ಆಹಾ..! ಎಂದು ಕುಡಿಯುವ ಚಹಾದಲ್ಲೂ ಇದೆಯಾ ವಿಷಕಾರಿ ಅಂಶ?! - Mahanayaka
6:04 PM Wednesday 30 - October 2024

ಆಹಾ..! ಎಂದು ಕುಡಿಯುವ ಚಹಾದಲ್ಲೂ ಇದೆಯಾ ವಿಷಕಾರಿ ಅಂಶ?!

tea
10/07/2024

ಗೋಬಿ ಮಂಚೂರಿಯನ್, ಪಾನಿಪುರಿ, ಕಾಟನ್ ಕ್ಯಾಂಡಿ, ಕಬಾಬ್ ನಂತಹ ಆಹಾರಗಳಲ್ಲಿ ಕ್ಯಾನ್ಸರ್ ಗೆ ಕಾರಣವಾಗುವಂತಹ ಬಣ್ಣಗಳನ್ನು ಬಳಸುತ್ತಿರುವುದು ಇತ್ತೀಚೆಗೆ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಈ ಖಾದ್ಯಗಳಲ್ಲಿ ಬಣ್ಣಗಳ ಬಳಕೆ ನಿಷೇಧಿಸಲಾಗಿತ್ತು. ಇದು ಸಾರ್ವಜನಿಕರಿಗೆ ನೆಮ್ಮದಿಯ ಸುದ್ದಿಯನ್ನು ನೀಡಿತ್ತು. ಆದರೆ ಜನರು ರಿಲ್ಯಾಕ್ಸ್ ಆಗಲು ಕುಡಿಯುವ ಚಹಾದಲ್ಲಿ ಕೂಡ ಇಂತಹದ್ದೇ ಅಂಶಗಳು ಪತ್ತೆಯಾಗಿರುವುದನ್ನುಆಹಾರ ಸುರಕ್ಷತಾ ಅಧಿಕಾರಿ ಕಂಡು ಹಿಡಿದಿದ್ದಾರೆ.

ಹೌದು…!  ಸಂಸ್ಕರಣೆಯ ಸಮಯದಲ್ಲಿ ಚಹಾ ಎಲೆಗಳು ಮತ್ತು ಚೂರ್ಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕಗಳು ಮತ್ತು ಬಣ್ಣಗಳ ಬಳಕೆಯನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಕಂಡುಕೊಂಡಿದ್ದಾರೆ.  ವಾಸ್ತವವಾಗಿ, ಆಹಾರ ಪದಾರ್ಥಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ಜನರು ರೋಡಮೈನ್–ಬಿ ಮತ್ತು ಕಾರ್ಮೈಸಿನ್‌ ನಂತಹ ಆಹಾರ ಬಣ್ಣಗಳನ್ನು ಬಳಸುತ್ತಾರೆ ಎಂದು ಕಂಡುಬಂದಿದೆ.

ಈ ಬಣ್ಣಗಳನ್ನು ಸಾಕಷ್ಟು ವಿಷಕಾರಿ ಎಂದು ಪರಿಗಣಿಸಲಾಗುತ್ತದೆ. ಎಫ್‌ ಎಸ್‌ ಎಸ್‌ ಎಐ ಮೂಲಗಳು ಚಹಾದ ವಿಷಯದಲ್ಲಿ ಇವು ಕೀಟನಾಶಕಗಳು ಮತ್ತು ರಸಗೊಬ್ಬರಗಳಾಗಿವೆ ಎಂದು ಹೇಳುತ್ತವೆ. ಈ ಅಂಶಗಳು ಕ್ಯಾನ್ಸರ್ ಗೆ ಕಾರಣವಾಗಬಹುದು. ಚಹಾ ಬೆಳೆಯುವಾಗ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕಗಳನ್ನು ಬಳಸುವ ಚಹಾ ತೋಟಗಳ ವಿರುದ್ಧ ಕರ್ನಾಟಕದ ಆರೋಗ್ಯ ಸಚಿವಾಲಯ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಿದೆ.

ಬಾಗಲಕೋಟೆ, ಬೀದರ್, ಗದಗ, ಧಾರವಾಡ, ಹುಬ್ಬಳ್ಳಿ, ವಿಜಯನಗರ, ಕೊಪ್ಪಳ, ಬಳ್ಳಾರಿ ಮುಂತಾದ ಜಿಲ್ಲೆಗಳ ಆಹಾರ ನಿರೀಕ್ಷಕರು ಚಹಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕಗಳಿರುವುದನ್ನು ಪತ್ತೆ ಹಚ್ಚಿದ್ದು, ಕರ್ನಾಟಕ ಆರೋಗ್ಯ ಸಚಿವಾಲಯವು ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ 48 ಮಾದರಿಗಳನ್ನು ಸಂಗ್ರಹಿಸಿದೆ ಎಂದು ವರದಿಗಳಿಂದ ತಿಳಿದು ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ