ಅಕ್ಕಿ ಕೇಳಿದ್ದಕ್ಕೆ “ಸತ್ತೋಗಿ” ಎಂದು ಹೇಳಿದ ಆ(ಹಂ)ಹಾರ ಸಚಿವ ಉಮೇಶ್ ಕತ್ತಿ - Mahanayaka

ಅಕ್ಕಿ ಕೇಳಿದ್ದಕ್ಕೆ “ಸತ್ತೋಗಿ” ಎಂದು ಹೇಳಿದ ಆ(ಹಂ)ಹಾರ ಸಚಿವ ಉಮೇಶ್ ಕತ್ತಿ

umesh katti
28/04/2021

ಬೆಳಗಾವಿ: ರೈತ ಕೇಳಿದ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದ ಆ(ಹಂ)ಹಾರ ಸಚಿವ ಉಮೇಶ್ ಕತ್ತಿ ರಾಜ್ಯದ ಜನತೆಗೆ “ಸತ್ತು ಹೋಗಿ” ಎಂದು ಹೇಳಿಕೆ ನೀಡಿದ್ದು, ಇಂತಹವರೆಲ್ಲ ಸಚಿವರಾದರೆ ರಾಜ್ಯದ ಜನರ ಪರಿಸ್ಥಿತಿ ಏನು ಎಂದು ಪ್ರಶ್ನಿಸುವಂತಾಗಿದೆ.

ಈಶ್ವರ ಆರ್ಯ ಎಂಬ ರೈತ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದ ಉಮೇಶ್ ಕತ್ತಿ ದುರಾಂಹಕಾರಿ ಹೇಳಿಕೆ ನೀಡಿದ್ದಾರೆ.  ಗದಗ ಜಿಲ್ಲೆಯ ಕುರ್ತಕೋಟಿ ಗ್ರಾಮದ ರೈತ ಸಂಘದ ಕಾರ್ಯಕರ್ತ ಈಶ್ವರ್, ಪಡಿತರ ಅಕ್ಕಿ ಕಡಿತಗೊಳಿಸಿರುವುದನ್ನು ಪ್ರಶ್ನಿಸಿದ್ದಾರೆ.

ರೈತನ ಪ್ರಶ್ನೆಗೆ ಉತ್ತರಿಸಿದ ಕತ್ತಿ,  ಉತ್ತರ ಕರ್ನಾಟಕದಲ್ಲಿ ಅಕ್ಕಿಯ ಜೊತೆಗೆ ಜೋಳ ಕೊಡುತ್ತೇವೆ. ಲಾಕ್ ಡೌನ್ ಸಂದರ್ಭದಲ್ಲಿ 5 ಕೆ.ಜಿ. ಅಕ್ಕಿಯನ್ನು ಕೇಂದ್ರ ಸರ್ಕಾರ ಕೊಡುತ್ತದೆ. ಮುಂದಿನ ತಿಂಗಳಿನಿಂದ ಅಕ್ಕಿ ಕೊಡಲಾಗುವುದು ಎಂದು ಉಮೇಶ್ ಕತ್ತಿ ಹೇಳಿದರು. ಸಚಿವರ ಉತ್ತರಕ್ಕೆ ತೃಪ್ತವಾಗದ ರೈತ, ಸರ್ಕಾರ ಲಾಕ್ ಡೌನ್ ಘೋಷಿಸಿದೆ ಅಲ್ಲಿಯವರೆಗೆ ಜನ ಸಾಯೋದಾ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಇದಕ್ಕೆ ಗರಂ ಆದ ಸಚಿವ, ಸತ್ತು ಹೋಗುವುದು ಒಳ್ಳೆಯದು. ಅದಕ್ಕಿಂತ ಮೊದಲು ಅಕ್ಕಿ ಮಾರಾಟ ಮಾಡುವ ದಂಧೆ ನಿಲ್ಲಿಸಿ ಎಂದು ಹೇಳಿದ್ದಾರೆ. ಇನ್ನು ನನಗೆ ಕಾಲ್ ಮಾಡಬೇಡಿ ಎಂದು ಕಾಲ್ ಕಟ್ ಮಾಡಿದ್ದಾರೆ. ಸಚಿವರ ಅಹಂಕಾರದ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶವನ್ನುಂಟು ಮಾಡಿದೆ.

ಇನ್ನು ಆಡಿಯೋ ವೈರಲ್ ಆಗುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿರುವ ಸಚಿವ ಕತ್ತಿ,  ಇಲಾಖೆಯಲ್ಲಿ ಯಾವ ಯೋಜನೆ ಇದೆಯೋ ಅದನ್ನು ನಾನು ಹೇಳಿದ್ದೇನೆ. ಆ ವ್ಯಕ್ತಿ ಸತ್ತೋಗೋದಾ ಎಂದು ಕೇಳಿದ. ಅದಕ್ಕೆ ನಾನು ಸತ್ತು ಹೋಗಿ ಎಂದು ಹೇಳಿದ್ದೇನೆ.  ಅದಕ್ಕಿಂತ ಬೇರೆ ಇನ್ನೇನು ಹೇಲಲಿ. ಬೇಡ ಎನ್ನುವ ದೊಡ್ಡ ಮನಸ್ಸು ನನಗಿಲ್ಲ ಎಂದು ಹೇಳಿದ್ದಾರೆ. ಇದರ ಜೊತೆಗೆ ರಾಜ್ಯದ ಜನತೆ ಊಟ ಸಿಗದೇ ಸಾಯಬಾರದು. ಮುಖ್ಯಮಂತ್ರಿಗಳು ನನಗೆ ಒಳ್ಳೆಯ ಖಾತೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ