ಹೆರಿಗೆಯಾಗಿದ್ದ ಅಕ್ಕನ ಆರೈಕೆಗೆ ಹೋದ ತಂಗಿಯ ಮೇಲೆ ಭಾವನಿಂದಲೇ ಅತ್ಯಾಚಾರ!
27/06/2021
ಜೈಪುರ: ಮಗುವಿಗೆ ಜನ್ಮ ನೀಡಿದ್ದ ಅಕ್ಕನ ಆರೈಕೆ ಮಾಡಲು ಹೋಗಿದ್ದ ತಂಗಿಯ ಮೇಲೆ ಭಾವನೇ ಅತ್ಯಾಚಾರ ನಡೆಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ಇದೀಗ ಆರೋಪಿ ಭಾವನ ವಿರುದ್ಧ ನಾದಿನಿ ದೂರು ನೀಡಿದ್ದಾಳೆ.
ರಾಜಸ್ಥಾನದ ಭಾರತ್ ಪುರದಲ್ಲಿ ಈ ಘಟನೆ ನಡೆದಿದ್ದು, ಇತ್ತೀಚೆಗೆ ಅಕ್ಕನಿಗೆ ಹೆರಿಗೆಯಾಗಿತ್ತು. ಆಕೆಯ ಆರೈಕೆಗಾಗಿ 21 ವರ್ಷ ವಯಸ್ಸಿನ ತಂಗಿಯನ್ನು ತಂದೆ-ತಾಯಿ ಕಳುಹಿಸಿದ್ದರು. ಆದರೆ ಅಲ್ಲಿ ಹೋದ ಬಳಿಕ ಭಾವ ತಂಗಿಯ ಮೇಲೆ ಕಣ್ಣಿಟ್ಟಿದ್ದ.
ನಾದಿನಿಗೆ ಟೀ ಕೊಡುವ ನೆಪದಲ್ಲಿ ಬಂದ ಬಾವ ಟೀಗೆ ಮತ್ತೌಷಧಿ ಬೆರೆಸಿ ನೀಡಿದ್ದಾನೆ. ಇದರಿಂದಾಗಿ ಆಕೆಯ ಪ್ರಜ್ಞೆ ಕಳೆದುಕೊಂಡಿದ್ದು, ಈ ವೇಳೆ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಮತ್ತು ಇಳಿದ ಬಳಿಕ ಸಂತ್ರಸ್ತೆಗೆ ವಿಚಾರ ತಿಳಿದು ಬಂದಿದೆ. ಆಕೆ ಮನೆಯವರ ಸಹಾಯದಿಂದ ಮಹಿಳಾ ಠಾಣೆಯ ಮೆಟ್ಟಿಲೇರಿದ್ದು, ಅಲ್ಲಿ ಭಾವನ ವಿರುದ್ಧ ದೂರು ನೀಡಿದ್ದಾಳೆ. ಇದೀಗ ಆರೋಪಿಯ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.