46.1 ಲಕ್ಷ ಮೊಬೈಲ್ ಬಳಕೆದಾರರನ್ನು ಕಳೆದುಕೊಂಡ ಏರ್ ಟೆಲ್!
ನವದೆಹಲಿ: ಭಾರ್ತಿ ಏರ್ ಟೆಲ್ ಕಂಪೆನಿಯು ಮೇ ತಿಂಗಳಿನಲ್ಲಿ 46.1 ಲಕ್ಷ ಮೊಬೈಲ್ ಬಳಕೆದಾರರನ್ನು ಕಳೆದುಕೊಂಡಿದೆ ಎಂದು ವರದಿಯಾಗಿದ್ದು, ಇದೇ ಸಮಯದಲ್ಲಿ ರಿಲಯನ್ಸ್ ಜಿಯೋ ಕಂಪೆನಿಯು 35.54 ಲಕ್ಷ ಬಳಕೆದಾರರನ್ನು ಗಳಿಸಿಕೊಂಡಿದೆ.
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಮಾಹಿತಿಯನ್ನು ನೀಡಿದೆ. ಮೇ ತಿಂಗಳಿನಲ್ಲಿ ಭಾರತದ ಮೊಬೈಲ್ ಮಾರುಕಟ್ಟೆಯು 62.7 ಲಕ್ಷ ಬಳಕೆದಾರರನ್ನು ಕಳೆದುಕೊಂಡಿದೆ. ಇದರಿಂದಾಗಿ ಒಟ್ಟಾರೆಯಾಗಿ ಬಳಕೆದಾರರ ಸಂಖ್ಯೆಯು 117.6 ಕೋಟಿಗೆ ಇಳಿಯಾಗಿದೆ ಎಂದು ತಿಳಿದು ಬಂದಿದೆ.
ಮೇ ತಿಂಗಳಿನಲ್ಲಿ ಜಿಯೋ ಹೊಸದಾಗಿ 35.54 ಲಕ್ಷ ಮೊಬೈಲ್ ಬಳಕೆದಾರರು ಸೇರ್ಪಡೆಯಾಗಿದ್ದು, ಒಟ್ಟು ಬಳಕೆದಾರರ ಸಂಖ್ಯೆ 43.12 ಕೋಟಿಗೆ ಏರಿಕೆಯಾಗಿದೆ. ವೋಡಾಫೋನ್ ಐಡಿಯಾ ಕಂಪೆನಿ ಕೂಡ 42.8 ಲಕ್ಷ ಬಳಕೆದಾರರನ್ನು ಕಳೆದುಕೊಂಡೊದೆ. ಇದರ ಒಟ್ಟು ಬಳಕೆದಾರರ ಸಂಖ್ಯೆ 27.7ರಷ್ಟು ಇಳಿಕೆ ಕಂಡಿದೆ.
ನಿನ್ನೆಯಷ್ಟೇ ಏರ್ ಟೆಲ್ ಅಗ್ಗದ(ಕಡಿಮೆಯ) ಪ್ಲಾನ್ ಗಳನ್ನು ರದ್ದುಗೊಳಿಸಿ, ದುಬಾರಿ ಪ್ಲಾನ್ ಗಳನ್ನು ಮಾತ್ರವೇ ಚಾಲ್ತಿಯಲ್ಲಿಟ್ಟಿದೆ. ಇದರ ಪರಿಣಾಮ ಇನ್ನಷ್ಟು ಬಳಕೆದಾರರನ್ನು ಏರ್ ಟೆಲ್ ಕಳೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಏರ್ ಟೆಲ್, ವೋಡಫೋನ್ ಐಡಿಯಾ ಬಳಕೆದಾರರು ಕಡಿಮೆಯಾಗುತ್ತಿದ್ದರೆ, ಜಿಯೋ ಬಳಕೆದಾರರಲ್ಲಿ ಏರಿಕೆಯಾಗುತ್ತಲೇ ಇದೆ.
ಇನ್ನಷ್ಟು ಸುದ್ದಿಗಳು…
ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾನಿಂದ ನಟಿ ಶೆರ್ಲಿನ್ ಚೋಪ್ರಾಗೆ ಲೈಂಗಿಕ ಕಿರುಕುಳ!
ಸೆಕ್ಸ್ ವಿಡಿಯೋ ತಯಾರಿಸುವುದು ಕೂಡ ಒಂದು ಉದ್ಯೋಗ | ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಸೋಮಿ ಅಲಿ
ನ್ಯಾಯಾಧೀಶರನ್ನು ರಸ್ತೆಯಲ್ಲಿಯೇ ಭೀಕರ ಹತ್ಯೆ: ಸಿಸಿ ಕ್ಯಾಮರದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ
ಬಿ.ಎಲ್.ಸಂತೋಷ್ ಗೆ ಸಿಎಂ ಸ್ಥಾನ ಇಲ್ಲ? | ಸಿಎಂ ಸ್ಥಾನ ಕೈತಪ್ಪಲು ಜವಾಬ್ದಾರಿಗಳೇ ಕಾರಣವಾಗುತ್ತಾ?