ಮಕ್ಕಾ ಮದೀನಕ್ಕೆ ಯಾತ್ರಿಕರನ್ನು ಕರೆದೊಯ್ದು ನಡುದಾರಿಯಲ್ಲಿ ಬಿಟ್ಟು ಏಜೆನ್ಸಿ ಎಸ್ಕೇಪ್: ಪರದಾಡಿದ ಯಾತ್ರಿಕರು
ಸೌದಿ ಅರೇಬಿಯಾ: ಸುಮಾರು 160 ಮಂದಿ ಯಾತ್ರಿಕರನ್ನು ಮಕ್ಕಾ ಮದೀನಕ್ಕೆ ಕರೆದೊಯ್ದು ನಡುದಾರಿಯಲ್ಲಿ ಬಿಟ್ಟು ಹಜ್ ಸಮಿತಿಯೊಂದು ವಂಚಿಸಿರುವ ಗಂಭೀರ ಆರೋಪ ಕೇಳಿ ಬಂದಿದ್ದು, ಮದೀನ ತಲುಪಿದ ಯಾತ್ರಿಗಳು ಮರಳಿ ತಮ್ಮ ಊರುಗಳಿಗೆ ತೆರಳಲು ಪರದಾಡಿದ ಘಟನೆ ನಡೆದಿದೆ.
ಈ ಘಟನೆ ಸಂಬಂಧ ‘ಮಹಾನಾಯಕ’ಕ್ಕೆ ಸೌದಿ ಅರೇಬಿಯಾದಿಂದ ಮಾಹಿತಿ ನೀಡಿರುವ ಇಂಡಿಯನ್ ಕಮ್ಯುನಿಟಿ ವೆಲ್ಫೇರ್ ಸೌದಿ ಅರೇಬಿಯಾದ ಅಬ್ದುಲ್ ಅಜೀಜ್ ಪವಿತ್ರ ಅವರು, ಉಮ್ರ ಯಾತ್ರಿಕರು ಅನುಭವಿಸಿದ ನರಕವನ್ನು ವಿವರಿಸಿದ್ದಾರೆ.
ಅಶ್ರಫ್ ಸಖಾಫಿ ಎಂಬವರು ನಡೆಸುತ್ತಿರುವ ಏಜೆನ್ಸಿ, ‘ಮಹಮ್ಮದೀಯ ಎಂಬ ಹಜ್ ಸಮಿತಿ ಗ್ರೂಪ್’ ಸುಮಾರು 160 ಮಂದಿ ಮಕ್ಕಾದಿಂದ ಮದೀನಕ್ಕೆ ತಲುಪಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಇದರಿಂದಾಗಿ ಯಾತ್ರಿಕರು ಮದೀನದಲ್ಲೇ ಉಳಿದುಕೊಳ್ಳುವಂತಾಗಿದೆ. ಅಲ್ಲಿ ಉಳಿದುಕೊಂಡಿದ್ದ ರೂಮ್ ನಿಂದ ಬಾಡಿಗೆ ಕೊಟ್ಟಿಲ್ಲ, ರಿಟನ್ ಟಿಕೆಟ್ ಕೂಡ ಇಲ್ಲ ಎಂಬ ಕಾರಣಕ್ಕೆ ರೂಮ್ ನಿಂದ ಯಾತ್ರಿಕರನ್ನು ಹೊರ ಹಾಕಿದ್ದಾರೆ. ಈ ವೇಳೆ ಸಮಾಜ ಸೇವಕರು, ಊರಿನ ಹುಡುಗರು ಸೇರಿ ಊಟೋಪಚಾರ ಕೊಟ್ಟು ಸಹಕರಿಸಿದ್ದಾರೆ ಎಂದು ಅಝೀಝ್ ತಿಳಿಸಿದರು.
ವಿಷಯ ತಿಳಿದು ಕರ್ನಾಟಕ ಸರ್ಕಾರದ ಎಲ್ಲ ಸಚಿವಾಲಯಕ್ಕೂ, ಆರತಿ ಕೃಷ್ಣ ಅವರಿಗೂ, ಮನವಿ ಕೊಟ್ಟೆ, ಕೇಂದ್ರ ಸರ್ಕಾರಕ್ಕೂ ಮನವಿ ಕೊಟ್ಟೆ, ಅಮಿತ್ ಶಾ ಕಚೇರಿಯಿಂದಲೂ ಕರೆ ಬಂತು. ಅವರೆಲ್ಲ ಸಹಕಾರಕ್ಕೆ ಬಂದ ವೇಳೆ ಎಲ್ಲ ರೀತಿಯ ಸಹಕಾರ ಮಾಡಲಾಗಿತ್ತು.
ಘಟನೆಯ ಮಾಹಿತಿ ನೀಡುತ್ತಿರುವ ಅಬ್ದುಲ್ ಅಝೀಝ್ ಪವಿತ್ರ
ಸೌದಿ ಅರೇಬಿಯಾದ ಹಜ್ ಸಚಿವಾಲಯ ಮನವಿ ಕೊಟ್ಟೆ, ಈ ವೇಳೆ ಫೇಕ್ ಟಿಕೆಟ್ ಕೊಟ್ಟು ದಮಾಮ್ ಗೆ ರಾತ್ರೋ ರಾತ್ರಿ ಯಾತ್ರಿಕರನ್ನು ಕಳುಹಿಸಲಾಯಿತು. ನಿನ್ನೆ 3 ನಾಲ್ಕು ಬಸ್ ಗಳಲ್ಲಿ ಬೇರೆ ಬೇರೆ ಸಮಯಕ್ಕೆ ಏರ್ಪೋರ್ಟ್ ಗೆ ಯಾತ್ರಿಕರನ್ನು ಕಳುಹಿಸಲಾಯಿತು. ಈ ವೇಳೆ ಕೆಲವು ಬಸ್ ಗಳು ಸಮಯಕ್ಕೆ ಸರಿಯಾಗಿ ಬಂದು ತಲುಪಿಲ್ಲ, ಈ ವೇಳೆ ಅಮಿತ್ ಶಾ ಅವರಿಗೆ ಮನವಿ ಮಾಡಿದಾಗ ಅಮಿತ್ ಶಾ ಅವರು ಕರೆ ಮಾಡಿ, ಯಾತ್ರಿಕರನ್ನು ವಾಪಸ್ ಕರೆತರಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ಆದರೆ ಈ ನಡುವೆ ದಮಾಮ್, ದುಬೈನಲ್ಲಿರುವ ಉದ್ಯಮಿಗಳ ಸಹಕಾರದಿಂದ ಎಲ್ಲರಿಗೂ ಟಿಕೆಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ ಎರಡು ಮೂರು ಬ್ಯಾಚ್ ಊರಿಗೆ ಮರಳಿವೆ. ಸಂಜೆಯೊಳಗೆ ಎಲ್ಲ ಬ್ಯಾಚ್ ಗಳು ತಮ್ಮ ತಮ್ಮ ಊರಿಗೆ ತಲುಪಲಿದ್ದಾರೆ ಎಂದು ಅವರು ತಿಳಿಸಿದರು.
ಯಾತ್ರಿಕರಲ್ಲಿ ರೋಗಿಗಳು, 70—80 ವರ್ಷದ ವಯಸ್ಕರು, ಗರ್ಭಿಣಿಯರು, ಚಿಕ್ಕ ಚಿಕ್ಕ ಮಕ್ಕಳು. ಸಾಕಷ್ಟು ತೊಂದರೆಗೀಡಾಗಿದ್ದರು. ಸದ್ಯ ವಂಚಿಸಿರುವ ಗ್ರೂಪ್ ವಿರುದ್ಧ ಸೌದಿ ಅರೇಬಿಯಾದ ಹಜ್ ಸಚಿವಾಲಯ ಕ್ರಮಕೈಗೊಳ್ಳುವ ಸಾಧ್ಯತೆಗಳಿವೆ. ಕೇಂದ್ರ ಸಚಿವಾಲಯಕ್ಕೂ ಈ ಬಗ್ಗೆ ದೂರು ನೀಡಲಾಗಿದೆ. ವಂಚನೆ ಮಾಡಿರುವವರ ಪಾಸ್ ಪೋರ್ಟ್ ರದ್ದಿಗೆ ಮನವಿ ಮಾಡಲಾಗಿದೆ ಎಂದು ಅಬ್ದುಲ್ ಅಝೀಝ್ ತಿಳಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: