ಅಕ್ರಮವಾಗಿ ಮರ ಕಡಿದ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ಕೊಕ್ಕಡ: ಶಿಬಾಜೆ ರಕ್ಷಿತಾರಣ್ಯದ ಕಜೆ ಎಂಬಲ್ಲಿ ಅಕ್ರಮ ಮತ್ತಿ (ಬಣ್ಪು) ಮತ್ತು ಹೆಬ್ಬಲಸು ಮರ ಕಡಿದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ.
ಶಿಬಾಜೆ ಗ್ರಾಮದ ಕಜೆ ನಿವಾಸಿ ದಿನೇಶ್ (51) ಹಾಗೂ ಕಳೆಂಜ ಗ್ರಾಮದ ಕಾಯಡ ನಿವಾಸಿ ಜಿತೇಂದ್ರ (25) ಬಂಧಿಸಿ, ತಲೆ ಮರೆಸಿಕೊಂಡಿದ್ದ ಶಿಬಾಜೆಯ ಉಮೇಶ್ (35), ರೆಖ್ಯದ ವಿಜಯ್ (45)ನನ್ನು ಸೋಮವಾರ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಉಪ ವಲಯರಣ್ಯಾಧಿಕಾರಿ ಸಂತೋಷ್ ತಡ್ಲಗಿ ಹಾಗೂ ಅರಣ್ಯ ರಕ್ಷಕ ನಿಂಗಪ್ಪ ಅವಾರಿ, ಪ್ರಶಾಂತ್ ಮಾಳಗಿ, ರಸೂಲ್, ಸುನಿಲ್ ನಾಯಕ್, ಅರಣ್ಯ ವೀಕ್ಷಕ ದಾಮೋದರ್, ವಾಹನ ಚಾಲಕ ಕಿಶೋರ್ ಬಾಗಿಯಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಉಪ್ಪಿನಂಗಡಿ ವಲಯಾರಣ್ಯಾದಿಕಾರಿ ಎದುರು ಹಾಜರುಪಡಿಸಲಾಗಿದ್ದು, ಸ್ಥಳದ ಮಹಜರು ನಡೆಸಲಾಗಿದೆ.
ವಲಯಾರಣ್ಯಾಧಿಕಾರಿ ಮಧುಸೂದನ್ ಮತ್ತು ಸಿಬ್ಬಂದಿ ವರ್ಗ ಮರ ಕೊಯ್ಯುವ ಒಂದು ಯಂತ್ರ, ಕತ್ತಿ, ಕೊಠಡಿ ಮೊದಲಾದವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka