ಚಂದ್ರಯಾನ ಆಯ್ತು, ಸೂರ್ಯನ ಬಳಿ ಹೋಗಲು ಇಸ್ರೋ ಪ್ಲ್ಯಾನ್..! - Mahanayaka
10:34 PM Thursday 19 - September 2024

ಚಂದ್ರಯಾನ ಆಯ್ತು, ಸೂರ್ಯನ ಬಳಿ ಹೋಗಲು ಇಸ್ರೋ ಪ್ಲ್ಯಾನ್..!

16/07/2023

ಮೊನ್ನೆಯಷ್ಟೇ ಚಂದ್ರಯಾನ – 3 ಯೋಜನೆಯ ಬಳಿಕ ಈಗ ಇಸ್ರೋ ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಸಹಯೋಗದೊಂದಿಗೆ ಸೂರ್ಯನತ್ತ ಬಾಹ್ಯಾಕಾಶ ನೌಕೆಯನ್ನು ಕಳುಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಆಗಸ್ಟ್ ಅಂತ್ಯದ ವೇಳೆಗೆ ಸೌರ ವಾತಾವರಣವನ್ನು ಅಧ್ಯಯನ ಮಾಡಲು ಆದಿತ್ಯ ಎಲ್ 1 ಕೋರನಾಗ್ರಫಿ ಉಪಗ್ರಹವನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ರಾಕೆಟ್ ಮೂಲಕ ಸೂರ್ಯನತ್ತ ಇಸ್ರೋ ಕಳಿಸಲಿದೆ.

ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆಯನ್ನು ಸೂರ್ಯ- ಭೂಮಿಯ ವ್ಯವಸ್ಥೆಯ ಮೊದಲ ಲ್ಯಾಗ್ ರೇಂಜ್ ಪಾಯಿಂಟ್ ಎಲ್ 1 ಸುತ್ತ ಹಾಲೋ ಕಕ್ಷೆಗೆ ಸೇರಿಸಲಾಗುವುದು. ಎಲ್ 1 ಬಿಂದುವಿನ ಸುತ್ತಲಿನ ಉಪಗ್ರಹವು ಸೂರ್ಯನು ತನ್ನ ದೃಷ್ಟಿಯಿಂದ ಮರೆಯಾಗದಂತೆ ಮತ್ತು ಗ್ರಹಣದ ಸಮಯದಲ್ಲಿ ನಿರಂತರ ವೀಕ್ಷಣೆಗೆ ಸಾಧ್ಯವಾಗುವ ರೀತಿಯಲ್ಲಿ ಕಕ್ಷೆಯಲ್ಲಿ ಸ್ಥಾಪನೆ ಮಾಡಲಾಗುವುದು ಎಂದು ಇಸ್ರೋ ತಿಳಿಸಿದೆ.


Provided by

ಚಂದ್ರಯಾನ- 3 ಬಾಹ್ಯಾಕಾಶ ನೌಕೆಯು ಚಂದ್ರನ ಮೇಲೆ ಇಸ್ರೋ ಇಳಿಸಿದ ಬಳಿಕ ಒಂದೆರಡು ದಿನಗಳಲ್ಲಿ ಆದಿತ್ಯ ಎಲ್ 1 ಯೋಜನೆಗೆ ಚಾಲನೆ ನೀಡಲಾಗುತ್ತದೆ.
ಮೂನ್ ಲ್ಯಾಂಡರ್ ಚಂದ್ರನ ಮೇಲೆ ಆಗಸ್ಟ್ 23ರ ಸಂಜೆ 5.47ರ ವೇಳೆಗೆ ಇಳಿಯಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ತಿಳಿಸಿದ್ದಾರೆ.
ಆದಿತ್ಯ ಎಂಬುದು ಸೂರ್ಯನ ಹೆಸರೇ ಆಗಿದೆ. ಈ ಉಪಗ್ರಹವು ಕರೋನಲ್ ಮಾಸ್ ಎಜೆಕ್ಷನ್ ಗಳ ಡೈನಾಮಿಕ್ ಮತ್ತು ಮೂಲಗಳಂತಹ ಹಲವಾರು ವಿಷಯಗಳ ಕುರಿತು ಅಧ್ಯಯನ ಮಾಡಲಿದೆ ಎಂದು ಯುರೋಪಿಯನ್ ಸ್ಪೇಸ್ ಏಜೆನ್ಸಿ ತಿಳಿಸಿದೆ.

ಬಾಹ್ಯಾಕಾಶ ಕೇಂದ್ರದಲ್ಲಿ ಆದಿತ್ಯ ಎಲ್ 1 ಅನ್ನು ಯೂರೋಪಿನ ಕೌರೊ ಮತ್ತು ಗೂನ್ ಹಿಲ್ಲಿಯಲ್ಲಿ ಪಥ ಪರಿಶೀಲಿಸಲು ಇಎಸ್ಎ ಬೆಂಬಲ ನೀಡಲಿದೆ. ಆಸ್ಟ್ರೇಲಿಯಾದ ನ್ಯೂ ನಾರ್ಸಿಯ, ಅರ್ಜೆಂಟಿನಾದ ಮಲಾರ್ಕ್ ಮತ್ತು ಸ್ಪೇನ್ ನ ಸೆಬ್ರೆಯೋಸ್ ಗಳಲ್ಲಿರುವ ಇಎಸ್ಎನ 35 ಮೀಟರ್ ನ ಸ್ಪೇಸ್ ಆಂಟೆನಾಗಳು ಕೂಡ ಆದಿತ್ಯ ಎಲ್ 1 ಯೋಜನೆಗೆ ಬೆಂಬಲ ನೀಡಲಿದೆ.

ಸೌರವ್ಯೂಹದ ಪರಿಶೋಧಕ ನೌಕೆಗಳು ಮತ್ತು ಬಾಹ್ಯಾಕಾಶ ವೀಕ್ಷಣಾಲಯಗಳೊಂದಿಗೆ ಸಂವಹನ ನಡೆಸಲು ಈ ನಿಲ್ದಾಣಗಳನ್ನು ಇಎಸ್ಎ ಪ್ರತೀ ನಿತ್ಯ ಬಳಸುತ್ತಿದೆ. ಇಸ್ರೋ ದ ಆದಿತ್ಯ ಎಲ್ 1 ಯೋಜನೆಯ ಆರ್ಬಿಟ್ ಡಿಟರ್ಮಿನೇಷನ್ ಸಾಫ್ಟ್ ವೇರ್ ಪರೀಕ್ಷೆ ಮಾಡಲು ಇಎಸ್ಎ ಸಹಾಯ ಮಾಡಿದೆ.
ಬಾಹ್ಯಾಕಾಶ ನೌಕೆ ಎಲ್ಲಿದೆ ಎಂಬುದನ್ನು ನಿಖರವಾಗಿ ಲೆಕ್ಕಾಚಾರ ಮಾಡಲು ಅದರೊಂದಿಗೆ ಸಂವಹನ ನಡೆಸಲು ಈ ಸಾಫ್ಟ್ ವೇರ್ ಅತ್ಯಗತ್ಯ ಎಂದು ಇಎಸ್ಎ ಹೇಳಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ