11:57 AM Wednesday 12 - March 2025

ಜಾದೂವೇಳೆ ಆಕಸ್ಮಿಕವಾಗಿ ಬ್ಲೇಡ್ ಗಳ ಮಾಲೆ ನುಂಗಿದ ಮಾಂತ್ರಿಕ!

gorakhhpur jadu
26/04/2022

ಗೋರಖ್‌ ಪುರ: ಕಣ್ಕಟ್ಟು ಜಾದೂ ವೇಳೆ ಮಾಂತ್ರಿಕ  ಆಕಸ್ಮಿಕವಾಗಿ ಬ್ಲೇಡ್ ನುಂಗಿದ್ದು, ಪರಿಣಾಮವಾಗಿ 20 ಬ್ಲೇಡ್ ಗಳು ಮಾಂತ್ರಿಕನ ಹೊಟ್ಟೆಗೆ ಸೇರಿದ ಘಟನೆ ನಡೆದಿದೆ.

ಗೋರಖ್‌ಪುರದ ಸಿದ್ದಾರ್ಥನಗರ ಜಿಲ್ಲೆಯ ನಿವಾಸಿ 22 ವರ್ಷದ ಜಾದೂಗಾರ ಮೋಹನ್ ಎಂಬಾತ ದಾರಗಳ ಮೂಲಕ ಬ್ಲೇಡ್ ನ್ನು ತನ್ನ ಬಾಯಿ ಮೂಲಕ ಇಳಿಸಿದ್ದು, ಇದು ಆಕಸ್ಮಿಕವಾಗಿ ಹೊಟ್ಟೆಗೆ ಸೇರಿದೆ.

ಇದಾದ ಬಳಿಕ ಈತನಿಗೆ ಯಾವುದೇ ಆಹಾರಗಳನ್ನು ಸೇವಿಸಲು ಸಾಧ್ಯವಾಗುತ್ತಿರಲಿಲ್ಲ. ದ್ರವ ರೂಪದ ಆಹಾರ ಮಾತ್ರವೇ ಈತ ಸೇವಿಸಬೇಕಾದ ಪರಿಸ್ಥಿತಿ ಉಂಟಾಗಿತ್ತು. ದಿನದಿಂದ ದಿನಕ್ಕೆ ಹೊಟ್ಟೆ ನೋವು ಹೆಚ್ಚಾದ ಕಾರಣ ಕೊನೆಗೆ ಆತ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಏಪ್ರಿಲ್ 24ರಂದು ಸಿಟಿ ಆಸ್ಪತ್ರೆಯ ಡಾ.ವಿವೇಕ್ ಮಿಶ್ರಾ  ಅವರನ್ನು ಭೇಟಿ ಮಾಡಿ, ನಡೆದ ಘಟನೆಯ ಬಗ್ಗೆ ವಿವರಿಸಿದ್ದಾರೆ. ಈ ವೇಳೆ ವೈದ್ಯರು ರೋಗಶಾಸ್ತ್ರ ಮತ್ತು ವಿಕಿರಣಶಾಸ್ತ್ರ ಪರೀಕ್ಷೆಯನ್ನು ಮಾಡಿದರು. ನಂತರ ಎಂಡೋಸ್ಕೋಪ್ ಮೂಲಕ ಆಪರೇಷನ್ ಮಾಡಲು ನಿರ್ಧರಿಸಿದರು.

ಈ ಕಾರ್ಯಾಚರಣೆಯಲ್ಲಿ ಯಾವುದೇ ಹೊಲಿಗೆಗಳ ಅಗತ್ಯವಿಲ್ಲ. ಮೈಕ್ರೋಕ್ಯಾಮೆರಾ ಮತ್ತು ಕ್ಲಚ್ ಸಹಾಯದಿಂದ ವೈದ್ಯರು ಬ್ಲೇಡ್‌ಗಳ ಹಾರವನ್ನು ಹೊರ ತೆಗೆದರು. ಆದರೆ, ಹಲವೆಡೆ ಬ್ಲೇಡ್‌ನ ಚೂಪಾದ ತುದಿಯಿಂದ ಕರುಳುಗಳು ಗಾಯಗೊಂಡಿದೆ. ಹೀಗಾಗಿ ಮೋಹನ್‌ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಫ್ರಾನ್ಸ್ ಅಧ್ಯಕ್ಷರಾಗಿ ಪುನರಾಯ್ಕೆಯಾದ  ಇಮ್ಯಾನುಯೆಲ್ ಮ್ಯಾಕ್ರೋನ್

ಕಾರಿನ ಸೈಲೆನ್ಸರ್ ನಲ್ಲಿ ಕಾಣಿಸಿಕೊಂಡ ಹೊಗೆ: ಕಾರಿನಿಂದ ಇಳಿದರೂ ಹೋಯ್ತು ಪ್ರಾಣ!

ಬುಲ್ಡೋಜರ್ ನಿಂದ ಎಟಿಎಂ ಧ್ವಂಸಗೊಳಿಸಿ ಹಣದೋಚಿದ ಕಳ್ಳರು:  ಕಳ್ಳರಿಗೆ ಮಾದರಿಯಾಯ್ತೆ ಬುಲ್ಡೋಜರ್ ಕಾರ್ಯಾಚರಣೆ!

ಪ್ರೆಶರ್ ಕುಕ್ಕರ್ ಸ್ಫೋಟ: ಯುವಕ ದಾರುಣ ಸಾವು

ಮಹತ್ವ ಕಳೆದುಕೊಂಡ ನಿಷೇಧ ಅಭಿಯಾನಗಳು:  ಕೆಲವರ ಪ್ರಚಾರಕ್ಕಾಗಿ ನಡೆಯಿತೇ ನಿಷೇಧ ಅಭಿಯಾನ?

ಇತ್ತೀಚಿನ ಸುದ್ದಿ

Exit mobile version