ಉತ್ತಮ ಸಮಾಜ ನಿರ್ಮಾಣಕ್ಕೆ ಸಾಮಾಜಿಕ ಹೊಣೆಗಾರಿಕೆ ಮುಖ್ಯ: ಸಾಹಿತಿ ಪ್ರೊ.ಕಾಳೇಗೌಡ ನಾಗಾವರ
ಬೆಂಗಳೂರು: ಸಮರ್ಥ, ಶ್ರೇಷ್ಠ ಹಾಗೂ ಹೊಸ ಭಾರತ ಕಟ್ಟಲು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಲೋಹಿಯಾ ಕುರಿತ ಬರಹಗಳನ್ನು ಯುವ ಪೀಳಿಗೆ ಹಾಗೂ ಅಧಿಕಾರ ವರ್ಗ ಓದಿಕೊಳ್ಳುವುದು ಅಗತ್ಯ ಎಂದು ಸಾಹಿತಿ ಪ್ರೊ.ಕಾಳೇಗೌಡ ನಾಗಾವರ ಹೇಳಿದರು.
ಅಕ್ಕ IAS ಅಕಾಡೆಮಿ ನಗರದಲ್ಲಿ ಆಯೋಜಿಸಿದ್ದ, ಕನ್ನಡ ರಾಜ್ಯೋತ್ಸವ ಹಾಗೂ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಸಾಕಷ್ಟು ಬದಲಾವಣೆಗಳು ಆಗಿದ್ದರೂ, ಮತ್ತಷ್ಟು ಆರೋಗ್ಯಕರ ಬದಲಾವಣೆಗಳು ನಡೆಯಬೇಕಿದೆ, ಉತ್ತಮ ಸಮಾಜ ನಿರ್ಮಾಣ ಆಗಬೇಕಾದರೆ, ಸಾಮಾಜಿಕ ಹೊಣೆಗಾರಿಕೆ ಮುಖ್ಯ. ಇಂದು ಅವಕಾಶಗಳು ಸಾಕಷ್ಟಿವೆ, ಅನ್ಯಾಯ ಒಪ್ಪಿಕೊಳ್ಳದೇ ಪ್ರತಿಭಟಿಸಬೇಕು ಎಂದರು.
ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಉದ್ಘಾಟನಾ ಭಾಷಣ ಮಾಡಿದರು. ಕೋಲಾರ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಯು.ಸೋನಿಯಾ ವರ್ಣೇಕರ್, ಅಕಾಡೆಮಿ ಮಾರ್ಗದರ್ಶಕ ಬಸವರಾಜ್ ವಾಲೀಕಾರ್ ಹಾಜರಿದ್ದರು.
ಯುಪಿಎಸ್ ಸಿ ಎಲ್ಲಾ ಪ್ರಶ್ನೆಪತ್ರಿಕೆ ಕನ್ನಡದಲ್ಲೇ ಇರಲಿ: ಡಾ.ಶಿವಕುಮಾರ್
ಕೇಂದ್ರ ಮಟ್ಟದ ಎಲ್ಲ ಪರೀಕ್ಷೆಗಳು ಕನ್ನಡ ಮಾಧ್ಯಮದಲ್ಲಿ ಸಿಗುವಂತಾಗಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದು ಅಕ್ಕ ಐಎಎಸ್ ಅಕಾಡೆಮಿ ಸಂಸ್ಥಾಪಕರು, ನಿರ್ದೇಶಕರಾದ ಡಾ.ಶಿವಕುಮಾರ್ ಹೇಳಿದರು.
ಕೇಂದ್ರ ಮಟ್ಟದ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಹಿಂದಿ ಮತ್ತು ಇಂಗ್ಲಿಷ್ ನಲ್ಲಿರುತ್ತದೆ. ಅದರಿಂದಾಗಿ ಉತ್ತರ ಭಾರತದವರಿಗೆ ತುಂಬಾ ಅನುಕೂಲ ಆಗುತ್ತಿದೆ. ದಕ್ಷಿಣ ಭಾರತ ನಮಗೆ ತುಂಬಾ ಕಷ್ಟವಾಗ್ತಿದೆ. ಯುಪಿಎಸ್ ಸಿ ಎಲ್ಲ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿರಲಿ ಎಂದು ನಾವು ಒತ್ತಾಯಿಸುತ್ತಿದ್ದೇವೆ ಎಂದರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ರಿಯಾಯಿತಿ ದರದಲ್ಲಿ ತರಬೇತಿ:
ರಾಜ್ಯಮಟ್ಟದಲ್ಲಿ ಪ್ರಬಂಧ ಸ್ಪರ್ಧೆ ವಿಚಾರವಾಗಿ ಇದೇ ವೇಳೆ ಪ್ರತಿಕ್ರಿಯಿಸಿದ ಡಾ.ಶಿವಕುಮಾರ್, ನೂರಾರು ವಿದ್ಯಾರ್ಥಿಗಳು ಪ್ರಬಂಧ ಬರೆದಿದ್ರು. ನಾವು ಮೂರು ಜನರಿಗೆ ಪ್ರಥಮ, ದ್ವಿತೀಯ ತೃತೀಯ ಬಹುಮಾನ ನೀಡಿದ್ವಿ, 10 ಜನರಿಗೆ ಸಮಾಧಾನಕರ ಬಹುಮಾನ ನೀಡಿದ್ದೇವೆ. ಪ್ರಬಂಧ ಬರೆದ ಎಲ್ಲರಿಗೂ ಪ್ರಶಂಸನೀಯ ಪತ್ರ ನೀಡಿದ್ದೇವೆ. ಕನ್ನಡವನ್ನು ಬರೆಯುವ ಮತ್ತು ಓದುವ ಹವ್ಯಾಸವನ್ನು ವಿದ್ಯಾರ್ಥಿಗಳಲ್ಲಿ ಹೆಚ್ಚಿಸುವ ಉದ್ದೇಶದಿಂದ ಈ ಪ್ರಬಂಧ ಸ್ಪರ್ಧೆ ಆಯೋಜಿಸಿದ್ದೆವು. ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಐಎಎಸ್ ತರಬೇತಿ ನೀಡುವುದು ನಮ್ಮ ಉದ್ದೇಶವಾಗಿತ್ತು ಎಂದು ತಿಳಿಸಿದರು.
ಪ್ರಬಂಧ ಸ್ಪರ್ಧೆಯ ವಿಜೇತರು:
- ಪ್ರಥಮ ಬಹುಮಾನ: ವರ್ಷಿಣಿ ಆರ್.
- ದ್ವಿತೀಯ ಬಹುಮಾನ: ಪ್ರಮೋದ್ ಎಚ್.ಆರ್.
- ತೃತೀಯ ಬಹುಮಾನ: ಪೂಜಾ
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka