ದುಬೈನಲ್ಲಿ ಮಳೆ ಅವಾಂತರ: ಭಾರತೀಯ ಕುಸ್ತಿಪಟುಗಳಿಗೆ ಏಷ್ಯನ್ ಒಲಿಂಪಿಕ್ ನಲ್ಲಿ ಭಾಗವಹಿಸುವ ಅವಕಾಶ ಮಿಸ್
ದುಬೈಯ ಮಳೆ ಹಲವಾರು ಅವಾಂತರಗಳನ್ನು ಸೃಷ್ಟಿಸಿದೆ. ಭಾರತೀಯ ಕುಸ್ತಿಪಟುಗಳು ಏಷ್ಯನ್ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ಭಾಗವಹಿಸುವ ಅವಕಾಶ ಕಳೆದುಕೊಳ್ಳುವಂತೆ ಮಾಡಿದೆ. ಕುಪ್ತಿಪಟು ದೀಪಕ್ ಪೂನಿಯಾ ಮತ್ತು ಮತ್ತೊಬ್ಬ ಕುಸ್ತಿಪಟು ಸುಜೀತ್ ಕಲ್ಕಲ್ ಏಷ್ಯನ್ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ಭಾಗವಹಿಸಲು ಸರಿಯಾದ ಸಮಯಕ್ಕೆ ತಲುಪದ ಕಾರಣ ಕ್ರೀಡಾ ಆಯೋಜಕರು ಅವರಿಗೆ ಅವಕಾಶ ನೀಡಿಲ್ಲ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಡೆ ಕ್ಷಣದಲ್ಲಿ ಪದಕ ಕಳೆದುಕೊಂಡಿದ್ದ ಕುಪ್ತಿಪಟು ದೀಪಕ್ ಪೂನಿಯಾ ಮತ್ತು ಮತ್ತೊಬ್ಬ ಕುಸ್ತಿಪಟು ಸುಜೀತ್ ಕಲ್ಕಲ್ ಮಂಗಳವಾರದಿಂದ ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದರು. ದುಬೈನಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ, ಎಲ್ಲ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿತ್ತು. ಅವರು ಶುಕ್ರವಾರ ಬೆಳಗ್ಗೆ ೮ ಗಂಟೆಗೆ ಬಿಷ್ಕೆಕ್ ತಲುಪಿದ್ದಾರೆ. ಆದರೆ, ಈ ವೇಳೆಗಾಗಲೇ ಅವರು ತಮ್ಮ ದೇಹದ ತೂಕವನ್ನು ದಾಖಲಿಸಬೇಕಿತ್ತು ಮತ್ತು ಕ್ರೀಡಾ ಮಾನದಂಡಗಳನ್ನು ಪೂರೈಸಬೇಕಿತ್ತು.
ತಡವಾಗಿ ಬಂದ ಪೂನಿಯಾ ಮತ್ತು ಕಲ್ಕಲ್ ಅವರಿಗೆ ಸಂಘಟಕರು ಅವಕಾಶ ನೀಡಲು ನಿರಾಕರಿಸಿದ್ದಾರೆ. ತಾವು ಎದುರಿಸಿದ ಸಮಸ್ಯೆಗಳ ಬಗ್ಗೆ ವಿವರಿಸಿದರೂ, ಸಂಘಟಕರು ಅವಕಾಶ ನೀಡಿಲ್ಲ.
ಈಗ ಸಧ್ಯಕ್ಕೆ, ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆಯಲು ಮುಂದಿನ ತಿಂಗಳು ನಡೆಯಲಿರುವ ವಿಶ್ವ ಕ್ವಾಲಿಫೈಯರ್ಸ್ ಕ್ರಿಡಾಕೂಟವು ಪುನಿಯಾ ಮತ್ತು ಕಲ್ಕಲ್ ಕಡೆಯ ಅವಕಾಶವಾಗಿದೆ.
ಭಾರೀ ಮಳೆಯಿಂದಾಗಿ, ಕುಸ್ತಿಪಟುಗಳು ತಮ್ಮ ತರಬೇತುದಾರ ಕಮಲ್ ಮಾಲಿಕೋವ್ ಮತ್ತು ಫಿಸಿಯೋ ಶುಭಂ ಗುಪ್ತಾ ಅವರೊಂದಿಗೆ ಮಂಗಳವಾರದಿಂದ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದರು. ಪುನಿಯಾ ಮತ್ತು ಕಲ್ಕಲ್ ಏಪ್ರಿಲ್ ೨ ರಿಂದ ೧೫ ರವರೆಗೆ ರಷ್ಯಾದ ಡಾಗೆಸ್ತಾನ್‌ನಲ್ಲಿ ತರಬೇತಿ ಪಡೆಯುತ್ತಿದ್ದರು. ಹೀಗಾಗಿ, ಅವರಿಬ್ಬರು ಏಪ್ರಿಲ್ ೧೬ ರಂದು, ಮಕಚ್ಕಲಾದಿಂದ ದುಬೈ ಮೂಲಕ ಬಿಷ್ಕೆಕ್‌ಗೆ ಪ್ರಯಾಣ ಆರಂಭಿಸಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth