ಅಕ್ರಾ ಬಳಿ ಭಾರೀ ಸ್ಫೋಟ: 17 ಸಾವು, 59 ಮಂದಿಗೆ ಗಾಯ
ಅಕ್ರಾ(ಘಾನಾ): ಪಶ್ಚಿಮ ಆಫ್ರಿಕಾದ ಘಾ ನಾ ದೇಶದ ರಾಜಧಾನಿ ಅಕ್ರಾ ದಿಂದ 300 ಕಿ.ಮೀ. ದೂರದಲ್ಲಿ ಬೊಗೊ ಸೊ ಎಂಬ ನಗರದ ಹತ್ತಿರ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 17 ಮಂದಿ ಮೃತಪಟ್ಟು 59 ಮಂದಿ ಗಾಯಗೊಂಡಿದ್ದಾರೆ.
ಸ್ಫೋಟಕಗಳನ್ನು ಹೊತ್ತ ಟ್ರಕ್ ಬೈಕ್‌ಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಸ್ಫೋಟದಿಂದಾಗಿ ಸುತ್ತಮುತ್ತಲ ಹಲವು ಕಟ್ಟಡಗಳಿಗೆ ಹಾನಿಯುಂಟಾಗಿದ್ದು, ಕೆಲವು ಧರೆಗುರುಳಿದೆ.
ಸ್ಫೋಟದಿಂದ ದಟ್ಟ ಹೊಗೆ ಹೊರಸೂಸಿದ್ದು ಸ್ಥಳೀಯರು ಉಸಿರುಗಟ್ಟುವ ವಾತಾವರಣದಲ್ಲಿ ಹೊರಗೆ ಓಡುತ್ತಿದ್ದಾರೆ. ದಟ್ಟ ಕಾರ್ಮೋಡ ಕವಿದು ಸ್ಥಳಕ್ಕೆ ಆಗಮಿಸಿದ ರಕ್ಷಣಾ ಪಡೆ ಸಿಬ್ಬಂದಿಗೆ ರಕ್ಷಣಾ ಕಾರ್ಯ ನಡೆಸಲು ಹರಸಾಹಸ ಪಡಬೇಕಾಯಿತು.
ಇದುವರೆಗೆ 17 ಮಂದಿ ಮೃತರಾಗಿರುವುದು ದೃಢಪಟ್ಟಿದೆ. ಗಾಯಗೊಂಡ 59 ಮಂದಿಯನ್ನು ರಕ್ಷಿಸಲಾಗಿದೆ ಎಂದು ಘಾನಾ ಸರ್ಕಾರದ ಮಾಹಿತಿ ಸಚಿವ ಕೊಜೊ ಒಪ್ಪೊಂಗ್ ಕ್ರುಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಘಾನಾ ಅಧ್ಯಕ್ಷ ನಾನ ಅಕುಫೊೃ-ಅಡ್ಡೊ ಈ ಘಟನೆಯನ್ನು ತೀರಾ ದುರದೃಷ್ಟಕರ ಮತ್ತು ದುರಂತ ಎಂದು ಬಣ್ಣಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮಹಿಳೆಯ ಕೊಲೆ ಪ್ರಕರಣ; ಬಿಜೆಪಿ ಕೌನ್ಸಿಲರ್ ಬಂಧನ
ಹಾಡಹಗಲೇ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ಪಿಎಸ್ ಐ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ: ರಚನಾ ಹನುಮಂತ ರಾಜ್ಯಕ್ಕೆ ಪ್ರಥಮ
ಚಲಿಸುತ್ತಿದ್ದ ಬಿಎಂಟಿಸಿ ಬಸ್ ನಲ್ಲಿ ಆಕಸ್ಮಿಕ ಬೆಂಕಿ
ಲಾಹೋರ್ ಮಾರುಕಟ್ಟೆಯಲ್ಲಿ ಭಾರೀ ಸ್ಫೋಟ; 3 ಸಾವು, 20 ಮಂದಿಗೆ ಗಾಯ