ಅಕ್ಕನ ಜೊತೆ ಜಗಳವಾಡಿದ್ದಕ್ಕೆ ಭಾವನನ್ನು ಕೊಂದೇ ಬಿಟ್ಟ!

15/02/2021

ಬೆಂಗಳೂರು:  ಅಕ್ಕನ ಜೊತೆ ಜಗಳ ಮಾಡಿದಕ್ಕೆ ತನ್ನ ಭಾವವನ್ನು ಭೀಕರವಾಗಿ ಹತ್ಯೆ ಗೈದ ಘಟನೆ  ಬೆಂಗಳೂರಿನ ನಂದಿನಿ ಬಡಾವಣೆಯ ಕಂಠೀರವ ನಗರ ರಸ್ತೆಯಲ್ಲಿ ನಡೆದಿದೆ.

ಅಜೀಮ್ ಉಲ್ಲಾ ಹತ್ಯೆಗೀಡಾದ ವ್ಯಕ್ತಿಯಾಗಿದ್ದಾನೆ. ಈತ ನಂದಿನ ಬಡಾವಣೆಯಲ್ಲಿ ವಾಸವಾಗಿದ್ದ. ಪತ್ನಿ ಜೊತೆಗೆ ಪದೇ ಪದೇ ಜಗಳವಾಡಿ ರಾದ್ದಾಂತ ಮಾಡುತ್ತಿದ್ದ ಎಂದು ಹೇಳಲಾಗಿದೆ. ಅಕ್ಕನ ಕಷ್ಟ ನೋಡಲು ಸಾಧ್ಯವಾಗದೇ ಖಾದರ್ ಭಾನುವಾರ ರಾತ್ರಿ ಭಾವನನ್ನು ಕೊಂದೇ ಬಿಟ್ಟಿದ್ದಾನೆ.

ಸಂಜೆ ಮನೆಗೆ ಬಂದ ಅಜೀಮ್ ಪತ್ನಿ ಜೊತೆಗೆ ಎಂದಿನಂತೆ ಜಗಳ ಆರಂಭಿಸಿದ್ದಾನೆ.  ಈ ಸಂದರ್ಭ ಇಲ್ಲಿನ ಕೂಲಿ ನಗರದಲ್ಲಿದ್ದ ಖಾದರ್  ಗೆ ಈ ವಿಚಾರ ತಿಳಿದಿದೆ. ಆತ ತಕ್ಷಣ ತನ್ನ ಗೆಳೆಯರನ್ನು ಕರೆದುಕೊಂಡು ಅಕ್ಕನ ಮನೆಗೆ ಬಂದಿದ್ದಾನೆ.

ರಾತ್ರಿಯ ವೇಳೆ  ಅಜೀಮ್ ಹಾಗೂ ಖಾದರ್  ನಡುವೆ ಜಗಳ ಆರಂಭವಾಗಿದೆ. ರಾತ್ರಿ 11: 30ರ ವೇಳೆಗೆ ಇವರ ಜಗಳ ತಾರಕಕ್ಕೇರಿದ್ದು,  ಮಾತಿಗೆ ಮಾತು ಬೆಳೆದು ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಅಜೀಮ್ ನ ತಲೆಯನ್ನು ಜಜ್ಜಿ ಹತ್ಯೆ ಮಾಡಿರುವ ಖಾದರ್ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಇದನ್ನು ಗಮನಿಸಿದ ಸಾರ್ವಜನಿಕರು  ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.   ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ. ಇನ್ನೂ ಖಾದರ್ ನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version