ಐಎಎಸ್—ಕೆಎಎಸ್ ಹುದ್ದೆಗೆ ಸೇರಲು ಆಸಕ್ತರಿಗೆ ಸಿಹಿ ಸುದ್ದಿ: ಪ್ರಬಂಧ ಬರೆಯಿರಿ ಸೌಲಭ್ಯ ಪಡೆಯಿರಿ - Mahanayaka
10:05 AM Thursday 12 - December 2024

ಐಎಎಸ್—ಕೆಎಎಸ್ ಹುದ್ದೆಗೆ ಸೇರಲು ಆಸಕ್ತರಿಗೆ ಸಿಹಿ ಸುದ್ದಿ: ಪ್ರಬಂಧ ಬರೆಯಿರಿ ಸೌಲಭ್ಯ ಪಡೆಯಿರಿ

akka ias academy
04/11/2022

ಬೆಂಗಳೂರು: ಐಎಎಸ್ ಅಥವಾ ಕೆಎಎಸ್ ಹುದ್ದೆಗೆ ಸೇರಲು ಆಸಕ್ತಿ ಹೊಂದಿರುವವರಿಗೆ ರಾಜ್ಯದ ಖ್ಯಾತ ಐಎಎಸ್ ತರಬೇತಿ ಸಂಸ್ಥೆ ‘ಅಕ್ಕ ಐಎಎಸ್ ಅಕಾಡೆಮಿ’ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಂಸ್ಥೆಯು ಆಯೋಜಿಸಿರುವ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದರೆ ಸಂಸ್ಥೆಯ ವತಿಯಿಂದ ಹಲವು ಸೌಲಭ್ಯಗಳನ್ನು ನೀಡುವುದಾಗಿ ಘೋಷಿಸಿದೆ.

ಅರ್ಹತೆಗಳು:

*ಪ್ರಬಂಧ ಬರೆಯುವವರು ಕರ್ನಾಟಕ ರಾಜ್ಯದ ನಿವಾಸಿಗಳಾಗಿರಬೇಕು. ವಯೋ ಮಿತಿ 21ರಿಂದ 29 ವರ್ಷದೊಳಗಿರಬೇಕು.

*ಐಎಎಸ್ ಅಥವಾ ಕೆಎಎಸ್ ಹುದ್ದೆ ಸೇರಲು ಆಸಕ್ತಿ ಹೊಂದಿರಬೇಕು.

*ಪದವಿ ಪೂರೈಸಿರಬೇಕು ಅಥವಾ ಅಂತಿಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು.

ಬಹುಮಾನಗಳು:

*ಪ್ರಥಮ ಸ್ಥಾನ ಪಡೆದವರಿಗೆ ಬೆಳ್ಳಿಯ ಪದಕ, ಟ್ರೋಫಿ, ಪ್ರಮಾಣ ಪತ್ರ ಹಾಗೂ ಕೆಎಎಸ್ ಅಥವಾ  ಐಎಎಸ್ ಉಚಿತ ತರಬೇತಿ.

*ದ್ವಿತೀಯ ಸ್ಥಾನ ಪಡೆದವರಿಗೆ ಬೆಳ್ಳಿಯ ಪದಕ, ಟ್ರೋಫಿ, ಪ್ರಮಾಣ ಪತ್ರ ಮತ್ತು ತರಬೇತಿಯ ಶುಲ್ಕದಲ್ಲಿ ಶೇ.75 ವಿನಾಯಿತಿ.

*ತೃತೀಯ ಸ್ಥಾನ ಪಡೆದವರಿಗೆ ಬೆಳ್ಳಿ ಪದಕ, ಟ್ರೋಫಿ, ಪ್ರಮಾಣ ಪತ್ರ ಮತ್ತು ತರಬೇತಿಯ ಶುಲ್ಕದಲ್ಲಿ ಶೇ.50 ವಿನಾಯಿತಿ

*ಉಳಿದಂತೆ 10 ಜನರಿಗೆ ಸಮಾಧಾನಕರ ಬಹುಮಾನ ಟ್ರೋಫಿ, ಪ್ರಮಾಣ ಪತ್ರ ಮತ್ತು ತರಬೇತಿಯ ಶುಲ್ಕದಲ್ಲಿ ಶೇ.25 ವಿನಾಯಿತಿ.

*ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ಹಾಗೂ ತರಬೇತಿ ಶುಲ್ಕದಲ್ಲಿ ಶೇ.10 ವಿನಾಯಿತಿ ನೀಡಲಾಗುವುದು.

ಪ್ರಬಂಧದ ವಿಷಯ:

*ಕರ್ನಾಟಕ ಏಕೀಕರಣ

*ಕನ್ನಡ ಭಾಷೆಯ ಉಗಮ ಮತ್ತು ವಿಕಾಸ

*ಇತರ ದ್ರಾವಿಡ ಭಾಷೆಗಳೊಂದಿಗೆ ಕನ್ನಡ ಭಾಷೆಯ ತೌಲನಿಕ ಅಧ್ಯಯನ
ಆಡಳಿಯ ಭಾಷೆಯಾಗಿ ಕನ್ನಡ: ಒಂದು ವಿಶ್ಲೇಷಣೆ

ವಿಜೇತರಿಗೆ ನೀಡುವ ಸೌಲಭ್ಯಗಳು:

*₹ 1,50,000 ಮೌಲ್ಯದ ಐಎಎಸ್ ತರಬೇತಿ/ ₹ 45,000 ಮೌಲ್ಯದ ತರಬೇತಿಯಲ್ಲಿ ವಿನಾಯಿತಿ ಇರುತ್ತದೆ.

*09 ತಿಂಗಳ ಐಎಎಸ್ ತರಬೇತಿ/ 7 ತಿಂಗಳ ಕೆಎಎಸ್ ತರಬೇತಿಯಲ್ಲಿ ಮುಖ್ಯಪರೀಕ್ಷೆ ಮತ್ತು ಪೂರ್ವಭಾವಿ ಪರೀಕ್ಷೆಗೆ ತರಬೇತಿ ನೀಡಲಾಗುತ್ತದೆ.

*ವಾರಾಂತ್ಯ ಹಾಗೂ ತಿಂಗಳ ಅಂತ್ಯದಲ್ಲಿ ಮಾದರಿ ಪರೀಕ್ಷೆಗಳನ್ನು ಉಚಿತವಾಗಿ ನೀಡಲಾಗುವುದು.

*ಉಚಿತ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗುವುದು.

*ತರಬೇತಿಗೆ ದಾಖಲಾದವರಿಗೆ ಅಧ್ಯಯನ ಸಾಮಗ್ರಿ ನೀಡಲಾಗುವುದು ಹಾಗೂ ಐಎಎಸ್, ಕೆಎಎಸ್ ಅಧಿಕಾರಿಗಳಿಂದ ಮಾರ್ಗದರ್ಶನ ಮಾಡಿಸಲಾಗುವುದು.


ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು 100 ರೂಪಾಯಿ ಪ್ರವೇಶ ಶುಲ್ಕವನ್ನು 9611455151 ಕಳುಹಿಸಿ ಕೊಡಬೇಕು. ಪ್ರಬಂಧ ಕಳುಹಿಸಲು 18—11—2022 ಕೊನೆಯ ದಿನಾಂಕವಾಗಿದೆ.


ಸ್ಪರ್ಧೆಯ ನಿಯಮಗಳು:

*ಕನ್ನಡ ಭಾಷೆಯಲ್ಲೇ ಬರೆಯಬೇಕು. 1500 ಪದಗಳಿಗೆ ಮೀರದಂತೆ ಯಾವುದಾದರೂ ಒಂದು ವಿಷಯದ ಮೇಲೆ ಬರೆಯಬೇಕು. ಸ್ವ—ಹಸ್ತಾಕ್ಷರದಿಂದ ಬರೆದಿರಬೇಕು ಹಾಗೂ ಸ್ಪಷ್ಟವಾಗಿ ಓದುವಂತಿರಬೇಕು.

*ಪ್ರಬಂಧದ ಮೊದಲ ಪುಟದಲ್ಲಿ ಹೆಸರು, ವಿದ್ಯಾರ್ಹತೆ, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ, ಇ—ಮೇಲ್, ಸಂಪೂರ್ಣ ವಿಳಾಸ ಬರೆಯಬೇಕು. ಎರಡನೇ ಪುಟದಿಂದ ಪ್ರಬಂಧ ಬರೆಯಲು ಆರಂಭಿಸಬೇಕು.

*ಪ್ರಬಂಧದ ಯಾವುದೇ ಭಾಗದಲ್ಲಿಯೂ ಪುಟದ ಯಾವುದೇ ಸ್ಥಳದಲ್ಲಿಯೂ ತಮ್ಮ ಜಾತಿ, ಧರ್ಮ, ಲಿಂಗ ಹಾಗೂ ಪ್ರಾದೇಶಿಕತೆ ಬಗ್ಗೆ ಗುರುತು ಮಾಡಿರಬಾರದು.

*ಪ್ರಬಂಧಗಳನ್ನು ಐಎಎಸ್ ತರಬೇತುದಾರರು ಮತ್ತು ನುರಿತ ತಜ್ಞರಿಂದ ಮೌಲ್ಯಮಾಪನ ಮಾಡಿಸಲಾಗುವುದು.

*ಈ ಮೇಲಿನ ಯಾವುದೇ ಷರತ್ತುಗಳನ್ನು ಪಾಲಿಸದಿದ್ದಲ್ಲಿ ನಿಮ್ಮ ಪ್ರಬಂಧವನ್ನು ಮೌಲ್ಯಮಾಪನ ಮಾಡಲಾಗುವುದಿಲ್ಲ. ಮೌಲ್ಯ ಮಾಪಕರ ತೀರ್ಮಾನ ಅಂತಿಮವಾಗಿರುತ್ತದೆ.

*ಪ್ರಬಂಧವನ್ನು ಖುದ್ದಾಗಿ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

AKKA IAS ACADEMY
No: 1235, 8th Cross, 4th Main, Near Main Bus Stop, Near ICICI Bank Chandra Layout, Bengaluru—560040

Mob: 9611455151, 7349373737

ಅಥವಾ

AKKA IAS ACADEMY
1St Floor, 555/T, New Kantharaj Urs Road, Above Kavitha Bakery, TK Layout 4th Stage, Kuvempu Nagara, Mysuru- 570023

Mob: 9741478249

ಪ್ರಬಂಧವನ್ನು ಪಿಡಿಎಫ್ ಮೂಲಕ ಕಳುಹಿಸುವುದಾದರೆ, ಇ—ಮೇಲ್ akkaiasacademy@gmail.com ಗೆ ಕಳುಹಿಸಬಹುದು. ವಾಟ್ಸಾಪ್ ಮೂಲಕ ಕಳುಹಿಸುವುದಾದರೆ, 9611455151 ಅಥವಾ 7349373737ಗೆ ಕಳುಹಿಸಬಹುದು.


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ