ಏರ್ಟೆಲ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ | ನಾಳೆಯಿಂದ ಹೊಸ ಬದಲಾವಣೆ
ನವದೆಹಲಿ: ನಂಬರ್ 1 ನೆಟ್ ವರ್ಕ್ ಎಂದು ಹೇಳಿಕೊಳ್ಳುತ್ತಿರುವ ಏರ್ಟೆಲ್ ಇದೀಗ ಗ್ರಾಹಕರಿಗೆ ಶಾಕ್ ನೀಡಿದ್ದು, ಕಡಿಮೆ ಬೆಲೆಯ ರೀಚಾರ್ಜ್ ಗಳನ್ನು ರದ್ದುಗೊಳಿಸಿದೆ.ಇದರ ಜೊತೆಗೆ ಹಲವು ಪ್ಲಾನ್ ಗಳನ್ನು ದುಬಾರಿಗೊಳಿಸುವ ಮೂಲಕ ಗ್ರಾಹಕರಿಗೆ ಹೊರೆಯಾಗಿದೆ.
ಏರ್ಟೆಲ್ ನಲ್ಲಿ ಅತ್ಯಂತ ಕಡಿಮೆ ಬೆಲೆಯ ರೀಚಾರ್ಜ್ 49 ರೂಪಾಯಿಗಳಿಂದ ಆರಂಭವಾಗುತ್ತಿತ್ತು. ಈಗ ಬದಲಾಗಿರುವ ದರದಂತೆ ಇನ್ನು ಮುಂದೆ ಏರ್ಟೆಲ್ ನಲ್ಲಿ 79 ರೂಪಾಯಿಗಳಿಂದ ರೀಚಾರ್ಜ್ ಬೆಲೆಗಳು ಆರಂಭವಾಗಲಿದೆ. ಎಲ್ಲ ಟೆಲಿಕಾಂ ಕಂಪೆನಿಗಳು ಗ್ರಾಹಕರನ್ನು ಸೆಳೆಯಲು ಬೆಲೆ ಕಡಿಮೆ ಮಾಡಿದರೆ, ಏರ್ಟೆಲ್ ಮಾತ್ರ ದಿನದಿಂದ ದಿನಕ್ಕೆ ಬೆಲೆಯನ್ನು ಏರಿಸುತ್ತಲೇ ಹೋಗುತ್ತಿದೆ.
ಜುಲೈ 29ರಿಂದ ಏರ್ಟೆಲ್ ಗ್ರಾಹಕರಿಗೆ ದುಬಾರಿಯಾಗಲಿದೆ. 79 ರೂಪಾಯಿಗಳ ಪ್ರಿಪೇಯ್ಡ್ ಯೋಜನೆಯಲ್ಲಿ 64 ರೂಪಾಯಿಗಳ ಟಾಕ್ ಟೈಮ್ ಲಭ್ಯವಿದೆ. ಈ ಯೋಜನೆಯ ಸಿಂಧುತ್ವವು 28 ದಿನಗಳು. ಬಳಕೆದಾರರಿಗೆ 200 ಎಂಬಿ ಡೇಟಾ ಸಿಗಲಿದೆ. 49 ರೂಪಾಯಿಗಳ ಯೋಜನೆಯಲ್ಲಿ ಬಳಕೆದಾರರಿಗೆ 38 ರೂಪಾಯಿಗಳ ಟಾಕ್ ಟೈಮ್ ಸಿಗ್ತಿತ್ತು. 100 ಎಂಬಿ ಡೇಟಾ ಸಿಗ್ತಿತ್ತು. 28 ದಿನಗಳ ಸಿಂಧುತ್ವವನ್ನು ಇದು ಹೊಂದಿತ್ತು. ಈಗಾಗಲೇ ಏರ್ಟೆಲ್ 199 ರೂಪಾಯಿ ಮತ್ತು 249 ರೂಪಾಯಿ ಪ್ಲಾನ್ ರದ್ದುಗೊಳಿಸಿದೆ.
ಇನ್ನಷ್ಟು ಸುದ್ದಿಗಳು…
“ನಮ್ಮನ್ನು ಕೈ ಬಿಡಬೇಡಿ…”! ಸಚಿವ ಸ್ಥಾನಕ್ಕಾಗಿ ಯಡಿಯೂರಪ್ಪ ಹಿಂದೆ ಬಿದ್ದ ಮಾಜಿ ಸಚಿವರು, ಶಾಸಕರು!
ಪ್ರವಾಹದ ಬೆನ್ನಲ್ಲೇ ಮನೆಯ ತಾರಸಿ, ರಸ್ತೆಯಲ್ಲಿ ಪತ್ತೆಯಾಗ್ತಿವೆ ಮೊಸಳೆಗಳು!
ಟ್ರಕ್-ಬಸ್ ನಡುವೆ ಭೀಕರ ಅಪಘಾತ: 18 ಮಂದಿ ಸ್ಥಳದಲ್ಲಿಯೇ ಸಾವು
ಯಡಿಯೂರಪ್ಪಗೆ ವಯಸ್ಸಾಗಿಲ್ಲ, ಮದುವೆ ಮಾಡಿಸಿದ್ರೆ ಮಕ್ಕಳಾಗ್ತವೆ | ಸಿ.ಎಂ.ಇಬ್ರಾಹಿಂ