಾರಣ ಊರಿಗೆ ಮರಳಲು ಸಾಧ್ಯವಾಗಿರಲಿಲ್ಲ ಎಂದು ತಿಳಿದು ಬಂದಿದೆ.

ಇನ್ನಷ್ಟು ಸುದ್ದಿಗಳು…

ಪ್ರತೀ ದಿನ ಮೊಟ್ಟೆ ಸೇವಿಸುವುದರಿಂದ ಏನಾಗುತ್ತದೆ ಗೊತ್ತಾ?

ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಯಾವ ದೇಶದಲ್ಲಿ ಆಶ್ರಯ ಪಡೆದಿದ್ದು ಗೊತ್ತಾ? | ಕೊನೆಗೂ ಬಯಲಾಯ್ತು ರಹಸ್ಯ

ಡೆತ್ ನೋಟ್ ಬರೆದಿಟ್ಟು ಇಡೀ ಕುಟುಂಬವೇ ನಾಪತ್ತೆ! | ಆತಂಕದಲ್ಲಿ ಸಂಬಂಧಿಕರು

ಬೇಲ್ ಮೇಲೆ ಜೈಲಿನಿಂದ ಬಂದಿದ್ದಾತ ಪತ್ನಿಯನ್ನು ಕೊಂದ | ಮೂವರು ಪೊಲೀಸ್ ಅಧಿಕಾರಿಗಳು ಅಮಾನತು

ಸಾರ್ವರ್ಕರ್ ಗಲಾಟೆ: ಎಸ್ ಡಿಪಿಐ ಮತ್ತು ಬಿಜೆಪಿಯ ಒಳ ಒಪ್ಪಂದದ ಕಾರ್ಯಕ್ರಮ | ಹಿಂದೂ ಮಹಾಸಭಾ ಆಕ್ರೋಶ

ಕಾಬುಲ್ ನ ಅಮ್ಯೂಸ್ಮೆಂಟ್ ಪಾರ್ಕ್ ಗೆ ನುಗ್ಗಿ ಮಕ್ಕಳ ಆಟಿಕೆ ಕಾರಿನಲ್ಲಿ ಆಟವಾಡಿದ ಉಗ್ರರು

ಇತ್ತೀಚಿನ ಸುದ್ದಿ