ಕಾರಿನಲ್ಲಿ ಅಕ್ರಮವಾಗಿ ಗೋಸಾಗಾಟ: ಐವರು ಆರೋಪಿಗಳ ಬಂಧನ

arrest
04/01/2023

ಬೆಳ್ತಂಗಡಿ: ಅಳದಂಗಡಿ ಸಮೀಪ ಒಮ್ನಿ ಕಾರಿನಲ್ಲಿ ಅಕ್ರಮವಾಗಿ ಗೋಸಾಗಾಟ ನಡೆಸುತ್ತಿದ್ದ ಪ್ರಕರಣವೊಂದನ್ನು  ಬುಧವಾರ ಬೆಳಗ್ಗಿನ ಜಾವ ವೇಣೂರು ಪೊಲೀಸರು ಪತ್ತೆ ಹಚ್ಚಿದ್ದು ಐವರು ಆರೋಪಿಗಳನ್ನು ಬಂಧಿಸಿ ಐದು ಜಾನುವಾರುಗಳನ್ನು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂದಿತ ಆರೋಪಿಗಳು ಕರಾಯ ನಿವಾಸಿ ತೌಸೀಫ್( 32), ಪುತ್ತಿಲ ನಿವಾಸಿ ಉಸ್ಮಾನ್(55), ಉಪ್ಪಿನಂಗಡಿ ವಳಾಲು ನಿವಾಸಿ ಇಕ್ಬಾಲ್ (34), ಕರಾಯ ನಿವಾಸಿ ಇರ್ಫಾನ್(25), ಕರಾಯ ನಿವಾಸಿ ಅನಸ್(23) ಎಂಬವರಾಗಿದ್ದಾರೆ.

ವೇಣೂರು ಎಸ್.ಐ. ಸೌಮ್ಯ ಹಾಗೂ ತಂಡ ರಾತ್ರಿಯ ವೇಳೆ ಗಸ್ತು ತಿರುಗುತ್ತಿದ್ದ ವೇಳೆ ಅನುಮಾನಾಸ್ಪದವಾಗಿ ದ್ವಿಚಕ್ರ ವಾಹನದಲ್ಲಿ ಬಂದವರನ್ನು ವಿಚಾರಿಸಿದ್ದು, ಈ ವೇಳೆ ಅವರು ಹಾಗೂ ಇತರರು ಸೇರಿ ಅಕ್ರಮ ಗೋ ಸಾಗಾಟ ನಡೆಸುತ್ತಿರುವ ವಿಚಾರ ತಿಳಿದಿದ್ದು ,ಈ ಹಿನ್ನೆಲೆಯಲ್ಲಿ ಓಮ್ನಿ ಕಾರನ್ನು ತಡೆದು ಪರಿಶೀಲಿಸಿದಾಗ ಕಾರಿನಲ್ಲಿ ಐದು ಜಾನುವಾರುಗಳನ್ನು ಅತ್ಯಂತ ಹಿಂಸಾತ್ಮಕವಾಗಿ  ತುಂಬಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು ಕೂಡಲೇ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಓಮ್ನಿಯಲ್ಲಿ ಕೈ ಕಾಲುಗಳನ್ನು ಕಟ್ಟಿ ಅತ್ಯಂತ ಹಿಂಸಾತ್ಮಕಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.

ವಶಪಡಿಸಿಕೊಂಡಿರುವ ಒಟ್ಟು ಸೊತ್ತುಗಳ ಮೌಲ್ಯ 1,90,000 ಎಂದು ಅಂದಾಜಿಸಲಾಗಿದ್ದು ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version