ಮದ್ಯ ಸೇವಿಸಿ ಗಾಢ ನಿದ್ರೆಗೆ ಜಾರಿದ ಸುಮಾರು 24 ಆನೆಗಳು!
ಒಡಿಶಾ: ಸುಮಾರು 24ಕ್ಕೂ ಅಧಿಕ ಆನೆಗಳು ಮದ್ಯ ಸೇವಿಸಿ ಗಾಢ ನಿದ್ದೆಗೆ ಜಾರಿದ ಘಟನೆ ಒಡಿಶಾದ ಹಳ್ಳಿಯೊಂದರಲ್ಲಿ ನಡೆದಿದ್ದು, ಕೊನೆಗೆ ಆನೆಗಳನ್ನು ಎಬ್ಬಿಸಲು ಡೋಲು ಬಾರಿಸಿದ ಘಟನೆ ನಡೆದಿದೆ.
ಒಡಿಶಾದ ಕಿಯೋಂಜಾರ್ ಜಿಲ್ಲೆರ ಶಿಲಿಪಾಡಾ ಗೋಡಂಬಿ ಅರಣ್ಯದ ಬಳಿ, ಗ್ರಾಮಸ್ಥರು ಮದ್ಯ ತಯಾರಿಕೆಗೆ ಮಹುವಾ ಹೂವುಗಳನ್ನು ದೊಡ್ಡ ಮಡಿಕೆಯಲ್ಲಿ ಇಟ್ಟು ತೆರಳಿದ್ದರು. ಮರುದಿನ ಬೆಳಗ್ಗೆ 6 ಗಂಟೆಗೆ ಕಾಡಿನೊಳಗೆ ಬಂದಾಗ ಮಡಿಕೆಗಳು ಒಡೆದು ಮಡಕೆಯಲ್ಲಿದ್ದ ಮಹುವಾ ಹೂವಿನ ನೀರು ಖಾಲಿಯಾಗಿತ್ತು. ಜೊತೆಗೆ ಇದರ ಪಕ್ಕದಲ್ಲಿಯೇ 24ಕ್ಕೂ ಅಧಿಕ ಆನೆಗಳು ಮಲಗಿರುವುದು ಕಂಡು ಬಂದಿತ್ತು.
ಮದ್ಯ ಸೇವನೆಯಿಂದಾಗಿ ಆನೆಗಳು ಅಮಲೇರಿ ಇಲ್ಲಿ ಮಲಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಆದರೆ, ಆನೆಗಳು ಮದ್ಯ ಸೇವಿಸಿತ್ತೇ ಅನ್ನೋದು ಸ್ಪಷ್ಟವಾಗಿಲ್ಲ. ಈ ಪ್ರದೇಶದಲ್ಲಿ ಆನೆಗಳು ನಿತ್ಯವೂ ತಂಗುವ ಸ್ಥಳವಾಗಿರಲೂ ಅವಕಾಶವಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka