ಅಕ್ರಮ ಮರಳು ಸಾಗಾಟ: ವಾಹನ ಸಹಿತ 8 ಮಂದಿಯ ಬಂಧನ

mangalore
17/09/2022

ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಸಹಿತ  8 ಮಂದಿಯನ್ನು ಬಂಧಿಸಿದ ಘಟನೆ ಮಂಗಳೂರು ನಗರದ ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿ ಬಳಿ ನಡೆದಿದೆ.

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಉಳ್ಳಾಲ ಠಾಣಾ ಇನ್ಸ್ ಪೆಕ್ಟರ್ ಸಂದೀಪ್ ನೇತೃತ್ವದ ತಂಡ ಮರಳು ಸಾಗಾಟದ ವಾಹನವನ್ನು ವಶಪಡಿಸಿಕೊಂಡಿದೆ‌.

ಬಂಧಿತ ಆರೋಪಿಗಳನ್ನು ತಲಪಾಡಿ ನಿವಾಸಿ ರಿಯಾಝ್ (28), ಕೆ.ಸಿ.ರೋಡ್ ನಿವಾಸಿ ಅಬೂಬಕ್ಕರ್ (53), ಸೋಮೇಶ್ವರ ಗ್ರಾಮ ನಿವಾಸಿ ರಘುನಾಥ (40), ತಲಪಾಡಿ ಚೆಕ್ ಪೋಸ್ಟ್ ನಿವಾಸಿ ರಾಜೇಶ್ (50), ಮುತ್ತಲಿಬ್ ಅಲಿಯಾಸ್ ಮುತ್ತಲಿ(40) ಕುದ್ರು ನಿವಾಸಿಗಳಾದ ಅತುಲ್ (22), ರಾಮದಾರಿ(28) ಮತ್ತು ಪಂಕಜ್ (24) ಎಂದು ಗುರುತಿಸಲಾಗಿದೆ.

ಬಂಧಿತರು ತಲಪಾಡಿ ಕುದ್ರು ಕಡೆಯಿಂದ ಅಕ್ರಮವಾಗಿ ಮರಳು ಸಂಗ್ರಹ ಮಾಡಿ ಅದನ್ನು ಲಾರಿಗೆ ಲೋಡ್ ಮಾಡಿದ ಬಳಿಕ ತೆಂಗಿನ ಗರಿಯಿಂದ ಮುಚ್ಚಿ ಕೇರಳ ಕಡೆ ಸಾಗಾಟ ಮಾಡುತ್ತಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ

Exit mobile version