ಅಕ್ರಮ ಸಂಬಂಧದಿಂದ ಜನಿಸಿದ ಮಗುವಿಗೆ ತಂದೆಯ ಆಸ್ತಿ ಪಾಲು ನೀಡಬೇಕು: ಹೈಕೋರ್ಟ್ - Mahanayaka
4:36 AM Wednesday 5 - February 2025

ಅಕ್ರಮ ಸಂಬಂಧದಿಂದ ಜನಿಸಿದ ಮಗುವಿಗೆ ತಂದೆಯ ಆಸ್ತಿ ಪಾಲು ನೀಡಬೇಕು: ಹೈಕೋರ್ಟ್

pregnant
08/01/2023

ಬೆಂಗಳೂರು:  ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 16 (1) ರ ಪ್ರಕಾರ, ಅಕ್ರಮ ಸಂಬಂಧದಿಂದ ಜನಿಸಿದ ಮಗುವನ್ನು  ಕಾನೂನುಬದ್ಧವೆಂದು ಪರಿಗಣಿಸಬೇಕು. ಆ ಮಗುವಿಗೆ ತಂದೆಯ ಆಸ್ತಿಯಲ್ಲಿ ಪಾಲು ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

ಬಾಲಕನ ತಂದೆ ಅಪಘಾತದಲ್ಲಿ ತೀರಿಕೊಂಡಿದ್ದು, ಇದೇ ವೇಳೆ ಅಕ್ರಮ ಸಂಬಂಧದಿಂದ ಜನಿಸಿದ 10 ವರ್ಷದ ಬಾಲಕನಿಗೆ ಮೋಟಾರು ವಾಹನ ಅಪಘಾತ ಪ್ರಕರಣದಲ್ಲಿ ಸಂದಾಯವಾಗಬೇಕಾದ ಒಟ್ಟು 13.28 ಲಕ್ಷ ರೂಪಾಯಿಗಳ ಪರಿಹಾರದಲ್ಲಿ ಶೇಕಡಾ 40 ಪಾಲನ್ನು ನೀಡಬೇಕೆಂದು ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ತೀರ್ಪು ನೀಡಿದ್ದಾರೆ.

ಬಾಲಕನಿಗೆ ಸಂದಾಯವಾಗಬೇಕಾದ ಹಣವನ್ನು ಠೇವಣಿ ಇರಿಸಿ, ಬಾಲಕನಿಗೆ 18 ವರ್ಷ ತುಂಬಿದ ಬಳಿಕ ಹಣ ಸಂದಾಯ ಮಾಡಬೇಕು ಎಂದು ಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.

ಇನ್ನೂ ಬಾಲಕನ ತಾಯಿಗೆ ಪರಿಹಾರ ನೀಡುವ ಆದೇಶ ನೀಡಲು ಕೋರ್ಟ್ ನಿರಾಕರಿಸಿದ್ದು, ಆಕೆಯ ಮೊದಲ ಪತಿಯೊಂದಿಗೆ ಜೀವನ ನಡೆಸುತ್ತಿರುವಾಗ ಮತ್ತೊಬ್ಬರ ಜೊತೆ ಲಿವ್ ಇನ್ ರಿಲೇಷನ್ ಷಿಪ್ ನಲ್ಲಿದ್ದರೆ ಆ ಸಂಬಂಧವನ್ನು ಪರಿಗಣಿಸಲಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ