ಬೆಂಗಳೂರು: ಅಪಾರ್ಟ್ಮೆಂಟ್ ಅಗ್ನಿ ಅವಘಡ ಪ್ರಕರಣಕ್ಕೆ ಹೊಸ ತಿರುವು: ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಆಗಿಲ್ಲ!
ಬೆಂಗಳೂರು: ನಗರದ ದೇವರಚಿಕ್ಕನಹಳ್ಳಿ ಬಳಿಯ ಆಶ್ರಿತ ಅಪಾರ್ಟ್ಮೆಂಟ್ ನಲ್ಲಿ ಅಗ್ನಿದುರಂತ ಪ್ರಕರಣದಲ್ಲಿ ತಾಯಿ – ಮಗಳು ಸಜೀವ ದಹನವಾಗಿದ್ದಾರೆ. ನಿನ್ನೆ ಈ ಘಟನೆಗೆ ಕಾರಣ ಗ್ಯಾಸ್ ಸಿಲಿಂಡರ್ ಸ್ಫೋಟ ಎಂದು ಹೇಳಲಾಗಿತ್ತು. ಆದರೆ, ಇಂದು ರೋಚಕ ತಿರುವು ಲಭ್ಯವಾಗಿದ್ದು, ದುರಂತ ಸಂಭವಿಸಿದ್ದ ಅಪಾರ್ಟ್ ಮೆಂಟ್ ನೊಳಗಿದ್ದ ಸಿಲಿಂಡರ್ ಗಳು ಸಜೀವವಾಗಿದ್ದು, ಅವು ಸ್ಫೋಟಗೊಂಡಿಲ್ಲ ಎಂದು ತಿಳಿದು ಬಂದಿದೆ.
ಅಗ್ನಿ ದುರಂತದ ಬಗ್ಗೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಸಿಲಿಂಡರ್ ಬ್ಲಾಸ್ಟ್ ನಿಂದ ಈ ಅವಘಡ ಸಂಭವಿಸಿಲ್ಲ. ಫ್ಲಾಟ್ನಲ್ಲಿದ್ದ ಎರಡೂ ಸಿಲಿಂಡರ್ ಗಳು ಸರಿಯಾಗಿವೆ. ಹೀಗಾಗಿ ಅಗ್ನಿ ದುರಂತಕ್ಕೆ ನಿಖರ ಕಾರಣ ಏನು ಅನ್ನೋದ್ರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಘಟನೆಯ ಸಂಬಂಧ ಮಾಹಿತಿ ನೀಡಿದ್ದಾರೆ.
ಅಪಾರ್ಟ್ಮೆಂಟ್ ಅಜಾಗರೂಕತೆ ವಿಚಾರವಾಗಿಯೂ ಮಾತನಾಡಿದ ಅರಗ ಜ್ಞಾನೇಂದ್ರ, ಅಪಾರ್ಟ್ಮೆಂಟ್ ನ ಮುಂದೆ ರಸ್ತೆ ಕೂಡ ಸರಿಯಾಗಿರಲಿಲ್ಲ ಎಂದು ತಿಳಿದುಬಂದಿದೆ. ಇದರಿಂದ ಅಗ್ನಿಶಾಮಕ ದಳ ವಾಹನಕ್ಕೆ ಸರಿಯಾದ ಸಮಯಕ್ಕೆ ಸ್ಥಳಕ್ಕೆ ತಲುಪಲು ಸಾಧ್ಯವಾಗೋದಿಲ್ಲ. ಹೀಗಾಗಿ ಇನ್ಮುಂದೆ ರಸ್ತೆ ಮಾರ್ಗ ಸರಿಯಾಗಿ ಇರುವಲ್ಲಿ ಮಾತ್ರ ಅಪಾರ್ಟ್ಮೆಂಟ್ ನಿರ್ಮಾಣಕ್ಕೆ ಅವಕಾಶ ನೀಡಬೇಕು ಅನ್ನೋದ್ರ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HpGUvPNd4TWBQJG8MXH5on
ಇನ್ನಷ್ಟು ಸುದ್ದಿಗಳು…
ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಕಾಲು ಜಾರಿ ನದಿಗೆ ಬಿದ್ದ ತಾಯಿ, ಮಗ ದಾರುಣ ಸಾವು
ಓವೈಸಿ ಮನೆ ಧ್ವಂಸ ಪ್ರಕರಣ: ಐವರು ಹಿಂದೂ ಸೇನೆ ಕಾರ್ಯಕರ್ತರು ಅರೆಸ್ಟ್
ಯುವತಿಯೊಂದಿಗಿನ ಫೋಟೋ ಲೀಕ್ ಆಗುವ ಭೀತಿಯಿಂದ ಸ್ವಾಮೀಜಿ ಆತ್ಮಹತ್ಯೆ? | ಡೆತ್ ನೋಟ್ ನಲ್ಲಿ ಏನಿತ್ತು ಗೊತ್ತಾ?
ವಿದ್ಯಾರ್ಥಿಗಳ ವೃತ್ತಿಪರ ಕೋರ್ಸ್ ಶುಲ್ಕ ಮನ್ನಾ | ತಮಿಳುನಾಡು ಸಿಎಂ ಸ್ಟಾಲಿನ್ ಘೋಷಣೆ