ಶೃಂಗೇರಿ ಬಳಿಕ ಹೊರನಾಡಲ್ಲೂ ಡ್ರೆಸ್ ಕೋಡ್ ಜಾರಿ: ಏನು ಹಾಕ್ಬೇಕು? ಏನು ಹಾಕ್ಬಾರ್ದು?
ಚಿಕ್ಕಮಗಳೂರು: ಶೃಂಗೇರಿ ಬಳಿಕ ಹೊರನಾಡಲ್ಲೂ ಡ್ರೆಸ್ ಕೋಡ್ ಜಾರಿಯಾಗಿದ್ದು, ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆ ನೂತನ ಡ್ರೆಸ್ ಕೋಡ್ ಜಾರಿಯಾಗಿದೆ.
ಗಂಡಸರು ಶಲ್ಯ, ಪ್ಯಾಂಟ್, ಪಂಜೆ ಧರಿಸಬೇಕು, ಹೆಣ್ಣು ಮಕ್ಕಳು ಸೀರೆ ಹಾಗೂ ಚೂಡಿದಾರ ಧರಿಸುವಂತೆ ದೇವಾಲಯದ ಆಡಳಿತ ಮಂಡಳಿ ಆದೇಶಿಸಿದೆ.
ಸಾಂಪ್ರದಾಯಿಕ ಉಡುಗೆಯಲ್ಲಿ ಬರದಿದ್ದರೆ ದೇವಸ್ಥಾನದ ಒಳಗೆ ಪ್ರವೇಶವಿಲ್ಲ, ಅನ್ನಪೂರ್ಣೇಶ್ವರಿ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯ ಮಾಡಲಾಗಿದೆ. ಭಕ್ತರು ಸಹಕರಿಸುವಂತೆ ದೇವಾಲಯ ಆಡಳಿತ ಮಂಡಳಿ ಮನವಿ ಮಾಡಿಕೊಂಡಿದೆ.
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಈ ರೀತಿಯ ವಸ್ತ್ರ ಸಂಹಿತೆ ಜಾರಿಯಾಗಿದೆ. ಭಕ್ತರು ದೇವರ ದರ್ಶನ ಪಡೆಯಬೇಕಿದ್ದರೆ, ಡ್ರೆಸ್ ಕೋಡ್ ಪಾಲಿಸಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: