32 ವರ್ಷಗಳ ಜೈಲು ಶಿಕ್ಷೆಯ ಬಳಿಕ ರಾಜೀವ್ ಗಾಂಧಿ ಹತ್ಯೆಯ ಅಪರಾಧಿ ಪೆರಾರಿವಾಲನ್ ಬಿಡುಗಡೆ
ರಾಜೀವ್ ಗಾಂಧಿ ಹತ್ಯೆಯ ಅಪರಾಧಿ ಪೆರಾರಿವಾಲನ್ 32 ವರ್ಷಗಳ ಜೈಲುವಾಸದ ನಂತರ ಬಿಡುಗಡೆಯಾಗಿದ್ದಾನೆ. ಪೆರಾರಿವಾಲನ್ ಮತ್ತು ಅವರ ತಾಯಿಯ ಮನವಿ ಮೇರೆಗೆ ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್ ಈ ಆದೇಶ ನೀಡಿದ್ದಾರೆ.
ಪೆರಾರಿವಾಲನ್ ನನ್ನು ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಆದೇಶ ನೀಡಲಾಗಿದೆ. ಈ ಹಿಂದೆ ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಿತ್ತು. ಜೈಲಿನಲ್ಲಿ ಉತ್ತಮ ನಡತೆಯ ಹೊರತಾಗಿಯೂ ಪೆರಾರಿವಾಲನ್ ಅವರ ವಿರುದ್ಧ ತಾರತಮ್ಯ ಎಸಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ಟೀಕಿಸಿತ್ತು.
1991 ರಲ್ಲಿ ಪೆರಾರಿವಾಲನ್ ಅವರನ್ನು ಬಂಧಿಸಲಾಗಿತು. ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಪೆರಾರಿವಾಲನ್ 32 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಜೂನ್ 11, 1991 ರಂದು ಚೆನ್ನೈನ ಪೆರಿಯಾರ್ ತಿಡಲ್ ನಲ್ಲಿ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಅಧಿಕಾರಿಗಳು ಪೆರಾರಿವಾಲ್ ಅವರನ್ನು ಬಂಧಿಸಿದ್ದರು. ಈ ವೇಳೆ ಅವರಿಗೆ 20 ವರ್ಷ ತುಂಬಲು ಕೆಲವೇ ದಿನಗಳಷ್ಟೇ ಬಾಕಿ ಇತ್ತು.
ಪೆರಾರಿವಾಲನ್ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾವನ್ನು ಆವಾಗ ತಾನೆ ಪೂರ್ಣಗೊಳಿಸಿದ್ದರು. ತಮಿಳುನಾಡಿನ ಶ್ರೀಪೆರಂಬತ್ತೂರುರಿನಲ್ಲಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗೆ ಸಂಚು ರೂಪಿಸಿದ್ದ ಶಿವರಾಸನ್ ಗೆ ಸ್ಫೋಟಕ ಸಾಧನವಾಗಿ 9 ವೋಲ್ಟ್ ಬ್ಯಾಟರಿಯನ್ನು ಒದಗಿಸಿದ ಆರೋಪವನ್ನು ಪೆರಾರಿವಾಲನ್ ಮೇಲೆ ಹೊರಿಸಲಾಗಿತ್ತು. ಪೆರಾರಿವಾಲನ್ ಅವರ ಬಂಧನದ ನಂತರ ಅವರು ನಿರಪರಾಧಿ ಎಂದು ಹಲವರು ವಾದಿಸಿದರೂ, ಹತ್ಯೆಯಾಗಿದ್ದು ಒಬ್ಬ ಪ್ರಧಾನಿ ಎಂಬ ಕಾರಣಕ್ಕೆ ಈತನಿಗೆ ಜಾಮೀನು ಸಿಕ್ಕಿರಲಿಲ್ಲ ಎನ್ನುವ ಚರ್ಚೆಗಳು ಆ ಕಾಲದಲ್ಲಿ ಕೇಳಿ ಬಂದಿದ್ದವು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಟೆಸ್ಟ್ ಡ್ರೈವ್ ಮಾಡಿ ಬರುತ್ತೇನೆಂದು ಹೋದವ ಕಾರಿನೊಂದಿಗೆ ಪರಾರಿ!: ಶೋರೂಂ ಸಿಬ್ಬಂದಿ ಕಂಗಾಲು
ಬೆಂಗಳೂರಿನಿಂದ ಮಂಗಳೂರಿಗೆ ಹೊರಟ ಬಸ್ ಉಪ್ಪಿನಂಗಡಿ ಬಳಿ ಪಲ್ಟಿ!
ಮೇಡಂ ನನಗೊಂದು ಮದುವೆ ಮಾಡಿಸಿ: ವೃದ್ಧನ ಬೇಡಿಕೆ ಕೇಳಿ ಸಚಿವೆ ಕಂಗಾಲು