ಭಯದ ಬದುಕು: ಕೋಲ್ಕತ್ತಾದ ಬೆನ್ನಲ್ಲೇ ಹರ್ಯಾಣದಲ್ಲಿ ವೈದ್ಯ ವಿದ್ಯಾರ್ಥಿನಿಗೆ ಹಿರಿಯ ವೈದ್ಯರಿಂದಲೇ ಲೈಂಗಿಕ ಹಲ್ಲೆ
ಕೋಲ್ಕತ್ತಾದಲ್ಲಿ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಹತ್ಯೆಯ ಬೆನ್ನಿಗೆ ಹರಿಯಾಣದಿಂದ ದಂಗುಬಡಿಸುವ ಇನ್ನೊಂದು ವರದಿ ಬಂದಿದೆ. ಪ್ರಥಮ ವರ್ಷದ ಬಿಡಿಎಸ್ ಕಲಿಯುತ್ತಿರುವ ವೈದ್ಯ ವಿದ್ಯಾರ್ಥಿನಿಯು ತಾನು ಹಿರಿಯ ವೈದ್ಯರಿಂದ ಅನುಭವಿಸಿರುವ ಪೀಡನೆ ಮತ್ತು ಲೈಂಗಿಕ ಹಲ್ಲೆಯ ಬಗ್ಗೆ ಹೇಳಿಕೊಂಡಿದ್ದಾರೆ.
ಅನಾಟಮಿ ವಿಭಾಗದ ರೆಸಿಡೆಂಟ್ ಡಾಕ್ಟರ್ ಆಗಿರುವ ಮನೀಂದರ್ ಕೌಶಿಕ್ ತನ್ನನ್ನು ಅಪಹರಿಸಿಕೊಂಡು ಹೋಗಿರುವುದಲ್ಲದೆ ಲೈಂಗಿಕವಾಗಿ ಪೀಡಿಸಿದ್ದಾರೆ ಎಂದು ಎಕ್ಸ್ ಖಾತೆಯಲ್ಲಿ ವೈದ್ಯೆ ಹೇಳಿದ್ದಾರೆ. ಈ ವಿದ್ಯಾರ್ಥಿನಿ ವಿಡಿಯೋವನ್ನು ಕೂಡ ಪೋಸ್ಟ್ ಮಾಡಿದ್ದಾರೆ.
ಕಳೆದ ಏಳು ತಿಂಗಳಿನಿಂದ ಮನ್ನಿಂದರ್ ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಪೀಡಿಸುತ್ತಿದ್ದಾರೆ ಎಂದು ಈ ವೈದ್ಯೆ ವಿಡಿಯೋದಲ್ಲಿ ಹೇಳಿದ್ದಾರೆ. ಈ ಬಗ್ಗೆ ವೈದ್ಯೆ ಪೊಲೀಸರಿಗೆ ದೂರು ನೀಡಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೆಯೇ ಆಸ್ಪತ್ರೆಯಿಂದ ಮನ್ನಿಂದರ್ ಅವರನ್ನು ಹೊರಹಾಕಲಾಗಿದೆ. ಈ ವಿಡಿಯೋದಲ್ಲಿ ಈ ವೈದ್ಯ ತನ್ನ ಮೇಲಾದ ದೌರ್ಜನ್ಯವನ್ನು ವಿವರಿಸಿದ್ದಾರೆ. ಮಾತ್ರ ಅಲ್ಲ ತನಗಾಗಿರುವ ಗಾಯಗಳನ್ನು ವಿಡಿಯೋದಲ್ಲಿ ತೋರಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth