ಐವರು ಬಿಜೆಪಿ ನಾಯಕರಿರುವ ಕಾರ್ಯಕ್ರಮಕ್ಕೆ ಒಬ್ಬನೇ ವೀಕ್ಷಕ | ಫೋಟೋ ಹಂಚಿಕೊಂಡು ವ್ಯಂಗ್ಯವಾಡಿದ ಕಾಂಗ್ರೆಸ್ ನಾಯಕ - Mahanayaka

ಐವರು ಬಿಜೆಪಿ ನಾಯಕರಿರುವ ಕಾರ್ಯಕ್ರಮಕ್ಕೆ ಒಬ್ಬನೇ ವೀಕ್ಷಕ | ಫೋಟೋ ಹಂಚಿಕೊಂಡು ವ್ಯಂಗ್ಯವಾಡಿದ ಕಾಂಗ್ರೆಸ್ ನಾಯಕ

21/02/2021

ನವದೆಹಲಿ: ಕೇಂದ್ರದ ಮಾಜಿ ಸಚಿವ  ಶಶಿ ತರೂರ್ ಬಿಜೆಪಿ ಕಾರ್ಯಕ್ರಮದ ಫೋಟೋವೊಂದನ್ನು ಹಂಚಿಕೊಂಡು ಲೇವಡಿ ಮಾಡಿದ್ದು, ಇದು ಬಿಜೆಪಿಯ ಅಂತ್ಯ ಎಂದು ಹೇಳಿದ್ದಾರೆ.

ಫೋಟೋದಲ್ಲಿ ಬಿಜೆಪಿಯ ಕಾರ್ಯಕ್ರಮ ಕಂಡು ಬಂದಿದ್ದು, ವೇದಿಕೆಯ ಮೇಲೆ ಐವರು ನಾಯಕರು ಆಸೀನರಾಗಿದ್ದಾರೆ. ಕಾರ್ಯಕ್ರಮದ ಬ್ಯಾನರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ 7 ನಾಯಕರ ಫೋಟೋ ಹಾಕಲಾಗಿದೆ. ವೇದಿಕೆಯ ಮುಂಭಾಗದಲ್ಲಿ 30-40 ಕುರ್ಚಿ ಹಾಕಲಾಗಿದ್ದು, ಈ ಕುರ್ಚಿಯಲ್ಲಿ  ಓರ್ವ ವ್ಯಕ್ತಿ ಮಾತ್ರವೇ ಕುಳಿತಿದ್ದಾನೆ. ಈ ಪೋಟೋವನ್ನು ಟ್ವೀಟ್ ಮಾಡಿರುವ ಶಶಿ ತರೂರ್ ಬಿಜೆಪಿಯ ಅಂತ್ಯ ಎಂದು ಬರೆದುಕೊಂಡಿದ್ದಾರೆ.

ಶಶಿತರೂರ್ ಮಾಡಿರುವ ಮತ್ತೊಂದು ಟ್ವೀಟ್ ನಲ್ಲಿ ಪೆಟ್ರೋಲ್ ಬೆಲೆ ಏರಿಕೆ, ಡೀಸೆಲ್ ಬೆಲೆ ಏರಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯೋಗ ಗುರು ಬಾಬಾ ರಾಮ್ ದೇವ್ ಅವರ ಶೀರ್ಷಾಸನದ ಕಾರ್ಟೂನ್ ಹಂಚಿಕೊಂಡಿದ್ದರು.

ಇತ್ತೀಚಿನ ಸುದ್ದಿ