ಇನ್ನು ಕಾರ್ಡ್ ಇಲ್ಲದೆ ಇದ್ದರೂ ಎಟಿಎಂನಿಂದ ಹಣ ಡ್ರಾ ಮಾಡಬಹುದು | ಹೇಗೆ?
13/02/2021
ಅರ್ಜೆಂಟ್ ಹಣ ಬೇಕಿತ್ತು ಆದರೆ, ಎಟಿಎಂ ಕಾರ್ಡ್ ತಂದಿಲ್ಲ ಎಂದು ಚಿಂತಿಸುವ ಅಗತ್ಯ ಇನ್ನು ಮುಂದೆ ಇಲ್ಲ. ಎಟಿಎಂ ಕಾರ್ಡ್ ಇಲ್ಲದಿದ್ದರೂ ಈಗ ನೀವು ಹಣ ಡ್ರಾ ಮಾಡಬಹುದು. ಈ ಹೊಸ ತಂತ್ರಜ್ಞಾನ ಸದ್ಯದಲ್ಲಿಯೇ ಬರಲು ಸಿದ್ಧವಾಗಿದ್ದು, ಬ್ಯಾಂಕ್ ಗ್ರಾಹಕರ ವ್ಯವಹಾರವನ್ನು ಸುಲಭಗೊಳಿಸಲು ಬ್ಯಾಂಕ್ ಗಳು ಚಿಂತನೆ ನಡೆಸಿವೆ.
ಎಟಿಎಂ ಕಾರ್ಡ್ ಬಳಸದೇ ಕೇವಲ ಕ್ಯೂಆರ್ ಕೋಡ್ ಮೂಲಕ ಹಣ ಪಡೆಯುವ ವ್ಯವಸ್ಥೆಯನ್ನು ಸದ್ಯದಲ್ಲಿಯೇ ಲಭ್ಯವಾಗಲಿದೆ. ಇದಕ್ಕಾಗಿ AGS Transact technologies ಜೊತೆಗೆ Mastercard ಕೈಜೋಡಿಸಿದ್ದು, ಇದಕ್ಕಾಗಿ ನೂತನ ತಂತ್ರಜ್ಞಾನದಡಿ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಬಳಸಿಕೊಂಡು ಎಟಿಎಂ ಯಂತ್ರದಿಂದ ಹಣಪಡೆಯ ಬಹುದಾಗಿದೆ.
ಸದ್ಯ Mastercard ಬಳಕೆದಾರರಿಗೆ ಹೊಸ ಸೌಲಭ್ಯ ಸಿಗಲಿದ್ದು, ಗ್ರಾಹಕರು ತಮ್ಮ ಹಣ ಪಡೆಯುವ ಮೊದಲು ಎಟಿಎಂ ಯಂತ್ರದ ಮೇಲೆ ಕಾಣುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕಿದೆ. ನಂತರ ತಮ್ಮ ಮೊಬೈಲ್ ನಲ್ಲಿ ಪಿನ್ ನಮೂದಿಸಿ, ಪಡೆಯಬೇಕಾದ ಹಣ ಮೊತ್ತವನ್ನು ಹಾಕಿ ನಗದು ಸ್ವೀಕರಿಸಬಹುದಾಗಿದೆ.