ಪಟಾಕಿ ಎಫೆಕ್ಟ್: ದೆಹಲಿಯಲ್ಲಿ ಉಸಿರಾಡಲೂ ಕಷ್ಟವಾಗ್ತಿದೆ!
ನವದೆಹಲಿ: ದೀಪಾವಳಿ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನಿಷೇಧದ ನಡುವೆಯೂ ಪಟಾಕಿ ಸಿಡಿಸಲಾಗಿದೆ. ಇದರಿಂದಾಗಿ ಇದೀಗ ದೆಹಲಿಯಲ್ಲಿ ಉಸಿರಾಡಲು ಜನರು ಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ.
ದೆಹಲಿ, ಗುರುಗ್ರಾಮ್, ನೋಯ್ಡಾ ಮತ್ತು ಫರಿದಾಬಾದ್ ನಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಕಳಪೆ ಮಟ್ಟದಲ್ಲಿದ್ದು, ದೀಪಾವಳಿ ಪ್ರಯುಕ್ತ ಪಟಾಕಿ ಸಿಡಿಸಲು ಡೆಸಿಬಲ್ ಮಿತಿ ಹಾಕಿದ್ದರೂ, ಅದನ್ನೂ ಮೀರಿ ಪಟಾಕಿ ಸಿಡಿಸಿದ್ದು, ಪರಿಣಾಮವಾಗಿ ವ್ಯಾಪಕವಾಗಿ ವಾಯುಮಾಲಿನ್ಯ ಸೃಷ್ಟಿಯಾಗಿದೆ.
ಪಟಾಕಿ ಸಿಡಿಸಿದ ಪರಿಣಾಮ ಸಾರ್ವಜನಿಕರಿಗೆ ಉಸಿರಾಡಲೂ ಕಷ್ಟಕರವಾಗುವಂತಾಗಿದೆ. ದೀಪಾವಳಿ ಆಚರಣೆ ಇನ್ನಷ್ಟು ದಿನಗಳು ಇರುವ ಹಿನ್ನೆಲೆಯಲ್ಲಿ ಮತ್ತಷ್ಟು ವಾಯು ಮಾಲಿನ್ಯದ ಸಾಧ್ಯತೆ ಇದೆ ಎನ್ನಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka