ಮೀನು ಲಾರಿಯಲ್ಲಿ ಗೋವಾದಿಂದ 9 ಲಕ್ಷ ಮೌಲ್ಯದ ಅಕ್ರಮ ಸುರಪಾನ ಸಾಗಾಟ
16/02/2021
ಕಾರವಾರ: ಮೀನಿನ ಲಾರಿಯಲ್ಲಿ 1-2 ಅಲ್ಲ ಬರೋಬ್ಬರಿ 9 ಲಕ್ಷ ಮೌಲ್ಯದ ಅಕ್ರಮ ಸುರಪಾನ(ಮದ್ಯ) ಸಾಗಾಟ ಪತ್ತೆಯಾಗಿದ್ದು, ಲಾರಿ ಸಹಿತ ಓರ್ವನನ್ನು ಅಬಕಾರಿ ಸಿಬ್ಬಂದಿ ಕಾರವಾರದ ಮಾಜಾಳಿ ಗೇಟ್ ಬಳಿ ಬಂಧಿಸಿದ್ದಾರೆ.
ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡಲಾಗುತ್ತಿತ್ತು. ಲಾರಿಯಲ್ಲಿ ಸುಮಾರು 300ಕ್ಕೂ ಅಧಿಕ ಟ್ರೇಗಳು ಇರುದನ್ನು ಗಮನಿಸಿದಅಬಕಾರಿ ಸಿಬ್ಬಂದಿ ತಪಾಸಣೆ ನಡೆಸಿದ್ದು, ಈ ವೇಳೆ ಟ್ರೇಗಳ ಮಧ್ಯೆ 505 ಲೋಟರ್ ನ 9.13 ಲಕ್ಷ ರೂ. ಮೌಲ್ಯದ ಗೋವಾ ಮದ್ಯ ಪತ್ತೆಯಾಗಿದೆ.
ಲಾರಿಯನ್ನು ಆಂಧ್ರಪ್ರದೇಶ ಮೂಲದ ಸೂರ್ಯನಾರಾಯಣ ಮೂರ್ತಿ ಎಂಬಾತ ಚಲಾಯಿಸುತ್ತಿದ್ದ. ಈತನನ್ನು ಹಾಗೂ ಲಾರಿ ಹಾಗೂ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.