ಅಫ್ಘಾನಿಸ್ತಾನದ ಮಾಜಿ ಅಧಿಕಾರಗಳ ಇಮೇಲ್ ಗಳನ್ನು ಲಾಕ್ ಮಾಡಿದ ಗೂಗಲ್!
ಅಫ್ಘಾನಿಸ್ತಾನದ ಮಾಜಿ ಅಧಿಕಾರಗಳ ಇಮೇಲ್ ವಿಳಾಸಗಳನ್ನು ಅಕ್ರಮವಾಗಿ ಪ್ರವೇಶಿಸಲು ಯತ್ನ ನಡೆಯುತ್ತಿದ್ದು, ಹೀಗಾಗಿ ಗೂಗಲ್ ಸಂಸ್ಥೆಯು ಅಫ್ಘನ್ ಸರ್ಕಾರದ ಕೆಲವು ಇಮೇಲ್ ಖಾತೆಗಳನ್ನು ತಾತ್ಕಾಲಿಕವಾಗಿ ಲಾಕ್ ಮಾಡಿದ್ದು, ಸುರಕ್ಷತೆಯ ದೃಷ್ಠಿಯಿಂದ ಈ ಕ್ರಮವನ್ನು ಕೈಗೊಂಡಿರುವುದಾಗಿ ಗೂಗಲ್ ಹೇಳಿದೆ.
ಶುಕ್ರವಾರ ಗೂಗಲ್ ಸಂಸ್ಥೆ ಈ ಮಾಹಿತಿ ನೀಡಿದೆ. ತಜ್ಞರ ಸಹಾಯದಿಂದ ನಾವು ಅಪ್ಘಾನಿಸ್ತಾನದ ಪರಿಸ್ಥಿತಿಯ ಮೇಲೆ ಸದಾ ಕಣ್ಣಿಡುತ್ತಿದ್ದೇವೆ. ಕೆಲವೊಂದು ಖಾತೆಗಳನ್ನು ರಕ್ಷಿಸುವ ದೃಷ್ಟಿಯಿಂದಾಗಿ ನಾವು ಕೆಲ ತಾತ್ಕಾಲಿಕ ಕ್ರಮ ಕೈಗೊಂಡಿದ್ದೇವೆ ಎಂದು ಗೂಗಲ್ ವಕ್ತಾರ ತಿಳಿಸಿದ್ದಾರೆ.
2 ಡಜನ್ ಗೂ ಅಧಿಕ ಅಧಿಕಾರಿಗಳು, ಹಣಕಾಸು, ಕೈಗಾರಿಕೆ, ಉನ್ನತ ಶಿಕ್ಷಣ, ಗಣಿ ಇಲಾಖೆ ಸಚಿವಾಲಯಗಳಲ್ಲಿ ಅಧಿಕೃತ ಸಂವಹನಕ್ಕೆ ಗೂಗಲ್ ನ್ನು ಬಳಸಲಾಗಿದೆ. ತಾಲಿಬಾನಿಗಳು ಜುಲೈ ತಿಂಗಳಲ್ಲಿ ಸಚಿವಾಲಯದ ಮಾಹಿತಿಯನ್ನು ಸೇವ್ ಮಾಡಿಡುವಂತೆ ಹೇಳಿದ್ದರು ಎಂದು ಹಿಂದಿನ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ತಾಲಿಬಾನಿಗಳು ಈ ಹಿಂದಿನ ಅಫ್ಘಾನ್ ಸರ್ಕಾರದ ರಹಸ್ಯ ಮಾಹಿತಿಗಳನ್ನು ಕಲೆ ಹಾಕಲು ಯತ್ನಿಸುತ್ತಿದ್ದು, ಹೀಗಾಗಿ ಇಮೇಲ್ ಗಳ ಮೇಲೆ ಅವರು ಕಣ್ಣಿಟ್ಟಿದ್ದಾರೆ. ಹೀಗಾಗಿ ಇಮೇಲ್ ನ್ನು ತಾಂತ್ರಿಕ ತಂಡಗಳ ಸಹಕಾರದಿಂದ ತೆರೆಯಲು ಯತ್ನಿಸಿದೆ. ಆದರೆ ಗೂಗಲ್ ಕೈಗೊಂಡ ಕ್ರಮದಿಂದಾಗಿ ಇದೀಗ ತಾಲಿಬಾನಿಗಳ ಸಂಚು ವಿಫಲವಾಗಿದೆ.
ಇನ್ನಷ್ಟು ಸುದ್ದಿಗಳು…
ಹಾಸ್ಟೆಲ್ ನ ರಹಸ್ಯ ಮುಚ್ಚಿ ಹಾಕಲು ಅತ್ಯಾಚಾರದ ಕಥೆ ಕಟ್ಟಿದ ವಿದ್ಯಾರ್ಥಿನಿ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ರದ್ದಾಗಲಿ | ಸಿಪಿಐ(ಎಂ) ಒತ್ತಾಯ
ಮಹಿಳೆಗೆ ಮದ್ಯ ಕುಡಿಸಿ ಅತ್ಯಾಚಾರ: ಇಬ್ಬರು ನೈಜೀರಿಯಾ ಪ್ರಜೆಗಳ ಬಂಧನ
1ರಿಂದ 5ನೇ ತರಗತಿವರೆಗೆ ಶಾಲೆಗಳನ್ನು ತೆರೆಯುವ ಚಿಂತನೆ ಸದ್ಯಕ್ಕಿಲ್ಲ | ಸಚಿವ ಸುಧಾಕರ್
ಅಫ್ಘಾನಿಸ್ತಾನದಲ್ಲಿ ಲೈಂಗಿಕ ಕಾರ್ಯಕರ್ತೆಯರಿಗಾಗಿ ಹುಡುಕಾಡುತ್ತಿರುವ ತಾಲಿಬಾನಿಗಳು | ಡೆತ್ ಸ್ಕ್ವಾಡ್ ಆರಂಭ