ಮರ್ಡರ್: ಏರ್ ಇಂಡಿಯಾ ಸಿಬ್ಬಂದಿ ಹತ್ಯೆ: ಎನ್ ಕೌಂಟರ್ ಮೂಲಕ ಶೂಟರ್ ಅರೆಸ್ಟ್
ಕಳೆದ ವರ್ಷ ಏರ್ ಇಂಡಿಯಾ ಉದ್ಯೋಗಿಯ ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ಶೂಟರ್ ನನ್ನು ಗುರುವಾರ ನೋಯ್ಡಾದಲ್ಲಿ ಎನ್ ಕೌಂಟರ್ ಮಾಡಿ ಬಂಧಿಸಲಾಗಿದೆ.
ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸಿಖಂದರ್, ಏರ್ ಇಂಡಿಯಾ ಉದ್ಯೋಗಿ ಸೂರಜ್ ಮನ್ ಅವರ ಹತ್ಯೆಯನ್ನು ಪ್ರಸ್ತುತ ದೆಹಲಿಯ ಮಂಡೋಲಿ ಜೈಲಿನಲ್ಲಿರುವ ದರೋಡೆಕೋರ ಕಪಿಲ್ ಮಾನ್ ಆಯೋಜಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೈಲಿನಲ್ಲಿರುವ ದರೋಡೆಕೋರರಾದ ಕಪಿಲ್ ಮತ್ತು ಪರ್ವೇಶ್ ಮನ್ ನಡುವೆ ನಡೆಯುತ್ತಿರುವ ಗ್ಯಾಂಗ್ ವಾರ್ ಮಧ್ಯೆ ಕಳೆದ ವರ್ಷ ಜನವರಿ 19 ರಂದು ನೋಯ್ಡಾದ ಸೆಕ್ಟರ್ 104 ರ ಜಿಮ್ ಹೊರಗೆ ಸೂರಜ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.
ಘಟನೆ ನಡೆದ ರಾತ್ರಿ ಸೂರಜ್ ಜಿಮ್ ಹೊರಗೆ ಕಾರಿನಲ್ಲಿ ಕುಳಿತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿದ್ದರು.
ಕಪಿಲ್ ಮತ್ತು ಪರ್ವೇಶ್ ನಡುವಿನ ದೀರ್ಘಕಾಲದ ಗ್ಯಾಂಗ್ ವಾರ್ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿತ್ತು. ಕಪಿಲ್ ತಂದೆಯನ್ನು ಪರ್ವೇಶ್ ಮತ್ತು ಆತನ ಸಹಚರರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj