ಅಕ್ರಮ ಒತ್ತುವರಿ ಜಾಗದಲ್ಲಿ ನೂರಾರು ಗುಡಿಸಲು ನಿರ್ಮಿಸಿದ ಕರ್ನಾಟಕ ದಲಿತ ರೈತ ಸಂಘ! - Mahanayaka
8:33 PM Wednesday 11 - December 2024

ಅಕ್ರಮ ಒತ್ತುವರಿ ಜಾಗದಲ್ಲಿ ನೂರಾರು ಗುಡಿಸಲು ನಿರ್ಮಿಸಿದ ಕರ್ನಾಟಕ ದಲಿತ ರೈತ ಸಂಘ!

dalitha raitha dene
25/06/2021

ಕೋಲಾರ: ಕೋಲಾರ ಜಿಲ್ಲೆಯ ಬಂಗಾರಪೇಟೆ ಹೊರವಲಯದ ಆನಂದಗಿರಿ ಬಳಿ ಇರುವ ಹನುಮಂತಪುರ ಸರ್ವೇ ನಂಬರ್ 22ರಲ್ಲಿ ವಿ.ಆರ್.ವೆಂಚರ್ಸ್ ಸುಮಾರು 20 ಎಕರೆಯಷ್ಟು ಸರ್ಕಾರಿ ಗೋಮಾಳ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ರೈತ ಸೇನೆ ಸಂಘಟನೆ ಈ ಜಾಗದಲ್ಲಿ ನೂರಾರು ಗುಡಿಸಲುಗಳನ್ನು ನಿರ್ಮಿಸಿದೆ.

ಈ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ ಎನ್ನುವ ಬಗ್ಗೆ  ಇಲ್ಲಿನ ಸಂಘಟನಾ ಮುಖಂಡರು ಹಾಗೂ ಸ್ಥಳೀಯರು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ, ಖಾಸಗಿ ಸಂಸ್ಥೆಯ ಪ್ರಭಾವದಿಂದಾಗಿ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿರಲಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.

ಇದೀಗ ಈ ಸ್ಥಳದಲ್ಲಿ ಕರ್ನಾಟಕ ದಲಿತ ರೈತ ಸೇನೆ ನೇತೃತ್ವದಲ್ಲಿ ಸ್ಥಳೀಯರು ಗುಡಿಸಲು ನಿರ್ಮಾಣ ಮಾಡಿದ್ದಾರೆ. ಈ ಮೂಲಕವಾಗಿ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ