ವಿಮಾನ ನಿಲ್ದಾಣದಲ್ಲಿ ಕಿರಿಯ ಕಾರ್ಯನಿರ್ವಾಹಕ ಹುದ್ದೆಗಳ ಭರ್ತಿ : ಆಯ್ಕೆಯಾದವರಿಗೆ 1 ಲಕ್ಷದವರೆಗೆ ಸಂಬಳ

airports authority of india jobs 2025
15/03/2025

Airports Authority of India Jobs 2025 : ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವಿವಿಧ ಮೂರು ವಿಭಾಗಗಳಲ್ಲಿ ಕಿರಿಯ ಕಾರ್ಯನಿರ್ವಾಹಕ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುವುದಕ್ಕಾಗಿ ಜನವರಿ 2025 ರಂದು ಅಧಿಸೂಚನೆ ಹೊರಡಿಸಲಾಗಿತ್ತು.

ಈ ಉದ್ಯೋಗ ಭರ್ತಿಗೆ ಅರ್ಜಿ ಸಲ್ಲಿಸಲು ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಒಂದು ಅವಕಾಶವನ್ನು ಉಪಯೋಗಪಡಿಸಿಕೊಳ್ಳಿ. ಈ ನೇಮಕಾತಿಗೆ ಸಂಬಂದಿಸಿದ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳ ವಿವರ :

ಒಟ್ಟು 83 ಹುದ್ದೆಗಳನ್ನು ಈ ಒಂದು ನೇಮಕಾತಿಯಲ್ಲಿ ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ವಿಭಾಗವಾರು ಖಾಲಿ ಹುದ್ದೆಗಳ ವಿವರ ಈ ಕೆಳಗಿನಂತಿದೆ.
* ಜೂನಿಯರ್ ಎಕ್ಸಿಕ್ಯೂಟಿವ್ (ಅಗ್ನಿಶಾಮಕ ಸೇವೆ) – 13 ಹುದ್ದೆಗಳು
* ಜೂನಿಯರ್ ಎಕ್ಸಿಕ್ಯೂಟಿವ್ (ಮಾನವ ಸಂಪನ್ಮೂಲ) – 66 ಹುದ್ದೆಗಳು
* ಜೂನಿಯರ್ ಎಕ್ಸಿಕ್ಯೂಟಿವ್ (ಅಫೀಷಿಯಲ್ ಭಾಷೆ ವಿಭಾಗ) – 04 ಹುದ್ದೆಗಳು

ವಿಮಾನ ನಿಲ್ದಾಣ ಇಲಾಖೆಯ ಮೇಲಿನ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆಗಳು :

* ಅಗ್ನಿಶಾಮಕ ಸೇವೆ ವಿಭಾಗದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂಜಿನಿಯರಿಂಗ್ ಪದವಿ ಮುಗಿಸಿರಬೇಕು
* ಮಾನವ ಸಂಪನ್ಮೂಲ ವಿಭಾಗದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಂಬಂಧಪಟ್ಟ ವಿಭಾಗದಲ್ಲಿ ಎಂಬಿಎ ಪದವಿ ಮುಗಿಸಿರಬೇಕು.
* ಆಫೀಸಿಯಲ್ ಭಾಷೆ ವಿಭಾಗದ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಇಂಗ್ಲೀಷ್ ಅಥವಾ ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರಬೇಕು.

Age limit – ವಯೋಮಿತಿ ಅರ್ಹತೆ : ನಿಗದಿತ ದಿನಾಂಕ ಮಾರ್ಚ್ 18, 2025ಕ್ಕೆ 27 ವರ್ಷದ ಒಳಗಿರಬೇಕು.

ಮಾಸಿಕ ವೇತನ ಎಷ್ಟಿರಲಿದೆ?

ವಿಮಾನ ನಿಲ್ದಾಣ ಪ್ರಾಧಿಕಾರದ ಈ ಹುದ್ದೆಗಳು ಗ್ರೂಪ್ ಬಿ ಹುದ್ದೆಗಳಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 40,000ರೂ. ನಿಂದ 1.40 ಲಕ್ಷ ರೂ. ವರೆಗೆ ವೇತನ ಸಿಗಲಿದೆ.

ಅರ್ಜಿ ಸಲ್ಲಿಕೆಯ ದಿನಾಂಕಗಳು :

* ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ 17 ರಿಂದ ಆರಂಭವಾಗಿದ್ದು ಕೊನೆಯ ದಿನಾಂಕವು ಮಾರ್ಚ 18, 2025 ಆಗಿರುತ್ತದೆ.

ಅರ್ಜಿ ಸಲ್ಲಿಸಲು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕೃತ ಜಾಲತಾಣ – www.aai.aero


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

 

ಇತ್ತೀಚಿನ ಸುದ್ದಿ

Exit mobile version