ಅಫ್ಘಾನಿಸ್ತಾನ ತೊರೆದ ಅಮೆರಿಕ ಸೇನೆ: ಆಗಸಕ್ಕೆ ಗುಂಡು ಹಾರಿಸಿ ಸಂಭ್ರಮಿಸಿದ ತಾಲಿಬಾನಿಗರು - Mahanayaka
5:21 AM Tuesday 12 - November 2024

ಅಫ್ಘಾನಿಸ್ತಾನ ತೊರೆದ ಅಮೆರಿಕ ಸೇನೆ: ಆಗಸಕ್ಕೆ ಗುಂಡು ಹಾರಿಸಿ ಸಂಭ್ರಮಿಸಿದ ತಾಲಿಬಾನಿಗರು

kabul
31/08/2021

ಕಾಬುಲ್:  ಅಫ್ಘಾನಿಸ್ತಾನದಿಂದ ಅಮೆರಿಕಾದ ಕೊನೆಯ ವಿಮಾನ ಪ್ರಯಾಣಿಸುತ್ತಿದ್ದಂತೆಯೇ ತಾಲಿಬಾನಿಗಳು ಕಾಬುಲ್ ಏರ್ಪೋರ್ಟ್ ನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದಾರೆ. ಬೆಳಗಾಗುತ್ತಿದ್ದಂತೆ ಅಮೆರಿಕಾ ಸೇನಾ ಪಡೆಗಳು ನಿಲ್ದಾಣದಿಂದ ಖಾಲಿಯಾಗುತ್ತಿದ್ದಂತೆ ಶಸ್ತ್ರಸಜ್ಜಿತ ತಾಲಿಬಾನಿಗಳು ಇಡೀ ವಿಮಾನ ನಿಲ್ದಾಣವನ್ನು ವಶಕ್ಕೆ ಪಡೆದುಕೊಂಡರು.

ವಿಮಾನ ನಿಲ್ದಾಣವನ್ನು ಅಮೆರಿಕ ಸೇನೆ ತೊರೆದ ಬಳಿಕ ವಾಯುನೆಲೆಯ ಉತ್ತರದಲ್ಲಿರುವ ಹಮೀದ್ ಕರ್ಜೈ ವಿಮಾನ ನಿಲ್ದಾಣದ ಏಕೈಕ ರನ್‍ವೇ ಉದ್ದಕ್ಕೂ ವಾಹನಗಳು ಹಿಂದಕ್ಕೆ ಮುಂದಕ್ಕೆ ಓಡಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು.

ಅಮೆರಿಕಾ ಸೇನೆಯನ್ನು ಆಘ್ಘಾನ್‍ನಿಂದ ವಾಪಸ್ ಕಳುಹಿಸಿರುವುದು ಬಹಳ ಕಾಲ ನೆನಪಿನಲ್ಲಿ ಇರಲಿದೆ. ನಮ್ಮ ಈ ಗೆಲುವಿನಿಂದ ಜಾಗತೀಕ ಸಮುದಾಯ ಪಾಠ ಕಲಿಯಬೇಕಾದ ಅವಶ್ಯಕತೆ ಇದೆ ಎಂದು ತಾಲಿಬಾನ್ ವಕ್ತಾರ ಝಬೀವುಲ್ಲಾ ಮುಜಾಯಿದ್ದ ಅಭಿಪ್ರಾಯಪಟ್ಟಿದ್ದಾರೆ.

ಅವರ ದೇಶ ಅವರ ಕೈಯಲ್ಲಿದೆ. ಇನ್ನು ಅವರ ಭವಿಷ್ಯ ಅವರೇ ರೂಪಿಸಿಕೊಳ್ಳಬೇಕು. ಇನ್ನು ಮುಂದಾದರೂ ಯುದ್ಧದ ಮಾತನ್ನು ಬಿಟ್ಟು ಆಫ್ಘಾನ್ ಅಭಿವೃದ್ಧಿಗೆ ತಾಲಿಬಾನಿಗಳು ಮುಂದಾಗಲಿ ಎಂದು ಅಮೆರಿಕಾ ಸಲಹೆ ನೀಡಿದೆ. ನಮ್ಮ ಮೇಲೆ ಹಗೆ ತೀರಿಸಿಕೊಳ್ಳಲು ಬಂದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಅಮೆರಿಕಾ ಎಚ್ಚರಿಕೆ ಕೂಡ ನೀಡಿದೆ.




ಅಮೆರಿಕ ಸೇನೆ ಕಾಬುಲ್ ಏರ್ ಪೋರ್ಟ್ ನಲ್ಲಿದ್ದ ಕಾರಣ ಇಲ್ಲಿಯವರೆಗೆ ಏರ್ ಪೋರ್ಟ್ ನ್ನು ಮುಟ್ಟಲು ತಾಲಿಬಾನಿಗಳಿಂದ ಸಾಧ್ಯವಾಗಿರಲಿಲ್ಲ. ಇದೀಗ ಅಮೆರಿಕ ಸೇನೆ ಏರ್ಪೋರ್ಟ್ ನ್ನು ತೊರೆಯುತ್ತಿದ್ದಂತೆಯೇ ತಾಲಿಬಾನಿಗಳು ಆಗಸದತ್ತ ಗುಂಡು ಹಾರಿಸಿ ಸಂಭ್ರಮಿಸಿದ್ದಾರೆ.

ಇನ್ನಷ್ಟು ಸುದ್ದಿಗಳು…

ಏಳೆಂಟು ವರ್ಷದ ಪ್ರೀತಿ ನಡು ರಸ್ತೆಯಲ್ಲಿ ದುರಂತ ಅಂತ್ಯ! | ಪ್ರಿಯತಮೆಯ ಕತ್ತು ಸೀಳಿ, ತನ್ನ ಕತ್ತನ್ನೂ ಸೀಳಿಕೊಂಡ!

ಮಗುವಿಗೆ ಚಪ್ಪಲಿಯಲ್ಲಿ ಹೊಡೆದು ಚಿತ್ರ ಹಿಂಸೆ ನೀಡಿದ್ದ ತಾಯಿ ಅರೆಸ್ಟ್!

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಮುಂದುವರಿಕೆ | ಆರ್.ಅಶೋಕ್

ನಡು ರಸ್ತೆಯಲ್ಲಿ ಯುವತಿಯ ಕತ್ತು ಕೊಯ್ದು, ತಾನೂ ಕತ್ತು ಸೀಳಿಕೊಂಡ ಯುವಕ

ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ 7 ಬಾಲಕರಿಂದ ಸಾಮೂಹಿಕ ಅತ್ಯಾಚಾರ!

ದೇಶದಿಂದಲೇ ಬಿಜೆಪಿಯನ್ನು ಕಿತ್ತೊಗೆಯುತ್ತೇವೆ | ತಾಕತ್ ಇದ್ದರೆ ಟಿಎಂಸಿಯನ್ನು ತಡೆಯಿರಿ | ಅಭಿಷೇಕ್ ಬ್ಯಾನರ್ಜಿ ಸವಾಲು

 

ಇತ್ತೀಚಿನ ಸುದ್ದಿ