ಅಕ್ಕನಿಗೆ ಬೆಂಕಿ ಹಚ್ಚಿದ ತಂಗಿ: ಉರಿಯುತ್ತಿರುವ ಬೆಂಕಿಯ ಜೊತೆ ತಂಗಿಯನ್ನು ತಬ್ಬಿಕೊಂಡ ಅಕ್ಕ; ಇಬ್ಬರ ಸ್ಥಿತಿ ಗಂಭೀರ - Mahanayaka
1:09 AM Wednesday 11 - December 2024

ಅಕ್ಕನಿಗೆ ಬೆಂಕಿ ಹಚ್ಚಿದ ತಂಗಿ: ಉರಿಯುತ್ತಿರುವ ಬೆಂಕಿಯ ಜೊತೆ ತಂಗಿಯನ್ನು ತಬ್ಬಿಕೊಂಡ ಅಕ್ಕ; ಇಬ್ಬರ ಸ್ಥಿತಿ ಗಂಭೀರ

fire
01/02/2022

ತೆಲಂಗಾಣ: ಆಸ್ತಿ ಸಂಬಂಧ ಅಕ್ಕನ ಮೇಲೆ ಕಿರಿಯ ಸಹೋದರಿಯೋರ್ವಳು ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿರುವ ಘಟನೆ ತೆಲಂಗಾಣದ ಕಾಮಾರೆಡ್ಡಿ ಜಿಲ್ಲೆಯ ನಡೆದಿದೆ.

ತವರು ಮನೆ ಆಸ್ತಿ ವಿಚಾರದಲ್ಲಿ ಅಕ್ಕ- ತಂಗಿಯರ ಮಧ್ಯೆ ವಾಗ್ವಾದ ನಡೆಯುತ್ತಿದ್ದು, ಸೋಮವಾರ ವರಲಕ್ಷ್ಮಿ ಮನೆಗೆ ಸಹೋದರಿ ರಾಜೇಶ್ವರಿ ತೆರಳಿದ್ದಾರೆ. ಅವರಿಬ್ಬರ ಮಧ್ಯೆ ಆಸ್ತಿ ವಿಚಾರಕ್ಕಾಗಿ ಜಗಳ ನಡೆದಿದೆ. ಆವೇಶಕ್ಕೊಳಗಾದ ರಾಜೇಶ್ವರಿ ತನ್ನ ಜೊತೆ ತಂದಿದ್ದ ಪೆಟ್ರೋಲ್​ನ್ನು ವರಲಕ್ಷ್ಮಿ ಮೇಲೆ ಸುರಿದು ಬೆಂಕಿ ಹಚ್ಚಿದ್ದಾಳೆ. ಈ ವೇಳೆ ಬೆಂಕಿಯಿಂದ ಉರಿಯುತ್ತಿರುವ ವರಲಕ್ಷ್ಮಿ ತಕ್ಷಣ ಸಹೋದರಿ ರಾಜೇಶ್ವರಿಯನ್ನು ಅಪ್ಪಿಕೊಂಡಿದ್ದಾರೆ.

ತಕ್ಷಣ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿ, ಸುಟ್ಟಗಾಯಗಳಿಂದ ಗಂಭೀರ ಸ್ಥಿತಿಯಲ್ಲಿರುವ ಗಾಯಾಳುಗಳನ್ನು ಹೈದರಾಬಾದ್ ​ನ ಉಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬುದ್ಧಿಮಾಂದ್ಯ ಮಹಿಳೆಯ ಮೇಲೆ ಅತ್ಯಾಚಾರ; ಪೊಲೀಸ್ ಸಬ್ಇನ್ಸ್ ಪೆಕ್ಟರ್ ಗೆ 20 ವರ್ಷ ಕಠಿಣ ಶಿಕ್ಷೆ

ಇಂಟರ್​ ನೆಟ್​​ ನಲ್ಲಿ ತನ್ನ ನಗ್ನ ವಿಡಿಯೋ ನೋಡಿ ಶಾಕ್ ಆದ ಬೆಂಗಳೂರಿನ ಯುವಕ

4 ವರ್ಷದ ಬಾಲಕಿ ಮೇಲೆ 14 ವರ್ಷದ ಬಾಲಕನಿಂದ ಲೈಂಗಿಕ ಕಿರುಕುಳ!

ಮುಂದಿನ 25 ವರ್ಷಗಳ ದೂರದೃಷ್ಟಿಯ ಬಜೆಟ್‌: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌

ಇತ್ತೀಚಿನ ಸುದ್ದಿ