ತಾಲಿಬಾನ್ ಉಗ್ರರ ಕೈಸೇರಿತು ಅಮೆರಿಕದ ಆಧುನಿಕ ಯುದ್ಧೋಪಕರಣಗಳು | ವಿಶ್ವಕ್ಕೆ ಸವಾಲು ಹಾಕುತ್ತಾರಾ ಉಗ್ರರು?
ವಾಷಿಂಗ್ಟನ್: ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡ ಬೆನ್ನಲ್ಲೇ ಆತಂಕಕಾರಿ ವಿಚಾರವೊಂದನ್ನು ಹೆಸರು ಹೇಳಲು ಇಚ್ಛಿಸದ ಅಮೆರಿಕದ ರಕ್ಷಣಾಧಿಕಾರಿಯೊಬ್ಬರು ಬಹಿರಂಗಪಡಿಸಿದ್ದು, ಅಮೆರಿಕ ಅಫ್ಘಾನ್ ಗೆ ಪೂರೈಸಿದ ಆಧುನಿಕ ಯುದ್ಧೋಪಕರಣಗಳು ಹಠಾತ್ತನೇ ತಾಲಿಬಾನ್ ಉಗ್ರರ ಕೈ ಸೇರಿದೆ.
ಅಮೆರಿಕ ಪೂರೈಸಿದ್ದ ಪ್ರಬಲ ಶಕ್ತಿಯುತವಾದ ಗನ್ ಗಳು, ಮದ್ದುಗುಂಡುಗಳು, ಹೆಲಿಕಾಫ್ಟರ್ ಗಳು, ಅತ್ಯುತ್ತಮ ಯುದ್ಧದ ಟ್ರೈನಿಂಗ್ ಪಡೆದ ಸೈನಿಕರು ಇದೀಗ ಉಗ್ರರ ಪಾಲಾಗಿದ್ದಾರೆ. ಅಮೆರಿಕವು ಅಫ್ಘಾನ್ ಗೆ 83 ಬಿಲಿಯನ್ ಡಾಲರ್ ವೆಚ್ಚದಲ್ಲಿ ಭದ್ರತಾ ವ್ಯವಸ್ಥೆ ಮಾಡಿತ್ತು. ಆದರೆ ಇದೀಗ ಎಲ್ಲವೂ ತಾಲಿಬಾನ್ ಉಗ್ರರ ಪಾಲಾಗಿದೆ.
ಅಫ್ಘಾನ್ ನಿಂದ ತನ್ನ ಸೇನೆಯನ್ನು ಅಮೆರಿಕ ವಾಪಸ್ ಪಡೆದ ಬೆನ್ನಲ್ಲೇ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನಕ್ಕೆ ನುಸುಳಿದ್ದಾರೆ. ಇದರೊಂದಿಗೆ ಅಫ್ಘಾನಿಸ್ತಾನ ಸಂಪೂರ್ಣವಾಗಿ ಉಗ್ರರ ವಶಕ್ಕೆ ಸಿಕ್ಕಿದೆ. ಇದೀಗ ಉಗ್ರರ ಆಡಳಿತಕ್ಕೆ ಒಂದು ದೇಶವೇ ಸಿಕ್ಕಿದೆ. ಇದರ ಜೊತೆಗೆ ಸೇನಾಬಲವೂ ಉಗ್ರರಿಗೆ ಸಹಕಾರಿಯಾಗಿದೆ ಎನ್ನಲಾಗುತ್ತಿದೆ. ಅವರ ಬಳಿಯಲ್ಲಿ ಅಮೆರಿಕದಿಂದ ಪೂರೈಕೆಯಾಗಿರುವ ಪ್ರಬಲ ಶಸ್ತ್ರಾಗಳು ಕೂಡ ಇದೆ. ಹೀಗಾಗಿ ಉಗ್ರರು ಯಾವುದೇ ದೇಶಕ್ಕೆ ತಾಕುವ ಸಾಧ್ಯತೆಗಳು ಕೂಡ ಇವೆ ಎನ್ನಲಾಗುತ್ತಿದೆ.
ಅಫ್ಘಾನಿಸ್ತಾನವನ್ನು ಗೆದ್ದ ತಾಲಿಬಾನ್ ಉಗ್ರರು ಸಣ್ಣ ಸಣ್ಣ ದೇಶಗಳನ್ನು ಟಾರ್ಗೆಟ್ ಮಾಡಿ ವಶಪಡಿಸಿಕೊಳ್ಳುವ ಸಾಧ್ಯತೆಗಳು ಕೂಡ ಇವೆ. ಆದರೆ, ಈ ಎಲ್ಲ ಸಾಧ್ಯತೆಗಳಿ ಅಮೆರಿಕಕ್ಕೆ ಗೊತ್ತಿದ್ದರೂ ಅಮೆರಿಕ ಮೌನವಾಗಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಇದರ ಜೊತೆಗೆ ರಷ್ಯಾ ಇನ್ನೂ ಕೂಡ ತಾಲಿಬಾನ್ ನೆಲವನ್ನು ಬಿಟ್ಟು ಹೋಗಿಲ್ಲ. ತಾಲಿಬಾನ್ ನ ನೂತನ ಸರ್ಕಾರ ನಮ್ಮೊಂದಿಗೆ ಸಹಕರಿಸಲಿದೆ ಎಂದು ರಷ್ಯಾದ ರಾಯಬಾರಿಗಳು ನಿನ್ನೆ ಹೇಳಿಕೆ ನೀಡಿದ್ದರು. ತಾಲಿಬಾನ್ ಉಗ್ರರ ಅಧೀನದಲ್ಲಿರುವ ಅಫ್ಘಾನಿಸ್ತಾನದ ಮುಂದಿನ ಭವಿಷ್ಯ ಏನು ಎನ್ನುವುದು ಇದೀಗ ಎಲ್ಲರ ಮುಂದಿರುವ ಪ್ರಶ್ನೆಯಾಗಿದೆ.
ಇನ್ನಷ್ಟು ಸುದ್ದಿಗಳು…
ಕಮಿಷನರ್ ಗೆ ವಾಯ್ಸ್ ಮೆಸೇಜ್ ಕಳುಹಿಸಿ ಆತ್ಮಹತ್ಯೆಗೆ ಶರಣಾದ ದಂಪತಿ: ಕೊನೆಯ ಸಂದೇಶದಲ್ಲಿತ್ತು ಮನಕಲಕುವ ನೋವು
4 ಕಾರು, 1 ಹೆಲಿಕಾಫ್ಟರ್ ನಲ್ಲಿ ಹಣ ತುಂಬಿಸಿಕೊಂಡು ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಪರಾರಿ
ಮಂಗಳೂರಿನಲ್ಲಿ 1,725 ಕೆ.ಜಿ. ಅಪಾಯಕಾರಿ ಸ್ಫೋಟಕ ಪತ್ತೆ! | ಆರೋಪಿ ಅರೆಸ್ಟ್
ಗದ್ದೆಗಿಳಿದು ನಾಟಿ ಮಾಡಿದ ಶೋಭಾ ಕರಂದ್ಲಾಜೆ | ಸಾಕು ಬಾರಕ್ಕೋ… ಎಂದ ಕಾರ್ಯಕರ್ತರು!
ಗಲಭೆ ಸೃಷ್ಟಿಸಲು ಮುಂದಾದರೆ, ಸಂವಿಧಾನ ಬದ್ಧವಾಗಿ ತಡೆಯಲು ಸಿದ್ಧ | ಸಂಘಪರಿವಾರಕ್ಕೆ ಪಿಎಫ್ ಐ ತಿರುಗೇಟು
ವೀರ ಸಾರ್ವರ್ಕರ್ ರಥಯಾತ್ರೆ ನಡೆಸುತ್ತೇವೆ ತಾಕತ್ ಇದ್ದರೆ ತಡೆಯಿರಿ | ಎಸ್ ಡಿಪಿಐಗೆ ಹಿಂದುತ್ವ ಸಂಘಟನೆಗಳ ಸವಾಲು