ದೇಶದಲ್ಲಿ ಅಗ್ನಿವೀರ್ ಯೋಜನೆಯನ್ನು ಹುತಾತ್ಮ ಯೋಧ ಅಂಶುಮಾನ್ ಸಿಂಗ್ ರ ತಾಯಿ ಆಗ್ರಹ - Mahanayaka
5:59 AM Wednesday 23 - October 2024

ದೇಶದಲ್ಲಿ ಅಗ್ನಿವೀರ್ ಯೋಜನೆಯನ್ನು ಹುತಾತ್ಮ ಯೋಧ ಅಂಶುಮಾನ್ ಸಿಂಗ್ ರ ತಾಯಿ ಆಗ್ರಹ

09/07/2024

 

ಭಾರತೀಯ ಸೇನೆಗೆ ತಾತ್ಕಾಲಿಕವಾಗಿ ನೇಮಿಸಲಾಗುವ ಅಗ್ನಿವೀರ್ ಯೋಜನೆಯನ್ನು ನಿಲ್ಲಿಸಬೇಕು ಎಂದು ಹುತಾತ್ಮ ಯೋಧ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ತಾಯಿ ಮಂಜು ಸಿಂಗ್ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

ಕೇಂದ್ರ ಸರಕಾರ ಈ ಯೋಜನೆಯನ್ನು ನಿಲ್ಲಿಸಬೇಕು ಎಂದು ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ. ನಾಲ್ಕು ವರ್ಷಗಳಿಗೆ ಮಾತ್ರ ಇವರನ್ನು ನೇಮಿಸಲಾಗುತ್ತದೆ. ಇದು ಸರಿಯಲ್ಲ. ಹಾಗೆಯೇ ಈಗಾಗಲೇ ನೇಮಕವಾಗಿರುವ ಅಗ್ನಿವೀರ್ ಯೋಧರಿಗೆ ಪೆನ್ಷನ್ ಕ್ಯಾಂಟೀನ್ ಮುಂತಾಗಿ ಇತರ ಯೋಧರಿಗೆ ಸಿಗುವ ಎಲ್ಲ ಸೌಲಭ್ಯ ದೊರಕಬೇಕು ಎಂದು ಮಂಜು ಸಿಂಗ್ ಹೇಳಿದ್ದಾರೆ.

ಹುತಾತ್ಮ ಯೋಧ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರುಮು ಅವರು ಜುಲೈ 5ರಂದು ಮರಣೋತ್ತರ ಕೀರ್ತಿಚಕ್ರ ಪುರಸ್ಕಾರವನ್ನು ನೀಡಿದ್ದರು.
2023 ಜುಲೈಯಲ್ಲಿ ಸಿಯಾಚಿನಲ್ಲಿ ನಡೆದ ಬೆಂಕಿ ಅನಾಹುತದಲ್ಲಿ ಅಂಶು ಮಾನ್ ಸಿಂಗ್ ವೀರ ಮೃತ್ಯುಗೀಡಾಗಿದ್ದರು. ಪಂಜಾಬ್ ರೆಜಿಮೆಂಟಿನ 26ನೇ ಬೆಟಾಲಿಯನ್ ಮೆಡಿಕಲ್ ವಿಭಾಗದಲ್ಲಿ ಇವರು ಕಾರ್ಯ ನಿರ್ವಹಿಸುತ್ತಿದ್ದರು. ಸ್ಪೋಟಕ ವಸ್ತುಗಳ ಹತ್ತಿರ ಬೆಂಕಿ ಅನಾಹುತ ಉಂಟಾದ ಕೂಡಲೇ ಔಷಧಗಳನ್ನು ಅಲ್ಲಿಂದ ತಿರುವುಗೊಳಿಸುವ ವೇಳೆ ಅಂಶು ಮಾನ್ ಸಿಂಗ್ ಅವರಿಗೆ ಬೆಂಕಿ ಹತ್ತಿಕೊಂಡಿತ್ತು. ಇಲ್ಲಿ ಸಿಲುಕಿಕೊಂಡ ಹಲವರನ್ನು ರಕ್ಷಿಸಿದ ಬಳಿಕ ಔಷಧಗಳನ್ನು ತೆರವುಗೊಳಿಸಲು ಅವರು ಶ್ರಮಿಸಿದ್ದರು. ಇವರು ಪುಣೆಯ ಮೆಡಿಕಲ್ ಕಾಲೇಜಿನಿಂದ ವೈದ್ಯ ಪದವಿಯನ್ನು ಪಡೆದಿದ್ದರು.

ಸಿಯಾಚಿನ್ ಗೆ ಅವರು ಅದೇ ಮೊದಲ ಬಾರಿ ನಿಯುಕ್ತರಾಗಿದ್ದರು. ಇವರು ಮೃತಪಡುವುದಕ್ಕಿಂತ ಎರಡು ತಿಂಗಳು ಮೊದಲಷ್ಟೇ ಸ್ಮೃತಿ ಸಿಂಗ್ ಅವರನ್ನು ವಿವಾಹವಾಗಿದ್ದರು. ಕೀರ್ತಿ ಚಕ್ರವನ್ನು ಪಡಕೊಂಡ ಬಳಿಕ ಪತ್ನಿ ಸ್ಮೃತಿ ಸಿಂಗ್ ಅವರ ಹಂಚಿಕೊಂಡ ಸಂಕಟದ ವಿಡಿಯೋವನ್ನು ಸೇನೆ ಬಿಡುಗಡೆಗೊಳಿಸಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ