ಸೋಲಿನ ಬಗ್ಗೆ ಕವನ ಬರೆದು ಪ್ರತಿಕ್ರಿಯೆ ನೀಡಿದ ಸಂತೋಷ್ ಬಿ.ಎಲ್.
ಬಿಜೆಪಿ ಸೋಲಿಗೆ ಸಂತೋಷ್ ಬಿ.ಎಲ್. ನೇತೃತ್ವದ ತಂಡವೇ ಕಾರಣ ಎಂಬ ಆಕ್ರೋಶ ರಾಜ್ಯ ಬಿಜೆಪಿಯೊಳಗೆ ಕೇಳಿ ಬರುತ್ತಿದೆ. ಹೈಕಮಾಂಡ್ ತೆಗೆದುಕೊಂಡ ತಪ್ಪು ನಿರ್ಧಾರಗಳಿಂದ ಬಂದ ಹೀನಾಯ ಸೋಲಿನ ಫಲಿತಾಂಶಕ್ಕೆ ಇಂದು ಚುನಾವಣೆಯಲ್ಲಿ ಹಾರ್ಡ್ ವರ್ಕ್ ಮಾಡಿರುವ ನಳಿನ್ ಕುಮಾರ್ ಕಟೀಲ್ ನಂತಹ ನಾಯಕರು ಸೋಲಿನ ಹೊಣೆ ಹೊರಬೇಕಾದ ಪರಿಸ್ಥಿತಿ ಬಂದಿದೆ ಅನ್ನೋ ಮಾತುಗಳು ಕೂಡ ಜೋರಾಗಿ ಕೇಳಿ ಬಂದಿದೆ.
ಪಕ್ಷದ ಕಾರ್ಯಕರ್ತರು ಕೂಡ, ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ತಾಣಗಳಲ್ಲಿ ಈ ಬಗ್ಗೆ ಬರೆದುಕೊಳ್ಳುತ್ತಿದ್ದಾರೆ. ಯಡಿಯೂರಪ್ಪನವರ ಅಡುಗೆ ಕೋಣೆಯಲ್ಲಿ ಟಿಕೆಟ್ ಫೈನಲ್ ಮಾಡಿರುತ್ತಿದ್ದರೆ, ಇಂದು ಪಕ್ಷಕ್ಕೆ ಇಂತಹ ಸೋಲು ಎದುರಾಗುತ್ತಿರಲಿಲ್ಲ ಎಂಬ ಭಾವನೆ ಕಾರ್ಯಕರ್ತರಲ್ಲಿದೆ.
ಇವೆಲ್ಲದರ ನಡುವೆಯೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕವನ ರೂಪದಲ್ಲಿ ಬರೆದುಕೊಂಡಿರುವ ಸಂತೋಷ್ ಬಿ.ಎಲ್,, ತಮ್ಮ ವಿರುದ್ಧದ ಟೀಕೆ, ಕುಹಕ, ಒಡಕು ಮಾತುಗಳಿಗೆ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕಲಿಯುತ್ತೇವೆ
ಸೋಲಿನಿಂದ , ಹಿನ್ನಡೆಗಳಿಂದ , ತಪ್ಪುಗಳಿಂದ
ಉತ್ತರಿಸುತ್ತೇವೆ
ಟೀಕೆಗಳಿಗೆ, ಕುಹಕಗಳಿಗೆ , ಒಡಕು ಮಾತುಗಳಿಗೆ
ನಮ್ಮ ಗತಿಶೀಲತೆಯಿಂದ
ನಾವು ಇರಲಿಕ್ಕೇ ಬಂದವರು … ಗೆಲ್ಲಲಿಕ್ಕೇ ಬಂದವರು …
ನಮಗೆ ಸೋಲು ಕ್ಷಣಿಕ … ಮುನ್ನಡೆ ಸತತ…
ಇನ್ನು 12 ತಿಂಗಳಿನೊಳಗೆ 31000 ಕ್ಕೆ ಮತ್ತೆ 10000 ಸೇರಿಸಿ 41000 ಬೂತ್‌ಗಳಲ್ಲಿ ಮುನ್ನಡೆ ಸಾಧಿಸಿ ತೋರಿಸುತ್ತೇವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw