ಆಹ್ವಾನವಿಲ್ಲದೇ ಸಿಎಂ ಭೇಟಿಗೆ ಹೋದ ಕೆಪಿಸಿಸಿ ಸದಸ್ಯನನ್ನು ಎತ್ತಿ ಹೊರ ಹಾಕಿದ ಪೊಲೀಸರು
25/01/2021
ಇಡುಕ್ಕಿ: ಕೇರಳ ಸಿಎಂ ಪಿಣರಾಯಿ ವಿಜಯನ್ ಕಾರ್ಯಕ್ರಮಕ್ಕೆ ಆಹ್ವಾನವಿಲ್ಲದಿದ್ದರೂ ಆಗಮಿಸಿದ ಕೆಪಿಸಿಸಿ ಸದಸ್ಯ ಸಿ.ಪಿ.ಮ್ಯಾಥ್ಯು ಅವರನ್ನು ಕಾರ್ಯಕ್ರಮದಿಂದ ಹೊರಗಟ್ಟಲಾಗಿದೆ.
ಕೇರಳದ ತೊಡುಪುಳ ಖಾಸಗಿ ರೆಸಾರ್ಟ್ ನಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಇದೇ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಮ್ಯಾಥ್ಯು ಅವರು ರೆಸಾರ್ಟ್ ಗೆ ಬಂದಿದ್ದು, ಮಾಧ್ಯಮಗಳ ಜೊತೆಗೆ ಮಾತನಾಡಲು ಸಜ್ಜಾಗುತ್ತಿದ್ದಂತೆಯೇ ಪೊಲೀಸರು ಅವರನ್ನು ಬಂಧಿಸಿ ಎತ್ತಿಕೊಂಡೇ ಹೋಗಿದ್ದಾರೆ.
ಇಡುಕ್ಕಿಯಲ್ಲಿನ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡಲು ತಾನು ಸಿಎಂ ಅವರನ್ನು ಭೇಟಿ ಮಾಡಲು ಹೋಗಿದ್ದೇನೆ ಎಂದು ಮ್ಯಾಥ್ಯು ಹೇಳಿದ್ದಾರೆ. ಈ ಕಾರ್ಯಕ್ರಮಕ್ಕೆ ಆಹ್ವಾನಿತರಿಗೆ ಮಾತ್ರವೇ ಪ್ರವೇಶ ಇದ್ದ ಕಾರಣ ಮಾಧ್ಯು ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.