ಅಫ್ಘಾನಿಸ್ತಾನ ಸಂಕಷ್ಟದ ಬೆನ್ನಲ್ಲೇ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ
ನವದೆಹಲಿ: ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿಂದು ಮಹತ್ವದ ಸಭೆಯನ್ನು ನಡೆಸಲಾಗಿದ್ದು, ರಾಷ್ಟ್ರೀಯ ಭದ್ರತೆ ಮೇಲಿನ ಸಂಪುಟ ಸಮಿತಿ ಸಭೆ ಇಂದು ನಡೆಯಲಿದೆ.
ದೆಹಲಿಯ 7 ಲೋಕಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ಈ ಸಭೆ ನಡೆಯಲಿದೆ. ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರಿಂದ ಅಸ್ಥಿರತೆ ಉಂಟಾಗಿದೆ. ಇದರಿಂದ ಉಂಟಾಗುವ ಪರಿಣಾಮಗಳ ಕುರಿತಂತೆ ಮತ್ತು ಕೈಗೊಳ್ಳಬೇಕಿರುವ ಕ್ರಮಗಳ ಕುರಿತಂತೆ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಈ ತುರ್ತು ಸಭೆಯನ್ನು ಕರೆಯಲಾಗಿದೆ.
ಉಗ್ರರ ಹಾವಳಿ ಹೆಚ್ಚಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ನಿನ್ನೆ ನಡೆದ ಮಹತ್ವದ ಸಭೆಯಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ಎಸ್ ಜೈಶಂಕರ್, ಭದ್ರತಾ ಸಲಹೆಗಾರ ಅಜಿತ್ ದೋವಲ್ ಭಾಗಿಯಾಗಿದ್ದರು.
ಪ್ರಧಾನಿ ಮೋದಿ ಸಭೆಯಲ್ಲಿ ಹಲವು ಸಲಹೆ ನೀಡಿದ್ದು, ಭಾರತ ತನ್ನ ಪ್ರಜೆಗಳ ರಕ್ಷಣೆ ಕುರಿತು ಮಾತ್ರ ಚಿಂತಿಸುವುದಿಲ್ಲ. ಭಾರತಕ್ಕೆ ಬರುವ ಇಚ್ಛೆ ವ್ಯಕ್ತ ಪಡಿಸುವ ಆಫ್ಘಾನಿಸ್ತಾನದಲ್ಲಿರುವ ಹಿಂದೂಗಳು, ಸಿಖ್ ಸಮುದಾಯದವರಿಗೆ ಆಶ್ರಯ ನೀಡಲು ಕ್ರಮ ಕೈಗೊಳ್ಳಬೇಕು. ಭಾರತದ ಸಹಾಯ ಕೇಳುವ ಆಫ್ಘಾನಿಸ್ತಾನದವರಿಗೆ ನೆರವಾಗಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆನ್ನಲಾಗಿದೆ.
ಇನ್ನಷ್ಟು ಸುದ್ದಿಗಳು…
ಸಾರ್ವರ್ಕರ್ ಗಲಾಟೆ: ಎಸ್ ಡಿಪಿಐ ಮತ್ತು ಬಿಜೆಪಿಯ ಒಳ ಒಪ್ಪಂದದ ಕಾರ್ಯಕ್ರಮ | ಹಿಂದೂ ಮಹಾಸಭಾ ಆಕ್ರೋಶ
ಟ್ವಿಟರ್ ಬರ್ಡ್ ಫ್ರೈ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು | ರಾಹುಲ್ ಖಾತೆ ಲಾಕ್ ಗೆ ಆಕ್ರೋಶ
ಕಿಟಕಿಯಲ್ಲಿ ನೇತಾಡುತ್ತಾ ಲಸಿಕೆ ಪಡೆದ ವ್ಯಕ್ತಿ | “ಶಾರ್ಟ್ ಕಟ್ ಲಸಿಕೆ” ವಿಡಿಯೋ ವೈರಲ್
ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಇಳಿಕೆ | ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಇಳಿಕೆ
ತಾಲಿಬಾನ್ ಉಗ್ರರ ಕೈಸೇರಿತು ಅಮೆರಿಕದ ಆಧುನಿಕ ಯುದ್ಧೋಪಕರಣಗಳು | ವಿಶ್ವಕ್ಕೆ ಸವಾಲು ಹಾಕುತ್ತಾರಾ ಉಗ್ರರು?