ಎಪಿಎಂಸಿಯ ಅಧಿಕಾರಿಗಳ ಅವ್ಯವಹಾರ ಮತ್ತು ಭ್ರಷ್ಟಾಚಾರ ಖಂಡಿಸಿ ಅಹೋ ರಾತ್ರಿ ಧರಣಿ - Mahanayaka
6:17 AM Friday 20 - September 2024

ಎಪಿಎಂಸಿಯ ಅಧಿಕಾರಿಗಳ ಅವ್ಯವಹಾರ ಮತ್ತು ಭ್ರಷ್ಟಾಚಾರ ಖಂಡಿಸಿ ಅಹೋ ರಾತ್ರಿ ಧರಣಿ

protest
29/11/2023

ಉಡುಪಿ: ಉಡುಪಿ ಎಪಿಎಂಸಿಯ ಅಧಿಕಾರಿಗಳ ಅವ್ಯವಹಾರ ಮತ್ತು ಭ್ರಷ್ಟಾಚಾರ ಖಂಡಿಸಿ ಉಡುಪಿ ಎಪಿಎಂಸಿ ರಕ್ಷಣಾ ಸಮಿತಿಯ ನೇತೃತ್ವ ದಲ್ಲಿ ಆದಿಉಡುಪಿಯ ಎಪಿಎಂಸಿ ಪ್ರಾಂಣಗದ ಎದುರು ಇಂದಿನಿಂದ ಅಹೋ ರಾತ್ರಿ ಧರಣಿ ಆರಂಭಗೊಂಡಿತು.

ಒಂದು ನಿವೇಶನಕ್ಕೆ 8 ಲಕ್ಷ ಲಂಚ ಪಡೆದ ಅಂತಹ 11 ನಿವೇಶನಕ್ಕೆ 88ಲಕ್ಷ ಲಂಚ ಪಡೆದ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಕ್ಯಾನ್ಸರ್ ಪೀಡಿತ ವರ್ತಕನಿಂದ 250ರೂ. ಪರವಾನಿಗಾಗಿ 40ಸಾವಿರ ರೂ. ಲಂಚ ಪಡೆದ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಮರಣ ಹೊಂದಿ ಮೂರು ವರ್ಷಗಳಾದರೂ ಇಂದಿಗೂ ಆ ವ್ಯಕ್ತಿಯ ಹೆಸರಿನಲ್ಲಿಯೇ ಗೋಡೌನ್ನ ಬಾಡಿಗೆ ಪಡೆಯುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದು ಕೊಳ್ಳಬೇಕು ಎಂದು ಧರಣಿನಿರತರು ಒತ್ತಾಯಿಸಿದರು.

ಉಡುಪಿ ಎಪಿಎಂಸಿಯಲ್ಲಿ ಮೂಲಭೂತ ಸೌಕರ್ಯವಾದ ರಸ್ತೆ, ವಿದ್ಯುತ್, ಶೌಚಾಲಯ, ನೀರು ಮತ್ತು ಸ್ವಚ್ಛತೆಯನ್ನು ಮಾಡಿಕೊಟ್ಟಿಲ್ಲ. ಅಂಗಡಿ, ಗೋಡೌನ್, ಏಲಂ ಕಟ್ಟೆಯಿಂದ ಎಪಿಎಂಸಿ ಅಧಿಕಾರಿಗಳಿಗೆ ಬರುವ ಒಂದು ತಿಂಗಳ ಆದಾಯ 12.50 ಲಕ್ಷವಾದರೂ ಸರಕಾರಕ್ಕೆ ಕೇವಲ 4.5ಲಕ್ಷ ರೂ.ವನ್ನು ತೋರಿಸುತ್ತಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಅವರು ಆಗ್ರಹಿಸಿದರು.


Provided by

ಧರಣಿಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಸಮಿತಿ ಅಧ್ಯಕ್ಷ ವಿಜಯ ಕೊಡವೂರು ಕೃಷಿ ಉತ್ಪನ್ನ ಮಾರಾಟಗಾರರ ಒಕ್ಕೂಟದ ಅಧ್ಯಕ್ಷ ಸುಭಾಷಿತ್ ಕುಮಾರ್, ಎಪಿಎಂಸಿ ಮಾಜಿ ಸದಸ್ಯ ರಮಾಕಾಂತ್ ಕಾಮತ್, ರೈತ ಮೋರ್ಚಾ ರಾಜ್ಯ ಸಮಿತಿ ಸದಸ್ಯ ರಾಘವೇಂದ್ರ ಉಪ್ಪೂರು, ಹಣ್ಣು ತರಕಾರಿ ಮತ್ತು ದಿನಸಿ ವರ್ತಕರ ಸಂಘದ ಜೊತೆ ಕಾರ್ಯದರ್ಶಿ ಫಯಾಜ್ ಅಹ್ಮದ್, ಸಮಿತಿ ಉಪಾಧ್ಯಕ್ಷ ಪ್ರಭುಗೌಡ, ನಗರಸಭಾ ಸದಸ್ಯರಾದ ಪ್ರಭಾಕರ ಪೂಜಾರಿ, ಬಾಲಕೃಷ್ಣ ಶೆಟ್ಟಿ, ಮಾಜಿ ಸದಸ್ಯ ಪಾಡುರಂಗ ಮಲ್ಪೆ, ರಶ್ಮಿತಾ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು

ಇತ್ತೀಚಿನ ಸುದ್ದಿ